ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗವು ರಾಜ್ಯದ 224 ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟಿಸಿದೆ. ಬದಲಾವಣೆ, ತಿದ್ದುಪಡಿ ಇದ್ದರೆ ಫಾರ್ಮ್ 8 ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದ ಮುಂಚಿತ 10 ದಿನದ ಒಳಗಾಗಿ ಅರ್ಜಿ ಸಲ್ಲಿಸಬಹುದು. ಅಂತಿಮ ಪಟ್ಟಿಯಲ್ಲಿ ಈಗ 5,37,85,815 ಮತದಾರರು ಇದ್ದಾರೆ. ಇದರಲ್ಲಿ 2,69,33,750 ಪುರುಷರು, 2,68,47,145 ಮಹಿಳೆಯರು ಇದ್ದಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದರು. ರಾಜ್ಯ
ಕರಡು ಪಟ್ಟಿಗೆ ಹೋಲಿಸಿದರೆ ಮಹಿಳಾ ಮತದರಾರು ಸಂಖ್ಯೆ 2,77,717 ರಷ್ಟು ಗಮನಾರ್ಹ ಹೆಚ್ಚಾಗಿದೆ. 17,47,518 ಮತದಾರರ ಗುರುತಿನ ಚೀಟಿಗಳನ್ನು ಪೋಸ್ಟ್ ಮೂಲಕ ಕಳುಹಿಸಲಾಗಿದೆ. ಈಗ 10,76,506 ಮತದಾರರ ಗುರುತಿನ ಚೀಟಿ ಮುದ್ರಣ ವಾಗಿದ್ದು, ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪಟ್ಟಿಯಲ್ಲಿ 10,34,018 ಯುವ ಮತದಾರರಿದ್ದಾರೆ. ಇದರಲ್ಲಿ 3,88,527 ರಷ್ಟು ಯುವಕರು ಹೊಸದಾಗಿ ನೋಂದಾಯಿಸಿಕೊಂಡಿದ್ದಾರೆ. ಸಾಗರೋತ್ತರ (ಅನಿವಾಸಿ ಭಾರತೀಯರು) ಮತದಾರರ ಸಂಖ್ಯೆ 3,165 ಇದೆ. 80 ವರ್ಷ ಮೇಲ್ಪಟ್ಟ ವಯೋಮಾನದ ಮತದಾರರ ಸಂಖ್ಯೆ 12,71,862 ಇದೆ. 100 ವರ್ಷ ಮೇಲ್ಪಷ್ಟ ಮತದಾರರ ಸಂಖ್ಯೆ 17,937 ಇದೆ ಎಂದು ಮಾಹಿತಿ ನೀಡಿದರು. ರಾಜ್ಯ
ಇದನ್ನು ಓದಿ : ಜಂಗಮ ಕಾಯಕ ಯೋಗಿಗೆ ನಾಯಕತ್ವದ ಸ್ಥಾವರ
ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಇದೆ. ಕರಡು ಹಾಗೂ ಅಂತಿಮ ಪಟ್ಟಿಯಲ್ಲಿ ಒಟ್ಟು 35,02,328 ಸೇರ್ಪಡೆಗೊಳಿಸಲಾಗಿದೆ. 11,14,257 ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ. 13,43,123 ಜನರ ಹೆಸರುಗಳನ್ನು ತಿದ್ದುಪಡಿ ಮಾಡಲಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 69.74 ರಷ್ಟು ಮತದಾರರಾಗಿದ್ದಾರೆ. ಪ್ರತಿ 1000 ವೋಟರ್ ಅನುಪಾತದಲ್ಲಿ 997 ಮಹಿಳಾ ಮತದಾರರು ಇದ್ದಾರೆ. ರಾಜ್ಯ
ಆನ್ಲೈನ್ ಮೂಲಕ ಹೆಸರು ಸರಿಯಾಗಿದೆಯಾ ಎಂದು ಪರಿಶೀಲಿಸಬಹುದು. ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಮತರದಾರರ ಸಂಖ್ಯೆ ನಿರಂತರವಾಗಿ ಅಪ್ಡೇಟ್ ಆಗಲಿದೆ. ಪಾರ್ಮ್ 8 ಮೂಲಕ ಹೆಸರನ್ನು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ವರ್ಗಾವಣೆ ಮಾಡಬಹುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಒಟ್ಟು ಮತದಾರರು-5,37,85,815
ಪುರುಷರು-2,69,33,750
ಮಹಿಳೆಯರು- 2,68,47,145
ಇತರೆ-4,920
ಸೇವಾ ಮತದಾರರು-46,501
ಯುವ ಮತದಾರರು-3,88,527
ವಿದೇಶದಲ್ಲಿರುವ ಮತದಾರರು-3,164
80 ವರ್ಷ ದಾಟಿರುವ ಮತದಾರರು-12,71,862
ಶತಯುಷಿ(ನೂರು ವರ್ಷ ತುಂಬಿರುವ)ಮತದಾರರು-17,937
ವಿಕಲಚೇತನ ಮತದಾರರು-5,62,890
ಮತದಾನ ಕೇಂದ್ರಗಳು-58,834
ಒಟ್ಟು ಸೇರ್ಪಟೆ-35,02,328
ತೆಗೆದುಹಾಕುವಿಕೆ- 11,14,257
ಇದನ್ನು ನೋಡಿ : ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಆಧಾರ್ ಆಧಾರಿತ ವೇತನ : ಮೋದಿ ಸರ್ಕಾರದ ಕ್ರೂರ ಉಡುಗೊರೆ Janashakthi Media