ನವದೆಹಲಿ : ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ತೀವ್ರ ಮಟ್ಟದಲ್ಲಿ ಏರಿಕೆಯಾಗ್ತಿದ್ದು, ದೇಶದಲ್ಲಿ ಈ ಒಮಿಕ್ರಾನ್ ವೈರಸ್‌ನಿಂದ ಬಳಲುವವರ ಒಟ್ಟು ಸಂಖ್ಯೆ 21ಕ್ಕೇರಿಕೆಯಾಗಿದೆ.
ಭಾನುವಾರ ಒಂದೇ ದಿನ 17 ಒಮಿಕ್ರಾನ್ ಪತ್ತೆಯಾಗಿದ್ದು, ಪತ್ತೆಯಾದ 17 ಒಮಿಕ್ರಾನ್ ಪ್ರಕರಣಗಳಲ್ಲಿ 9 ರಾಜಸ್ಥಾನ, 7 ಮಹಾರಾಷ್ಟ್ರ ಮತ್ತು ದೆಹಲಿಗೆ ಬಂದಿಳಿದ ತಾಂಜಾನಿಯಾ ಪ್ರಜೆಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.
ರಾಜಸ್ಥಾನದಲ್ಲಿ ಪತ್ತೆಯಾದ ಒಮಿಕ್ರಾನ್ ಸೋಂಕಿತರ ಕುಟುಂಬ ಸದಸ್ಯರು ಇತ್ತೀಚಿಗೆ ದ.ಆಫ್ರಿಕಾದಿಂದ ಆಗಮಿಸಿದ್ದರು. ಒಂದೇ ಕುಟುಂಬದ 9 ಮಂದಿಯಲ್ಲಿ ಒಮಿಕ್ರಾನ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ 34 ಮಂದಿಯ ಪರೀಕ್ಷೆಯನ್ನೂ ಮಾಡಿಸಲಾಗಿದ್ದು, ಅವರ ವರದಿ ನಿರೀಕ್ಷೆಯಲ್ಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಪತ್ತೆಯಾದ ಸೋಂಕಿತರು ಇತ್ತೀಚಿಗೆ ನೈಜೀರಿಯಾದಿಂದ ಭಾರತಕ್ಕೆ ಆಗಮಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 2, ಗುಜರಾತ್ ನಲ್ಲಿ 1, ಮುಂಬೈನಲ್ಲಿ 8, ದೆಹಲಿಯಲ್ಲಿ 1 ಮತ್ತು ರಾಜಸ್ಥಾನದಲ್ಲಿ 9 ಕೇಸ್ ಗಳು ಪತ್ತೆಯಾಗಿದೆ.
ಭಾರತದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ಇದುವರೆಗೂ ಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಹೈ ರಿಸ್ಕ್ ಇರುವ ದೇಶಗಳಿಂದ ಭಾರತಕ್ಕೆ ಆಗಮಿಸುವ ವಿಮಾನ ಪ್ರಯಾಣಿಕರಿಗೆ ಆರ್ ಟಿ ಪಿ ಸಿ ಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆಯ ಫಲಿತಾಂಶ ಬರದೇ ಆ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಕ್ಕೆ ಕಾಲಿಡುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಮಿಕ್ರಾನ್ ಎಷ್ಟು ಬೇಗ ಹಬ್ಬುತ್ತದೆ?, ಇದು ಎಷ್ಟು ಅಪಾಯಕಾರಿ?, ಚಿಕಿತ್ಸೆಗಳನ್ನು ಹೇಗೆ ನೀಡಬೇಕು? ಎಂಬುದನ್ನು ತೀರ್ಮಾನಿಸಲು ಇನ್ನೂ ಒಂದು ವಾರಗಳ ಅಧ್ಯಯನದ ಅವಶ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ನವೆಂಬರ್ 24ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ದಾಖಲಾಗಿತ್ತು. ಬಳಿಕ ಸೋಂಕಿನ ಲಕ್ಷಣಗಳ ಬಗ್ಗೆ ಅಧ್ಯಯನಗಳು ಆರಂಭಗೊಂಡವು. ಡೆಲ್ಟಾಗಿಂತ ಮೂರು ಪಟ್ಟು ವೇಗವಾಗಿ ಒಮಿಕ್ರಾನ್ ಹಬ್ಬಲಿದೆ ಎಂದು ಅಂದಾಜಿಸಲಾಗಿದೆ.
ಒಮಿಕ್ರಾನ್ ರೂಪಾಂತರಿ ಪತ್ತೆಯಾದ ಬಳಿ ಆಸ್ಪತ್ರೆಗೆ ದಾಖಲಾಗುವ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯಲ್ಲಿ ಏರಿಕಯಾಗಿದೆ. ಆದರೆ ಈ ರೂಪಾಂತರಿ ಮಕ್ಕಳ ಮೇಲೆ ಪ್ರಭಾವ ಬೀರಲಿದೆಯೇ? ಎಂಬುದನ್ನು ಹೇಳಲು ಇನ್ನೂ ಅಧ್ಯಯನ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾದ ವೈದ್ಯರು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ : ಕರ್ನಾಟಕದಲ್ಲಿ ಕಳೆದ ಒಂದು ವಾರದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.56ರಷ್ಟು ಏರಿಕೆಯಾಗಿದ್ದು, ಮೈಮರೆಯುವಂತಿಲ್ಲ ಎನ್ನುವುದನ್ನು ಮತ್ತೂಮ್ಮೆ ನೆನಪಿಸಿದೆ.
ನ. 29ರಿಂದ ಡಿ. 5ರ ವರೆಗೆ ರಾಜ್ಯದಲ್ಲಿ ಒಟ್ಟು 2,499 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, 32 ಮಂದಿ ಮೃತಪಟ್ಟಿದ್ದಾರೆ. ದೃಢಪಟ್ಟಿರುವ ಒಟ್ಟು ಪ್ರಕರಣಗಳ ಪೈಕಿ ಶೇ. 50ಕ್ಕಿಂತ ಹೆಚ್ಚು ಬೆಂಗಳೂರು ನಗರದಲ್ಲೇ ಪತ್ತೆಯಾಗಿವೆ. ಡಿ. 5ರಂದು ಮರಣ ಪ್ರಮಾಣ ಶೇ. 1ರಿಂದ ಶೇ. 1.35ಕ್ಕೆ ಮತ್ತು ಪಾಸಿಟಿವಿಟಿ ದರ ಶೇ. 0.35ರಿಂದ ಶೇ. 0.41ಕ್ಕೆ ಹೆಚ್ಚಿದೆ.
ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಶೇ. 70ರಷ್ಟು ಹೆಚ್ಚಿಸಲಾಗಿದೆ. ಪ್ರತಿನಿತ್ಯ 1 ಲಕ್ಷ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಶೇ. 50ರಷ್ಟು ಮಾದರಿಗಳನ್ನು ಜಿಲ್ಲಾ ಕೇಂದ್ರ, ಶೇ. 40ರಷ್ಟು ಗ್ರಾಮೀಣ ಕೇಂದ್ರ, ಶೇ. 10ರಷ್ಟು ಮಕ್ಕಳಿಂದ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. 15 ದಿನಗಳ ಹಿಂದೆ ನಿತ್ಯ ಸುಮಾರು 30 ಸಾವಿರದಷ್ಟು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಪರೀಕ್ಷೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪಾಸಿಟಿವ್ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಒಮಿಕ್ರಾನ್ ನಿಗ್ರಹ ಕ್ರಮವೆಂಬಂತೆ ವಿಮಾನ ನಿಲ್ದಾಣಗಳಲ್ಲಿ ಇದುವರೆಗೆ 3,634 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಅತೀ ಅಪಾಯ ದೇಶಗಳಿಂದ 1,218 ಮಂದಿ ಆಗಮಿಸಿದ್ದು, ಅವರನ್ನು ಪರೀಕ್ಷೆ ಒಳಪಡಿಸಿ ಪಾಸಿಟಿವ್ ಬಂದವರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.
43 ದೇಶಗಳಲ್ಲಿ ಒಮಿಕ್ರಾನ್ ಪತ್ತೆ : ಭಾರತ ಸೇರಿದಂತೆ 43 ದೇಶಗಳಲ್ಲಿ ಕೋವಿಡ್ ರೂಪಾಂತರಿ ವೈರಸ್ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಸುಮಾರು 805 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಯಾವುದೇ ದೇಶದಲ್ಲಿ ಸಾವು ಸಂಭವಿಸಿರುವ ವರದಿಗಳು ಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ರವಿವಾರದ ಅಂಕಿ ಅಂಶದ ಪ್ರಕಾರ ಒಮಿಕ್ರಾನ್ ಪ್ರಕರಣ ಸಂಖ್ಯೆ ಈ ಕೆಳಗಿನಂತಿದೆ.
1. ದಕ್ಷಿಣ ಆಫ್ರಿಕಾ- 227 ಪ್ರಕರಣ
2. ಬ್ರಿಟನ್- 160 ಪ್ರಕರಣ
3. ಬೋಟ್ಸ್ವಾನಾ- 21 ಪ್ರಕರಣ
4. ನೆದರ್ಲ್ಯಾಂಡ್- 18 ಪ್ರಕರಣ
5. ಪೋರ್ಚುಗಲ್- 28 ಪ್ರಕರಣ
6. ಬಾರತ : 21 ಪ್ರಕರಣ
7. ಇಟಲಿ- 09 ಪ್ರಕರಣ
8. ಜರ್ಮನಿ- 15 ಪ್ರಕರಣ
9. ಆಸ್ಟ್ರೇಲಿಯಾ- 16 ಪ್ರಕರಣ
10. ಕೆನಡಾ- 19 ಪ್ರಕರಣ
11. ಸೌತ್ ಕೊರಿಯಾ- 05 ಪ್ರಕರಣ
12. ಹಾಂಕಾಂಗ್- 04 ಪ್ರಕರಣ
13. ಇಸ್ರೇಲ್- 04 ಪ್ರಕರಣ
14. ಡೆನ್ಮಾರ್ಕ್- 18 ಪ್ರಕರಣ
15. ನೈಜೀರಿಯಾ- 03 ಪ್ರಕರಣ
16.ಸ್ವೀಡನ್- 04 ಪ್ರಕರಣ
17.ನಾರ್ವೇ- 19 ಪ್ರಕರಣ
18. ಸ್ಪೇನ್- 02 ಪ್ರಕರಣ
19. ಬ್ರೆಜಿಲ್- 02 ಪ್ರಕರಣ
20. ಜಪಾನ್- 01 ಪ್ರಕರಣ
21.ಜೆಕ್ ರಿಪಬ್ಲಿಕ್- 01 ಪ್ರಕರಣ
22.ಸೌದಿ ಅರೇಬಿಯಾ- 01 ಪ್ರಕರಣ
23. ಬೆಲ್ಜಿಯಂ- 01 ಪ್ರಕರಣ
24.ಆಸ್ಟ್ರೀಯಾ- 11 ಪ್ರಕರಣ
25. ಫ್ರಾನ್ಸ್- 16 ಪ್ರಕರಣ
26. ಅಮೆರಿಕಾ- 01 ಪ್ರಕರಣ
27. ಘಾನ- 33 ಪ್ರಕರಣ
28. ಐರ್ಲೆಂಡ್- 01 ಪ್ರಕರಣ
29.ಯುಎಇ- 01 ಪ್ರಕರಣ
30. ಸ್ವಿಟ್ಜರ್ಲ್ಯಾಂಡ್- 03 ಪ್ರಕರಣ
31. ಐಲ್ಯಾಂಡ್- 03 ಪ್ರಕರಣ
32. ಗ್ರೀಸ್- 01 ಪ್ರಕರಣ
33. ಫಿನ್ಲ್ಯಾಂಡ್- 01 ಪ್ರಕರಣ
34. ಜಿಂಬಾಬ್ವೆ- 50 ಪ್ರಕರಣ
35.ಮಲೇಷಿಯಾ- 01 ಪ್ರಕರಣ
36. ಲಕ್ಸೆಂಬರ್ಗ್- 01 ಪ್ರಕರಣ
37. ಶ್ರೀಲಂಕಾ- 01 ಪ್ರಕರಣ
38. ಸಿಂಗಾಪುರ್- 2 ಪ್ರಕರಣ
40. ರೊಮೇನಿಯಾ- 2 ಪ್ರಕರಣ
41. ಜಾಂಬಿಯಾ- 2 ಪ್ರಕರಣ
42. ಚಿಲಿ- 1 ಪ್ರಕರಣ
43.ಮೆಕ್ಸಿಕೊ- 1 ಪ್ರಕರಣ