ಚಿತ್ರದುರ್ಗ | 4 ವರ್ಷಗಳಿಂದ ಬೀಗ ಹಾಕಲಾಗಿದ್ದ ಮನೆಯೊಳಗೆ ಒಂದೇ ಕುಟುಂಬದ 5 ಅಸ್ಥಿಪಂಜರ ಪತ್ತೆ!

ಚಿತ್ರದುರ್ಗ: ನಾಲ್ಕು ವರ್ಷಗಳಿಂದ ಬೀಗ ಹಾಕಲಾಗಿದ್ದ ಮನೆಯೊಳಗೆ ನಿವೃತ್ತ ಸರ್ಕಾರಿ ಇಂಜಿನಿಯರ್ ಮತ್ತು ಅವರ ನಾಲ್ವರು ಕುಟುಂಬ ಸದಸ್ಯರ ಅಸ್ಥಿಪಂಜರದ ಅವಶೇಷಗಳು ಜಿಲ್ಲೆಯಲ್ಲಿ ಗುರುವಾರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡದಲ್ಲಿ ಬರೆದ ದಿನಾಂಕವಿಲ್ಲದ ಮತ್ತು ಸಹಿ ಮಾಡದ ಟಿಪ್ಪಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು,  ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಅಂದಾಜಿಸಲಾಗಿದೆ.

ನಿವೃತ್ತ ಸರ್ಕಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಜಗನ್ನಾಥ್ ರೆಡ್ಡಿ (85), ಅವರ ಪತ್ನಿ ಪ್ರೇಮಾ (80), ಪುತ್ರಿ ತ್ರಿವೇಣಿ (62) ಮತ್ತು ಮಕ್ಕಳಾದ ಕೃಷ್ಣ (60) ಮತ್ತು ನರೇಂದ್ರ (57) ಅವರ ಅವಶೇಷಗಳಿವು ಎಂದು ಶಂಕಿಸಿದ್ದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನೆಯನ್ನು ಹಲವು ಬಾರಿ ದರೋಡೆ ಮಾಡಿರುವುದು ಕಂಡುಬಂದಿದೆ ಎಂದು ಕೂಡಾ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ. ಚಿತ್ರದುರ್ಗ

ಇದನ್ನೂ ಓದಿ: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ತಪ್ಪಿತಸ್ಥ: ಕೋರ್ಟ್ ಆದೇಶ

ಕುಟುಂಬವು ಕೊನೆಯದಾಗಿ 2019ರ ಜೂನ್-ಜುಲೈ ವೇಳೆಗೆ ಕಾಣಿಸಿಕೊಂಡಿತ್ತು, ನಂತರದಿಂದ ಮನೆಗೆ ಬೀಗ ಹಾಕಲಾಗಿತ್ತು ಎಂದು ನೆರೆಹೊರೆಯವರು ಹೇಳಿದ್ದಾಗಿ ವರದಿಗಳು ಉಲ್ಲೇಖಿಸಿವೆ. ಐದು ಅಸ್ಥಿಪಂಜರದ ಅವಶೇಷಗಳು ಎಲ್ಲವು ಮಲಗುವ ಭಂಗಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಎರಡು ಅಸ್ಥಿಪಂಜರಗಳು ಹಾಸಿಗೆಗಳ ಮೇಲೆ, ಎರಡು ಕೋಣೆಯ ಮಹಡಿಗಳಲ್ಲಿ ಮತ್ತು ಇನ್ನೊಂದು ಕೋಣೆಯಲ್ಲಿ ಕಂಡುಬಂದಿವೆ ಎಂದು ವರದಿ ಹೇಳಿವೆ.

“ದಾವಣಗೆರೆಯಿಂದ ಫೋರೆನ್ಸಿಕ್ ತಜ್ಞರನ್ನು ಕರೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಇದು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೋ ಪ್ರಕರಣವೇ ಎಂಬುದು ನಮಗೆ ತಿಳಿದಿಲ್ಲ. ಫೋರೆನ್ಸಿಕ್ ವರದಿಯ ನಂತರವೇ ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

“ಕುಟುಂಬವು ನೆರೆಹೊರೆಯವರೊಂದಿಗೆ ಹೆಚ್ಚು ಬೆರೆಯದ ಕಾರಣ, ಈ ಬಗ್ಗೆ ಪರಿಶೀಲಿಸುವತ್ತ ಯೋಚಿಸಿಲ್ಲ. ಎರಡು ತಿಂಗಳ ಹಿಂದೆ, ಮರದ ಬಾಗಿಲು ಮುರಿದಿರುವುದನ್ನು ಯಾರೋ ಗಮನಿಸಿದ್ದಾರೆ. ಆದರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ” ಎಂದು ಅಧಿಕಾರಿ ಹೇಳಿದ್ದಾರೆ. ಕುಟುಂಬ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು | ಜನವರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಿರುವ ರಾಜ್ಯ ಸರ್ಕಾರ

ಖಾಸಗಿ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದ ನರೇಂದ್ರ ರೆಡ್ಡಿ 2013ರಲ್ಲಿ ದರೋಡೆ ಪ್ರಕರಣದಲ್ಲಿ ಜೈಲು ಪಾಲಾದ ನಂತರ ಕುಟುಂಬವು ನೆರೆಹೊರೆಯವರೊಂದಿಗೆ ಬೆರೆಯುತ್ತಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಪತ್ರಕರ್ತರಿಂದ ಕರೆ ಬಂದ ನಂತರ ಪೊಲೀಸರು ಅಸ್ಥಿಪಂಜರಗಳನ್ನು ಪತ್ತೆ ಮಾಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. “ಮನೆಯ ಮಾಲೀಕರು 2019ರ ಜನವರಿ 13ರಂದು ಕೊನೆಯ ವಿದ್ಯುತ್ ಬಿಲ್ ಪಾವತಿಸಿದ್ದಾರೆ ಎಂದು ಕಂಡುಬಂದಿದೆ. ದಂಪತಿಗೆ ನಾಲ್ಕು ಮಕ್ಕಳಿದ್ದರು ಮತ್ತು ಅವರಲ್ಲಿ ಒಬ್ಬರು ಮಂಜುನಾಥ್ 2014 ರಲ್ಲಿ ನಿಧನರಾಗಿದ್ದರು” ಎಂದು ಮೀನಾ ಹೇಳಿದ್ದಾರೆ.

ನಾಲ್ಕು ವರ್ಷಗಳಾದರೂ ಅವರ ಬಗ್ಗೆ ಯಾರೂ ಯಾಕೆ ಪತ್ತೆ ಮಾಡಿಲ್ಲ ಎಂಬ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವ ಜಿ. ಪರಮೇಶ್ವರ ಪೊಲೀಸರಿಗೆ ಸೂಚಿಸಿದ್ದಾರೆ. “ಪೊಲೀಸರು ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಮತ್ತು ಮೃತರ ಗುರುತು ಮತ್ತು ಸಾವಿನ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ವಿಡಿಯೊ ನೋಡಿ: ಸಂಸದರನ್ನು ಅಮಾನತು ಮಾಡಿ ಕರಾಳ ಶಾಸನಕ್ಕೆ ಅನುಮೋದನೆ: ನವ ವಸಾಹತೀಕರಣದ ಮತ್ತೊಂದು ರೂಪ!? Janashakthi Media

Donate Janashakthi Media

Leave a Reply

Your email address will not be published. Required fields are marked *