ಕುಂಬಾರರ ಕಲೆ ನಶಿಸುತ್ತಿದೆ – ಜಿ.ಪಂಕಜ ಆತಂಕ

ಕೋಲಾರ: ಕುಂಬಾರ ಸಮುದಾಯದ ಉಪಕಸುಬುಗಳು ನಾಶವಾಗುತ್ತಿದ್ದು ಸಮಾಜದ ಏಳಿಗೆಗೆ ಶಿಕ್ಷಣ ಮಾತ್ರ ದಾರಿದ್ವೀಪವಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಬೇಕಾಗಿದೆ ಎಂದು ವಿಧಾನ ಪರಿಷತ್ತು ಅಧೀನ ಕಾರ್ಯದರ್ಶಿ ಜಿ.ಪಂಕಜ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕುಂಬಾರ ಸಂಘದ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸನ್ಮಾನದಿಂದ ಜವಾಬ್ದಾರಿ ಹೆಚ್ಚಾಗುತ್ತದೆ ಓದಿನ ಜವಾಬ್ದಾರಿಗಳೊಂದಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ

ಸಮುದಾಯದ ಪ್ರತಿಯೊಬ್ಬರ ಭವಿಷ್ಯ ಅವರವರ ಕೈಯಲ್ಲೇ ಇದ್ದು ಜೀವನದ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ವಿಧ್ಯಾಭ್ಯಾಸದ ಸಂದರ್ಭದಲ್ಲೇ ನಿರ್ಧರಿಸಬೇಕಾಗಿದೆ ಕೋವಿಡ್ ಬಂದ ನಂತರ ಉದ್ಯೋಗಗಳು ಕಡಿಮೆಯಾಗಿದ್ದು ಸಮಾಜದ ತಪ್ಪು ದಾರಿಗಳಲ್ಲಿ ನಡೆಯದೇ ಓದು ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಪ್ರಜ್ಞೆ ಮಾಡಿಸಿಕೊಳ್ಳಬೇಕಾಗಿದೆ ಎಂದರು.

ಕುಂಬಾರ ಜನಾಂಗದಲ್ಲಿ ಬಡತನದ ವಿಧ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಜವಾಬ್ದಾರಿ ಸೌಲಭ್ಯ ಪಡೆದವನು ಸಮಾಜದ ಏಳಿಗೆಗಾಗಿ ದುಡಿಯುವಂತಾಗಬೇಕು ಪ್ರತಿಯೊಬ್ಬ ಮನುಷ್ಯನು ಹಂಚಿಕೊಂಡು ಬದುಕುವ ಸಂಸ್ಕೃತಿಯನ್ನು ಕಲಿಯಬೇಕಾಗಿದೆ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವ ಮೂಲಕ ಸಮಾಜದ ಜೊತೆಗೆ ಉತ್ತಮನಾಗವಂತೆ ಸಲಹೆ ನೀಡಿದರು

ಕಾರ್ಯಕ್ರಮದಲ್ಲಿ ಬೆಂಗಳೂರು ಸಿಐಡಿ ಎಸ್ಪಿ ಟಿ.ವೆಂಕಟೇಶ್ ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಮುಂದೆ ಇನ್ನಷ್ಟು ಸ್ಫೂರ್ತಿಯೊಂದಿಗೆ ಓದುವ ಮೂಲಕ ಉತ್ತಮ ಗುರುಗಳ ಪೋಷಕರ ಮಾರ್ಗದರ್ಶನ ಪಡೆಯುವ ಮೂಲಕ ಸಮಾಜದ ಏಳಿಗೆಗಾಗಿ ದುಡಿಯುತ್ತಾರೆ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಮುಂಚೂಣಿಯಲ್ಲಿ ಇದ್ದು ಸಮಾಜದ ದೇಶದ ಆಗುಹೋಗುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುಂದಿನ ದಾರಿಯನ್ನು ಕಂಡುಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಜಿಲ್ಲಾ ಕುಂಬಾರ ವಿಧ್ಯಾರ್ಥಿ ನಿಲಯದ ಗೌರವ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಾಣಲು ಅವರನ್ನು ಇಂತಹ ಸಂದರ್ಭದಲ್ಲಿ ಗುರುತಿಸಿ ಉತ್ತೇಜನ ಮಾಡಬೇಕು ಕುಂಬಾರ ಸಂಘದಿಂದ 11 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ವಿಧ್ಯಾರ್ಥಿಗಳು ಸ್ವಪ್ರಯತ್ನದಿಂದ ಮುಂದೆ ಬರಬೇಕು ವಿದ್ಯಾರ್ಥಿಗಳಿಗೆ ಪೋಷಕರು ಉತ್ತೇಜನ ಸಹಕಾರ ನೀಡಬೇಕಾಗಿದೆ ಎಂದರು

ಕಾರ್ಯಕ್ರಮದಲ್ಲಿ ಬೆಂಗಳೂರು ಪಿಡಬ್ಲ್ಯೂಡಿ ನಿವೃತ್ತ ಅಭಿಯಂತರ ಬಾಬು ಕುಂಬಾರ್, ಬೆಂಗಳೂರು ಐಜಿಪಿ ಕಚೇರಿಯ ಎ.ಎ.ಓ ಮುದ್ದುಕೃಷ್ಣ, ಕುಂಬಾರ ಸಮುದಾಯದ ಮುಖಂಡರಾದ ಶಿವಶಂಕರ್, ವಿಶ್ವನಾಥ್, ಗಿರಿಶೆಟ್ಟಿ,ಕಲ್ಲಂಡೂರು ಶ್ರೀನಿವಾಸಪ್ಪ, ಮಾಲೂರ ಅಪ್ಪಿ, ರಾಜು ಶ್ರೀನಿವಾಸಪ್ಪ, ರೆಡ್ಡಪ್ಪ, ಆನಂದ್, ಆಂಜಿನಪ್ಪ, ಇದ್ದರು

Donate Janashakthi Media

Leave a Reply

Your email address will not be published. Required fields are marked *