80-20-84 ಮತ್ತು ಗಣತಂತ್ರದ  ಸ್ಥಿತಿ-ಗತಿಯ ಟ್ಯಾಬ್ಲೋ

ವೇದರಾಜ ಎನ್.ಕೆ.

ಗಣತಂತ್ರ ದಿನಾಚರಣೆಯ ವಾರ. ಇದಕ್ಕೆ ಮೊದಲು, ಉತ್ತರಪ್ರದೇಶದಂತಹ ಒಂದು ಪ್ರಮುಖ ರಾಜ್ಯವೂ ಸೇರಿದಂತೆ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ. ಇದಕ್ಕೆ ಕೆಲವೇ ಗಂಟೆಗಳ ಮೊದಲು, ಅಂದರೆ ಚುನಾವಣಾ ಸಂಹಿತೆ ಜಾರಿಯಾಗುವ ಸ್ವಲ್ಪವೇ ಮೊದಲು ಕೆಲವು ಅಂಕೆ-ಸಂಖ್ಯೆಗಳು ಉ.ಪ್ರ.ದ ಮುಖ್ಯಮಂತ್ರಿಗಳ ಬಾಯಿಂದ ಹೊಮ್ಮಿ ದವು. ಆಮೇಲೆ ಎರಡು ವರದಿಗಳಲ್ಲಿ ದೇಶದ ಪ್ರಸಕ್ತ ಸ್ಥಿತಿಯನ್ನು ನಿರ್ದಿಷ್ಟವಾಗಿ ತೋರಿಸುವ ಅಂಕಿ-ಅಂಶಗಳು ಪ್ರಕಟವಾದವು. ಇವುಗಳೊಂದಿಗೆ ಗಣತಂತ್ರ ದಿನಾಚರಣೆಗೆ ಸಂಬಂಧಪಟ್ಟಂತೆ ಸರಕಾರದ ಎರಡು ಹೊಸ ನಿರ್ಧಾರಗಳು -ಇವುಈ ವಾರದ ಬಹುಪಾಲು ವ್ಯಂಗ್ಯಚಿತ್ರಗಳ ವಿಷಯಗಳು. ಇವುಗಳತ್ತ ಒಂದು ನೋಟ:

ಚುನಾವಣಾ ಆಯೋಗ ಉತ್ತರಪ್ರದೇಶ ಮತ್ತಿತರ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿ ಪ್ರಕಟಿಸುವ ಸ್ವಲ್ಪವೇ ಮೊದಲು ‘ದೂರದರ್ಶನ’ ಏರ್ಪಡಿಸಿದ್ದ ಒಂದು ಸಭೆಯಲ್ಲಿ “ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ 80% ಒಂದು ಕಡೆ  20%,ಇನ್ನೊಂದು ಕಡೆ- ಬಿಜೆಪಿ ಅಧಿಕಾರ ಉಳಿಸಿಕೊಳ್ಳುತ್ತದೆ” ಎಂದರಂತೆ ಆ ರಾಜ್ಯದ ಮುಖ್ಯಮಂತ್ರಿಗಳು . 80% ಸಕಾರಾತ್ಮಕ ಚೈತನ್ಯದಿಂದ ಮುನ್ನಡೆಯುತ್ತಾರೆ, 20% ಎಂದಿನಂತೆ ವಿರೋಧಿಸುತ್ತಲೇ ಇರುತ್ತಾರೆ ಎಂದೂ ಸೇರಿಸಿದರಂತೆ.  ಸಕಾರಾತ್ಮಕ ಚೈತನ್ಯದ 80% ಯಾರು, ವಿರೋಧಿಸುವುದನ್ನು ಮುಂದುವರೆಸುತ್ತಿರುವ 20% ಯಾರು ಎಂಬುದು ಸಹಜ ಪ್ರಶ್ನೆ.

“ವಾಹ್ ಯೋಗೀಜೀ, ವಾಹ್!

ಸತೀಶ ಆಚಾರ್ಯ, ಫೇಸ್‍ ಬುಕ್

ಆದರೆ 2017ರಲ್ಲಿ ಅಲ್ಲಿ ಮತದಾನ ನಡೆದದ್ದು 61%, ಅದರಲ್ಲಿ ಬಿಜೆಪಿ ‘ಭಾರೀ ಬಹುಮತ’ ಪಡೆದದ್ದು 39% ಮತಗಳಿಂದ, ಅಂದರೆ ಒಟ್ಟು 25% ಮತದಾರರಿಂದ ಎಂದು ನೆನಪಿಸಿಕೊಂಡರೆ ಈ 80%, 20% ಅರ್ಥವೇನು ಎಂದು ವ್ಯಂಗ್ಯ ಚಿತ್ರಕಾರರಿಗಂತೂ  ತಕ್ಷಣ ಗೊತ್ತಾಗಿದೆ.

“80% ವೋಟ್‍ ನಮಗೆ ಗ್ಯಾರಂಟಿ”

ಸುರೇಂದ್ರ ,ಟ್ವಿಟರ್

 

80..70..60…….30..20 .. ಉತ್ತರಪ್ರದೇಶದಿಂದ ಬರುತ್ತಿರುವ ಸುದ್ದಿಗಳನ್ನು ನೋಡಿದರೆ  ಕೌಂಟ್‍ಡೌನ್(ಕೆಳಗಣನೆ) ಆರಂಭವಾಗಿರಬಹುದೇ ಎಂದು ಈ ವ್ಯಂಗ್ಯಚಿತ್ರಕಾರರಿಗೆ ಸಂದೇಹ..

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ಈ ನಡುವೆ ಮತ್ತೆರಡು ಅಂಕೆಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಭಾರತದಲ್ಲಿ ಅಸಮಾನತೆ ಕುರಿತಾದ ಆಕ್ಸ್ ಫಾಮ್‍ ನ ಇತ್ತೀಚಿನ ವರದಿಯ ಪ್ರಕಾರ ಕೊರೊನ ಕಾಲದ 2021ರಲ್ಲಿ 84% ಕುಟುಂಬಗಳ ಆದಾಯ ಇಳಿದಿದೆ, ಇನ್ನೂ 6 ಕೋಟಿ ಭಾರತೀಯರು ದಾರಿದ್ರ್ಯಕ್ಕೆ ಇಳಿದಿದ್ದಾರೆ; ಇನ್ನೊಂದೆಡೆಯಲ್ಲಿ ಭಾರತೀಯ ಶತಕೋಟ್ಯಾಧಿಪತಿಗಳ ಸಂಖ್ಯೆ 102ರಿಂದ 142ಕ್ಕೇರಿದೆ, ಅವರ ಒಟ್ಟು ಸಂಪತ್ತು ದ್ವಿಗುಣಕ್ಕಿಂತಲೂ ಹೆಚ್ಚಿದೆ, 23.14 ಲ್ಷ ಕೋಟಿ ರೂ.ಗಳಿಂದ 53.16 ಲಕ್ಷ ಕೋಟಿರೂ. ಗೇರಿದೆ.

ಈ ವರದಿಯ ಶಿರೋನಾಮೆಯೇ- “ಅಸಮಾನತೆ ಕೊಲ್ಲುತ್ತದೆ”!

ಪಿ.ಮಹಮ್ಮದ್, ವಾರ್ತಾಭಾರತಿ

ಆದರೂ, ಜನಗಳನ್ನು ‘ಧರ್ಮ’ ಎಂಬುದರ80% ಎಂಬ ಅಂಕೆಯಷ್ಟು  ನಿರುದ್ಯೋಗ,ಬಡತನದ 84% ತಟ್ಟುವುದಿಲ್ಲ ಎಂಬ ಧೈರ್ಯ ಆಳುವಮಂದಿಗೆ!

“ ಆರಾಮವಾಗಿರಿ! ಅವರಿಗೆ 80%ಎಂದಾಗಷ್ಟೇಆವೇಶಬರುವುದು”

(ಸಂದೀಪ್ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ಆದರೂ…ಈ 80-20ರ ಮಾತು ನಡೆಯುತ್ತಿದ್ದಾಗಲೇ , ಉತ್ತರಪ್ರದೇಶದಲ್ಲಿಯೂ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ 

                                                           “80%ನೋ, ಅಥವ 20%ನೋ?”  ?”          “93%! ಇನ್ನೂ ನಿರುದ್ಯೋಗಿ!”           

ಅಲೋಕ್‍ ನಿರಂತರ್, ಫೇಸ್‍ ಬುಕ್

ಮತ್ತೊಂದು  ವರದಿ (ಐಸಿಇ 360ಸರ್ವೆ) ಪ್ರಕಾರ 1995ರಿಂದ ಸತತವಾಗಿ ಏರುತ್ತಿದ್ದ 20% ಅತ್ಯಂತ ಬಡಜನರ ವಾರ್ಷಿಕ ಆದಾಯ, ಕಳೆದ 5 ವರ್ಷಗಳಲ್ಲಿ 53%ದಷ್ಟು ಇಳಿದಿದೆ. ಇದೇ ಅವಧಿಯಲ್ಲಿ 20% ಅತ್ಯಂತ ಶ್ರೀಮಂತರ ಆದಾಯ 39%ದಷ್ಟು ಏರಿದೆ!

ಮೂರು ಪ್ರಮುಖ ಪ್ರತಿಪಕ್ಷಗಳ ಆಳ್ವಿಕೆಯ ರಾಜ್ಯಗಳ ಗಣತಂತ್ರ ದಿನದ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿದ ವಿವಾದ ಎದ್ದಿದ್ದ ಹಿನ್ನೆಲೆಯಲ್ಲಿ, ಇದೊಂದು ಸ್ತಬ್ಧಚಿತ್ರಕ್ಕೆ ಸೂಕ್ತ ವಿಷಯವಾಗಬಲ್ಲದು ಎಂದು ಈ ವ್ಯಂಗ್ಯಚಿತ್ರಕಾರರಿಗೆ ಅನಿಸಿದೆ.

“ಇರವಿನ ದೆಸೆಯಿಂದೊಂದು ಸ್ತಬ್ಧಚಿತ್ರ”

20%ಶ್ರೀಮಂತರು⬆  20%ಬಡವರು⬇

ಐಸಿಇ360 ಸರ್ವೆ

(ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ಪ್ರೆಸ್

ಗಣತಂತ್ರ ದಿನಾಚರಣೆಗೆ ಸಂಬಂಧಪಟ್ಟಂತೆ ಎದ್ದ ಇನ್ನೆರಡು  ವಿವಾದಗಳೆಂದರೆ ಗಣತಂತ್ರ ದಿನಾಚರಣೆ ಸಮಾರೋಪ(ಬೀಟಿಂಗ್‍ ದಿ ರಿಟ್ರೀಟ್‍)ದಂದು ಕಳೆದ 70ವರ್ಷಗಳಿಂದ ಸಶಸ್ತ್ರ ಪಡೆಗಳ ವಾದ್ಯವೃಂದಗಳು ನುಡಿಸುತ್ತಿದ್ದ ಆಂಗ್ಲ ಹಾಡು “ಅಬೈಡ್‍ ವಿತ್‍ ಮೀ”(ನನ್ನ ಜೊತೆಗಿರು)”  ಇನ್ನು ಮುಂದೆ ಇರುವುದಿಲ್ಲ ಎಂದು ನಿರ್ಧರಿಸಿರುವುದು ಮತ್ತು ಯುದ್ಧಗಳಲ್ಲಿ ಪ್ರಾಣಾರ್ಪಣೆ ಮಾಡಿದ  ಭಾರತೀಯ ಯೋಧರ  ಸ್ಮರಣೆಯ ಎರಡು ‘ಅಮರ ಜ್ಯೋತಿ’ಗಳನ್ನು ವಿಲೀನ ಗೊಳಿಸಿದ್ದು.

ಇವೂ ವ್ಯಂಗ್ಯಚಿತ್ರಗಳಲ್ಲಿ 80-20-84 ಶೇ.ದ ಭಾಗಗಳೇ ಆಗಿಬಿಟ್ಟಿವೆ ಎಂಬುದು ಗಮನಾರ್ಹ.

 “ನೌಕರಿ…ಆದಾಯ…?”

“ನಿನ್ನ ಆದಾಯವನ್ನು ಉದ್ಯಮಿಗಳ

  ಆದಾಯದಲ್ಲಿ ವಿಲೀನ ಮಾಡಿಬಿಟ್ಟೆ”

ಅಲಂಕಾರ್ಗೋಸ್ವಾಮಿ, ಫೇಸ್‍ ಬುಕ್

‘ನನ್ನ ಜೊತೆಗಿರು’ ಹಾಡನ್ನು ಕೈಬಿಟ್ಟರೇನಂತೆ, ಕಳೆದ 5 ವಷ‍ರರ್ಷಗಳಲ್ಲಿ ಭಾರತದ ಬಡವರು ತಮ್ಮ ಅರ್ಧದಷ್ಟು  ಆದಾಯ ಕಳಕೊಂಡರೇನಂತೆ, ಜನಗಳಂತೂ,  ಏನೇ ಆಗಲಿ, ತಮ್ಮ ಜೊತೆಗಿರಬೇಕು ಎಂದು ಆಳುವ ಮಂದಿ ಹೇಳುತ್ತಿದ್ದರೆ, ಜನತೆ ಸಂವಿಧಾನಕ್ಕೆ ಮತ್ತು ಸಂವಿಧಾನ ಜನತೆಗೆ ‘ನನ್ನ  ಜೊತೆಗಿರು” ಎಂದು ಹೇಳಬೇಕಾಗಿದೆ

“ನನ್ನಜೊತೆಗಿರು”                                                          “ನನ್ನಜೊತೆಗಿರು”

(ಸಂದೀಪಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

 ಇದು ಗಾಂಧೀಜಿಗೆ ಬಹುಪ್ರಿಯವಾಗಿದ್ದ ಹಾಡು ಎನ್ನಲಾಗಿದೆ.
ಅದೇ ರೀತಿ ಎರಡು ‘ಅಮರ ಜ್ಯೋತಿ’ಗಳ ವಿಲೀನ “ಒಂದು ದೇಶ ಒಂದು ಜ್ಯೋತಿ’ ಎಂದು ಇತಿಹಾಸದ ‘ಮರುಲೇಖನ’ದ ಭಾಗವಿರಬಹುದೇ, ಅಥವ ಪ್ರಧಾನಿಗಳ ಕೋಟಿಗಟ್ಟಲೆ ವೆಚ್ಚದ  ಭವ್ಯ ‘ಸೆಂಟ್ರಲ್‍ ವಿಸ್ತಾ’ ಯೋಜನೆಯ ಭಾಗವೇ?

  “ಒಂದು ದೇಶ  ಒಂದು ಜ್ಯೋತಿ”                        ಹೊಸ ಸಂಸದ್‍ ಭವನ:ನಿರ್ಮಾಣ ವೆಚ್ಚದಲ್ಲಿ 29% ಏರಿಕೆ

                                                                                       ತೆರಿಗೆದಾರರಿಗೊಂದು ‘ಅಮರಜ್ಯೋತಿ’ ಒಳ್ಳೆವಿಚಾರ

ಪಂಜು ಗಂಗೊಳ್ಳಿ, ಫೇಸ್‍ ಬುಕ್                                   (ಸಜಿತ್‍ ಕುಮಾರ್, ಡೆಕ್ಕನ್ಹೆರಾಲ್ಡ್)

ಕೊನೆಯದಾಗಿ, ಗಣತಣತ್ರದಿನದಂದು ಇನ್ನೊಂದು ಥ್ಯಾಂಕ್ಯು…
ಇದು ಪ್ರಧಾನ ಮಂತ್ರಿಗಳಿಗಲ್ಲ, ಅವರ ಸ್ಟೈಲಿಸ್ಟ್ , ಅಂದರೆ ವೇಷಭೂಷಣಗಳ ವಿನ್ಯಾಸಕಾರರಿಗೆ….

 

ಪ್ರಧಾನ ಮಂತ್ರಿಗಳು ಈ ಬಾರಿ ಗಣತಂತ್ರ ದಿನದ ವೇಷಭೂಷಣದ ಭಾಗವಾಗಿ

ಉತ್ತರಾಖಂಡದ ಟೋಪಿ ಮತ್ತು ಮಣಿಪುರದ ಶಾಲು ಧರಿಸಿದ್ದರು.

“ನಮ್ಮ ವಿವಿಧತೆಯಲ್ಲಿ ಐಕ್ಯತೆಯ ಭಾವವನ್ನು ಜೀವಂತ ವಿಟ್ಟಿರುವುದಕ್ಕೆ ದೇಶ ನಿಮಗೆ ಆಭಾರಿಯಾಗಿದೆ, ಸಾರ್!”

(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ಉತ್ತರಾಖಂಡ ಮತ್ತು ಮಣಿಪುರ ಮುಂದಿನ ಫೆಬ್ರುವರಿ-ಮಾರ್ಚ್‍ ನಲ್ಲಿ ಚುನಾವಣೆ ಕಾಣಲಿರುವ 5 ರಾಜ್ಯಗಳಲ್ಲಿ ಸೇರಿವೆ ಎಂದು ಬೇರೆ ಹೇಳಬೇಕಾಗಿಲ್ಲ.

Donate Janashakthi Media

Leave a Reply

Your email address will not be published. Required fields are marked *