ದೇರಳಕಟ್ಟೆ: ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘ ಪೂರ್ವ ವಲಯ ಇದರ ವತಿಯಿಂದ ಇಂದು ದೇರಳಕಟ್ಟೆಯಲ್ಲಿ ಅರ್ಹ ಬಸ್ಸು ನೌಕರ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು. ಕಿಟ್ ವಿತರಣೆ ಕಾರ್ಯಕ್ರಮವನ್ನು ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಗೌರವಾದ್ಯಕ್ಷರಾದ ಮುನೀರ್ ಕಾಟಿಪಳ್ಳ ಚಾಲನೆ ನೀಡಿ ಮಾತನಾಡಿದರು.
ಲಾಕ್ ಡೌನ್ ಸಂತ್ರಸ್ತರಿಗೆ ಸರಕಾರ ಘೋಷಿಸಿದ ಪರಿಹಾರ ಪ್ಯಾಕೇಜ್ ನಿಂದ ಖಾಸಗಿ ಬಸ್ಸು ಚಾಲಕ, ನಿರ್ವಾಹಕರನ್ನು ಸರಕಾರ ಹೊರಗಿಟ್ಟಿರುವುದು ದೊಡ್ಡ ಅನ್ಯಾಯ. ಖಾಸಗಿ ಬಸ್ಸು ನೌಕರರು ಸಂಘಟಿತರಾಗಿ ಹಕ್ಕುಗಳಿಗಾಗಿ ಧ್ವನಿ ಎತ್ತದಿರುವುದೇ ಸರಕಾರದ ಅನಾದಾರಕ್ಕೆ ಪ್ರಧಾನ ಕಾರಣ. ಮುಂದಿನ ದಿನಗಳಲ್ಲಿ ಖಾಸಗಿ ಬಸ್ಸು ನೌಕರರು ಜಾತಿ, ಧರ್ಮ, ಭಾಷಾ ಭಿನ್ನತೆಗಳನ್ನು ತೊರೆದು ಸಂಘಟಿತ ಹೋರಾಟಗಳನ್ನು ನಡೆಸುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು, ದುಡಿಯುವ ಜನರದ್ದು ಒಂದೇ ಜಾತಿ ಎಂಬ ಘೋಷಣೆ ಮೊಳಗಿಸಬೇಕು ಎಂದು “ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘ” ದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಪ್ರಥಮ ಹಂತದಲ್ಲಿ 125 ಬಸ್ಸು ನೌಕರರಿಗೆ ಅಕ್ಕಿ ಸಹಿತ ಹತ್ತು ಐಟಂಗಳ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಕಿಟ್ ವಿತರಿಸಲು ನಿರ್ಧರಿಸಲಾಯಿತು. ವೇದಿಕೆಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಂದಾಳು ಇಬ್ರಾಹಿಂ ಮದಕ, ಹಿರಿಯ ಬಸ್ಸು ನೌಕರ ಮುನೀರ್ ಅಹಮದ್ ಮತ್ತುರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಅಧ್ಯಕ್ಷರಾದ ಅಲ್ತಫ್ ಮುಡಿಪು ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಬಸ್ಸು ನೌಕರರ ಸಂಘದ ಕಾರ್ಯದರ್ಶಿ ಜಗದೀಶ್ ನಾಯಕ್, ಕೋಶಾಧಿಕಾರಿ ಆಶ್ರಫ್ ಕಾನಕೆರೆ, ದಿವಾಕರ ಪಾವೂರು, ನವಾಝ್ ಉರುಮನೆ , ನಝೀರ್, ಮೊಹಮ್ಮದ್ ಸಪ್ವಾನ್, ಬಾಝಿಕ್ ಮುಂತಾದವರು ವಹಿಸಿದ್ದರು.