ರಾಮಮಂದಿರ ಉದ್ಘಾಟನೆ ಬಿಜೆಪಿಯ ರಾಜಕೀಯ ಕಾರ್ಯಕ್ರಮ; ಕಾಂಗ್ರೆಸ್ ಭಾಗವಹಿಸುವುದಿಲ್ಲ – ರಾಹುಲ್ ಗಾಂಧಿ

ಕೋಹಿಮಾ: ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮಮಂದಿರ ಉದ್ಘಾಟನೆ ಜನವರಿ 22 ರಂದು ನಡೆಯಲಿದೆ. ಈ ಕಾರ್ಯಕ್ರಮವು “ಚುನಾವಣಾ ರಾಜಕೀಯ ಕಾರ್ಯಕ್ರಮ”ವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದು, “ಅಯೋಧ್ಯೆಯ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಭಾಗವಹಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಪಕ್ಷದ ಭಾರತ್ ಜೋಡೋ ನ್ಯಾಯ್ ಯಾತ್ರೆಯ (ಬಿಜೆಎನ್‌ವೈ) ಮೂರನೇ ದಿನದ ನಾಗಾಲ್ಯಾಂಡ್ ತಲುಪಿರುವ ರಾಹುಲ್ ಗಾಂಧಿ, ಅಯೋಧ್ಯೆಯಲ್ಲಿನ ರಾಮಮಂದಿರದ ಕಾರ್ಯಕ್ರಮವು ಆರ್‌ಎಸ್‌ಎಸ್-ಬಿಜೆಪಿಯ ರಾಜಕೀಯ ಕಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಜನವರಿ 22ರಂದು ನಡೆಯಲಿರುವ ಕಾರ್ಯಕ್ರಮವನ್ನು ರಾಜಕೀಯ ಮತ್ತು ಮುಂಬರುವ ಲೋಕಸಭೆ ಚುನಾವಣೆಯ ಜೊತೆಗೆ ಬೆರೆಸಲಾಗಿದೆ ಎಂದು ಹಿಂದೂ ಧಾರ್ಮಿಕ ಮುಖಂಡರು ಕೂಡ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫೆಬ್ರವರಿ ತಿಂಗಳಿನಲ್ಲೇ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ

“ಜನವರಿ 22 ರ ರಾಮಮಂದಿರ ಸಮಾರಂಭದಲ್ಲಿ ಭಾಗವಹಿಸುವುದು ನಮಗೆ (ಕಾಂಗ್ರೆಸ್) ಕಷ್ಟಕರವಾಗಿದೆ ಏಕೆಂದರೆ ಅದು ಮೋದಿಯವರ ಕಾರ್ಯಕ್ರಮವಾಗಿದೆ. ಅವರು (ಬಿಜೆಪಿ) ಯಾವಾಗಲೂ ಧಾರ್ಮಿಕ ಘಟನೆಗಳು ಸೇರಿದಂತೆ ಎಲ್ಲಾ ಘಟನೆಗಳಿಗೆ ಹಾಗೂ ಬೆಳವಣಿಗೆಗಳಿಗೆ ಚುನಾವಣಾ ಬಣ್ಣ ನೀಡುತ್ತಾರೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಮತ್ತು ನಮಗೆ ಎಲ್ಲಾ ಧರ್ಮಗಳು ಒಂದೇ” ಎಂದು ರಾಹುಲ್ ಗಾಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾದ ಸಿದ್ಧಾಂತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ನಾವು ವಿಭಜಿತ ಭಾರತವನ್ನು ಬಯಸುವುದಿಲ್ಲ. ನಾವು ದ್ವೇಷವಿಲ್ಲದ ಅಖಂಡ ಭಾರತವನ್ನು ಬಯಸುತ್ತೇವೆ. ದಲಿತ ಮತ್ತು ಇತರ ಹಿಂದುಳಿದ ವರ್ಗಗಳನ್ನು ನಿರ್ಲಕ್ಷಿಸುವುದಿಲ್ಲ. ಆಡಳಿತದಲ್ಲಿ ಅವರ ಪಾತ್ರಕ್ಕೆ ಸರಿಯಾದ ಪ್ರಾಮುಖ್ಯತೆ ಸಿಗುತ್ತದೆ” ಎಂದು ಹೇಳಿದ್ದಾರೆ.

ಮೈತ್ರಿಕೂಟದ ಪಾಲುದಾರ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಸುಗಮವಾಗಿ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. “ಇಂಡಿಯಾ ಬ್ಲಾಕ್‌ನ ಸ್ಥಿತಿ ತುಂಬಾ ಉತ್ತಮವಾಗಿದೆ. ಎಲ್ಲವನ್ನೂ ಸುಗಮವಾಗಿ ಪರಿಹರಿಸಲಾಗುವುದು ಎಂದು ನಾನು ನಂಬುತ್ತೇನೆ. ಕೆಲವು ಸಮಸ್ಯೆಗಳಿವೆ ಆದರೆ ಹೆಚ್ಚಿನ ಸ್ಥಳಗಳಲ್ಲಿ ತೊಡಕುಗಳಿಲ್ಲ. ಆದರೆ ಮಾಧ್ಯಮಗಳು ಮಾತ್ರ ಕೆಲವು ಸಮಸ್ಯೆಗಳನ್ನು ಅತಿಯಾಗಿ ತೋರಿಸುತ್ತಿವೆ. ಇಂಡಿಯಾ ಪಾಲುದಾರ ಪಕ್ಷಗಳಲ್ಲಿ ಪರಸ್ಪರ ಗೌರವವಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಂತ್ರಾಕ್ಷತೆಯಿಂದ ಹಸಿದ ಹೊಟ್ಟೆ ತುಂಬುವುದಿಲ್ಲ : ಸಚಿವ ಶಿವರಾಜ ತಂಗಡಗಿ

ಮೈತ್ರಿಕೂಟವೂ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಇಂಡಿಯಾ ಒಕ್ಕೂಟವು ಬಿಜೆಪಿ ವಿರುದ್ಧ ಚುನಾವಣೆಗಳನ್ನು ಸೂಕ್ತವಾಗಿ ಎದುರಿಸುತ್ತದೆ ಮತ್ತು ಚುನಾವಣೆಯಲ್ಲಿ ಗೆಲ್ಲುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹುಕಾಲದಿಂದ ಬಾಕಿ ಉಳಿದಿರುವ ನಾಗಾ ರಾಜಕೀಯ ಸಮಸ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಹಿಂದೆ ಕೆಲವು ಭರವಸೆಗಳನ್ನು ನೀಡಿದ್ದರು ಆದರೆ ಅವುಗಳನ್ನು ಇನ್ನೂ ಈಡೇರಿಸಿಲ್ಲ. ಮುಂಬರುವ ಚುನಾವಣೆಯಲ್ಲಿ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ನಾಗಾ ರಾಜಕೀಯ ಸಮಸ್ಯೆಯನ್ನು ಸಂಘಟಿತ ಮಾತುಕತೆ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಪರಿಹರಿಸಲು ಪ್ರಯತ್ನಿಸುತ್ತೇವೆ” ಎಂದು ಹೇಳಿದ್ದಾರೆ.

ಹಿಂಸಾಚಾರದಿಂದ ನಲುಗಿದ್ದ ಮಣಿಪುರದಿಂದ ಭಾನುವಾರ ಪ್ರಾರಂಭವಾದ 66 ದಿನಗಳ ಅವಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ. ಮಣಿಪುರದ ಬುಡಕಟ್ಟು ಪ್ರಾಬಲ್ಯದ ಕಾಂಗ್‌ಪೋಕ್ಪಿ ಮತ್ತು ಸೇನಾಪತಿ ಜಿಲ್ಲೆಗಳನ್ನು ಹಾದು ಯಾತ್ರೆ ಸೋಮವಾರ ಸಂಜೆ ತಡವಾಗಿ ನಾಗಾಲ್ಯಾಂಡ್‌ಗೆ ಪ್ರವೇಶಿಸಿದೆ. ರಾಜ್ಯ ರಾಜಧಾನಿ ಕೊಹಿಮಾದಿಂದ ದಕ್ಷಿಣಕ್ಕೆ 28 ಕಿಮೀ ದೂರದಲ್ಲಿರುವ ನಾಗಾಲ್ಯಾಂಡ್‌ನ ಖುಜಾಮಾ ಗ್ರಾಮದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಬೆಂಬಲಿಗರು, ಮಹಿಳೆಯರು ಸೇರಿದಂತೆ ಕಾಂಗ್ರೆಸ್ ರಾಹುಲ್ ಗಾಂಧಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಮಂಗಳವಾರ ಮತ್ತು ಬುಧವಾರ ಎರಡು ದಿನಗಳಲ್ಲಿ ನಾಗಾಲ್ಯಾಂಡ್‌ನ ಐದು ಜಿಲ್ಲೆಗಳಲ್ಲಿ ಯಾತ್ರೆಯು 257 ಕಿ.ಮೀ ಕ್ರಮಿಸಲಿದೆ.

ವಿಡಿಯೊ ನೋಡಿ: ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಆಧಾರ್ ಆಧಾರಿತ ವೇತನ : ಮೋದಿ ಸರ್ಕಾರದ ಕ್ರೂರ ಉಡುಗೊರೆ Janashakthi Media

Donate Janashakthi Media

Leave a Reply

Your email address will not be published. Required fields are marked *