ಚಿಕ್ಕಬಳ್ಳಾಪುರ: ಇಲ್ಲೊಂದು ಕುಟಂಬದ 85 ಜನ ಸದಸ್ಯರು ಸಕಾಲದಲ್ಲಿ ಮತದಾನ ಮಾಡಿ, ಜನರಿಗೆ ಮಾದರಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ. ತಾಯಿ-ಮಗಳು-ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ ಒಟ್ಟು 85 ಜನ ಮತ ಚಲಾಯಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ; ಮುಖ್ಯಮಂತ್ರಿ ಸಿದ್ದರಾಮಯ್ಯ
ಈ ಕುಟುಂಬದಲ್ಲಿ ಮತ ಹಬ್ಬಕ್ಕಾಗಿಯೇ ಎಲ್ಲರೂ ಒಂದೆಡೆ ಸೇರುತ್ತಾರೆ. ಬಾದಾಮ್ ಕುಟುಂಬಸ್ಥರೇ ಈ ರೀತಿ ಒಗ್ಗಟ್ಟಿನಿಂದ ಒಂದೆಡೆ ಸೇರಿ ಮತ ಚಲಾಯಿಸುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಮತದಾನ ಉತ್ತಮವಾಗಿ ಸಾಗುತ್ತಿದೆ. ಬಿಜೆಪಿಯಿಂದ ಡಾ.ಸುಧಾಕರ್ ಹಾಗೂ ಕಾಂಗ್ರೆಸ್‍ನಿಂದ ರಕ್ಷಾ ರಾಮಯ್ಯ, ಸಿಪಿಐಎಂನಿಂದ ಮುನಿವೆಂಕಟಪ್ಪ ಅಖಾಡದಲ್ಲಿದ್ದಾರೆ.
ಕರ್ನಾಟಕದಲ್ಲಿ ಮೊದಲಹಂತದಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗದ ಮಾಹಿತಿಯಂತೆ ಮಧ್ಯಾಹ್ನ 1 ಗಂಟೆಗೆ 38.28% ರಷ್ಟು ಮತದಾನವಾಗಿದೆ.
ಇದನ್ನೂ ನೋಡಿ: “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂದರೆ, ಹಿಂದುತ್ವ ಕೋಮುವಾದ ಘೋಷಣೆಯಾ ಮೋದಿಯವರೆ? ಕೆ.ಎಸ್.ವಿಮಲಾ