ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಈ ಇತಿಹಾಸ ನಿರ್ಮಿಸಿದ್ದು ಪಂಜಾಬ್ ಕಿಂಗ್ಸ್ (PBKS), ಡೆಲ್ಲಿ ಕ್ಯಾಪಿಟಲ್ಸ್ (DC), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು. ಅದು ಸಹ ರನ್ ರಾಶಿ ಪೇರಿಸುವ ಮೂಲಕ ಎಂಬುದು ವಿಶೇಷ.
ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಒಂದೇ ದಿನ ಬರೋಬ್ಬರಿ 986 ರನ್ಗಳು ಮೂಡಿಬಂದಿವೆ. ಐ.ಪಿ.ಎಲ್ನಲ್ಲಿ ಹೀಗೆ ಒಂದೇ ದಿನ 900 ಕ್ಕಿಂತ ಅಧಿಕ ರನ್ಗಳು ಮೂಡಿಬಂದಿರುವುದು ಇದೇ ಮೊದಲು. ಈ ಹಿಂದೆ 899 ರನ್ಗಳು ದಾಖಲಾಗಿದ್ದು ಶ್ರೇಷ್ಠ ಸಾಧನೆಯಾಗಿತ್ತು.
ಆದರೆ ಈ ಬಾರಿಯ ಐಪಿಎಲ್ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 264 ರನ್ ಪೇರಿಸಿತು. ಈ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ ಪಂಜಾಬ್ ಕಿಂಗ್ಸ್ 18.5 ಓವರ್ಗಳಲ್ಲಿ 265 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅಂದರೆ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ ಬರೋಬ್ಬರಿ 529 ರನ್ಗಳು.
ಇದನ್ನೂ ಓದಿ: ಪಂಜಾಬ್‌ನಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು – ಎಎಪಿ ಆರೋಪ
ಈ ಪಂದ್ಯದ ಬಳಿಕ 36ನೇ ಮ್ಯಾಚ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್ಗಳಲ್ಲಿ 228 ರನ್ ಬಾರಿಸಿದ್ದರು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ಗಳಲ್ಲಿ 229 ರನ್ ಬಾರಿಸಿ 5 ವಿಕೆಟ್ಗಳ ಜಯ ಸಾಧಿಸಿದೆ. ಅಂದರೆ ಈ ಮ್ಯಾಚ್ನಲ್ಲಿ ಒಟ್ಟು 457 ರನ್ಗಳು ಮೂಡಿಬಂದಿದ್ದವು.ಈ ಮೂಲಕ ಐಪಿಎಲ್ನ ಡಬಲ್ ಹೆಡ್ಡರ್ ಪಂದ್ಯಗಳು ಬರೋಬ್ಬರಿ 986 ರನ್ಗಳಿಗೆ ಸಾಕ್ಷಿಯಾಗಿದೆ.
ಇದಕ್ಕೂ ಮುನ್ನ 2024 ರಲ್ಲಿ 899 ರನ್ಗಳು ಮೂಡಿಬಂದಿದ್ದು ಇದುವರೆಗಿನ ದಾಖಲೆಯಾಗಿತ್ತು. ಅಂದು ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ (254) ಹಾಗೂ ಮುಂಬೈ ಇಂಡಿಯನ್ಸ್ (247) ನಡುವಣ ಪಂದ್ಯದಲ್ಲಿ 504 ರನ್ ಮೂಡಿಬಂದರೆ, ಲಕ್ನೋ ಸೂಪರ್ ಜೈಂಟ್ಸ್ (196) ಹಾಗೂ ರಾಜಸ್ಥಾನ್ ರಾಯಲ್ಸ್ (199) ನಡುವಣ ಮ್ಯಾಚ್ನಲ್ಲಿ 395 ರನ್ಗಳು ದಾಖಲಾಗಿದ್ದವು. ಇದು ಐಪಿಎಲ್ನ ಡಬಲ್ ಹೆಡ್ಡರ್ ಪಂದ್ಯದಲ್ಲಿ ಮೂಡಿಬಂದ ಗರಿಷ್ಠ ಒಟ್ಟು ಸ್ಕೋರ್ ಆಗಿತ್ತು.
ಇದೀಗ ಪಂಜಾಬ್ ಕಿಂಗ್ಸ್ (265), ಡೆಲ್ಲಿ ಕ್ಯಾಪಿಟಲ್ಸ್ (264), ಸನ್ರೈಸರ್ಸ್ ಹೈದರಾಭಾದ್ (229) ಹಾಗೂ ರಾಜಸ್ಥಾನ್ ರಾಯಲ್ಸ್ (228) ತಂಡಗಳ ದಾಂಡಿಗರ ಆರ್ಭಟದೊಂದಿಗೆ ಐಪಿಎಲ್ನ ಡಬಲ್ ಹೆಡ್ಡರ್ ಪಂದ್ಯದಂದು ಬರೋಬ್ಬರಿ 986 ರನ್ಗಳು ಮೂಡಿಬಂದಿವೆ. ಇದರೊಂದಿಗೆ ಐಪಿಎಲ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.
ಇದನ್ನೂ ನೋಡಿ: ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media
