ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸ್ಪರ್ಧೆ: ಚಿನ್ನ ಸೇರಿದಂತೆ 3 ಪದಕ ಬಾಚಿಕೊಂಡ 94ರ ಅಜ್ಜಿ ಭಗವಾನಿ ದೇವಿ

ನವದೆಹಲಿ: ಮಹತ್ತರವಾದ ಸಾಧನೆಗಳಿಗೆ ವಯಸ್ಸು ಅಡ್ಡಿಯಲ್ಲ ಎಂಬಂತೆ, ಗುರಿಯೊಂದಿದ್ದರೆ ಸಾಕು ಎಂಬಂತೆ ಭಾರತ ಮೂಲದ 94 ವರ್ಷದ ಭಗವಾನಿ ದೇವಿ, ನಿರೂಪಿಸಿದ್ದಾರೆ. ಇವರು, ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ರಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ  ಸೃಷ್ಟಿಸಿದ್ದಾರೆ.

ದಕ್ಷಿಣ ಫಿನ್‌ಲ್ಯಾಂಡ್ ನ ಟಂಪರೆಯಲ್ಲಿ ನಡೆದ ಭಾರತದ ಗೌರವವನ್ನು ಹೆಚ್ಚಿಸಿರುವ ಭಗವಾನಿ ದೇವಿ ಅವರು ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನ ಹಿರಿಯ ನಾಗರಿಕರ ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದರೆ, ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 100 ಮೀಟರ್ ಓಟವನ್ನು 24.74 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಗವಾನಿ ದೇವಿ ಅವರ ಸಾಧನೆಯನ್ನು ಮೆಚ್ಚಿ ಟ್ವೀಟ್‌ ಮಾಡಿದ್ದು, ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರು ಈ ಹಿಂದೆ ದೆಹಲಿ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತದಲ್ಲಿ 3 ಚಿನ್ನದ ಪದಕಗಳನ್ನು ಗೆದ್ದಿದ್ದರು ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ.

ಈ ಹಿಂದೆ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಗವಾನಿ ದೇವಿ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದರು. ಮೂರು ಚಿನ್ನದ ಪದಕ ಗೆಲ್ಲುವ ಮೂಲಕ 94 ವರ್ಷದ ಭಗವಾನಿ ದೇವಿ ಫಿನ್‌ಲ್ಯಾಂಡ್‌ ನಲ್ಲಿ ನಡೆಯುತ್ತಿರುವ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದರು.

ರಾಷ್ಟ್ರೀಯ ಮಾಸ್ಟರ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಮೊದಲು, ಭಗವಾನಿ ದೇವಿ ಅವರು ದೆಹಲಿ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಓಟ, ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದರು.

ಭಗವಾನಿ ದೇವಿ ಅವರ ಮೊಮ್ಮಗ ವಿಕಾಸ್ ದಾಗರ್ ಪ್ಯಾರಾ ಅಥ್ಲೀಟ್ ಆಗಿದ್ದು, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಭಗವಾನಿ ದೇವಿ ಅವರ ಧೈರ್ಯ ಮತ್ತು ಉತ್ಸಾಹವನ್ನು ಇಡೀ ದೇಶ ಕೊಂಡಾಡುತ್ತಿದೆ. ನಮ್ಮ ಅಜ್ಜಿ ಯಾರಿಗೂ ಕಡಿಮೆ ಇಲ್ಲ ಎನ್ನುತ್ತಾರೆ ಅಭಿಮಾನಿಗಳು. ಅವರ ವಿಶ್ವಾಸವನ್ನು ನೋಡಿ ಪ್ರತಿಯೊಬ್ಬರೂ ಅಜ್ಜಿಯನ್ನು ಹೊಗಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *