ಬೆಂಗಳೂರು : ಸಾರಿಗೆ ನೌಕರರರು ತಮ್ಮ ಬೇಡಿಕೆ ಈಡೇರಿಸಬೇಕೆಂದು ನಡೆಸುತ್ತಿರುವ ಅನಿರ್ಧಿಷ್ಟ ಹೋರಾಟ ಇಂದಿಗೆ 8 ನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಸಾರಿಗೆ ನೌಕರರ ಮುಷ್ಕರ ಜೋರಾಗಿದ್ದು, ವಿನೂತನ ರೀತಿಯಲ್ಲಿ ಮುಷ್ಕರ ಮುಂದುವರೆಸಿದ್ದಾರೆ.
ಸಾರಿಗೆ ನೌಕರರು ತಮ್ಮ ಪ್ರಮುಖ ಬೇಡಿಕೆಯಾದ 6 ನೇ ಸುತ್ತಿನ ಆಯೋಗ ಜಾರಿಮಾಡಲೇಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಹಿಂತೆಗೆದುಕೊಳ್ಳುವ ಮಾತೇ ಇಲ್ಲ ಎಂದು ಸಾರಿಗೆ ನೌಕಕರರ ಮುಖಂಡರು ಹೇಳಿಕೆ ನೀಡಿದ್ದಾರೆ. ರಸ್ತೆಗಳಿಗೆ ಇಳಿಯದ ಬಸ್ ಗಳಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಆಟೋ, ಓಲಾ, ಉಬರ್ ಗಳ ರೇಟ್ ಕೂಡ್ ಜಂಪ್ ಆಗಿದೆ. ಪ್ರಯಾಣಿಕರು ಬಸ್ ಬಿಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ : ಸಾರಿಗೆ ನೌಕರರ ಮುಷ್ಕರ : ನಾಳೆಯೂ ಸ್ತಬ್ದವಾಗುತ್ತೆ ಸಾರ್ವಜನಿಕ ಸಾರಿಗೆ
ಆದರೆ ಇದಕ್ಕೆ ಸಾರಿಗೆ ನೌಕರರು ಪ್ರತಿಕ್ರಿಯೇ ನೀಡಿದ್ದು, “ನಿಮ್ಮಂತೆ ನಾವು ಕೂಡ ಕೆಲಸ ಮಾಡುತ್ತೇವೆ. ಮಾನ್ಯ ಸಿಎಂ ಅವರಿಗೆ ಅದೇಷ್ಟು ಮನವಿ ಮಾಡಿದರು ಅವರು ನಮ್ಮ ಕಷ್ಟಗಳಿಗೆ ಸ್ಪದಿಸುತ್ತಿಲ್ಲ. ಸಾರಿಗೆ ಇಲಾಖೆಗೆ ಅಷ್ಟು ನಷ್ಟವಾಯಿತು ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮಿಂದ ತಾನೇ ಸಾರಿಗೆಗೆ ಲಾಭವಾಗುತ್ತಿರುವುದು, ನಾವು ಬೇವರು ಸುರಿಸಿದ್ದೇವೆ. ನಮ್ಮಗೂ ತಾಯಿ, ತಂದೆ, ಹೆಂಡತಿ, ಮಕ್ಕಳಿದ್ದಾರೆ. ನಾವು ಲಾಕ್ ಡೌನ್ ನಲ್ಲಿ ಸಂಬಂಳವಿಲ್ಲದೇ ಪರದಾಡಿದ್ದೇವೆ. ನಾಲ್ಕು ತಿಂಗಳ ಸಂಬಳವಿಲ್ಲದೆ ಬದುಕು ನಡೆಸಲು ಕಷ್ಟವಾಗುತ್ತಿದೆ. ಇದನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಆದರೆ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಎಷ್ಟು ಸರಿ? ನಮ್ಮ ಕಷ್ಟಕ್ಕೂ ಸ್ಪಂದಿಸಿ ಎಂದು ಸಾರಿಗೆ ನೌಕಕರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನು ಓದಿ :ಸಾರಿಗೆ ನೌಕರರ ಮುಷ್ಕರ : ತರಬೇತಿ ನಿರತ ಬಿಎಂಟಿಸಿ ನೌಕರರ ವಜಾ
ಕೆಲವು ಭಾಗಗಳಲ್ಲಿ ಸಾರಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತೇವೆ ಎಂದು ಭಯಪಟ್ಟು ಬಸ್ ಓಡಿಸಲು ಸಿದ್ಧರಾದ ನೌಕರರನ್ನು ಹೂವಿನ ಹಾರಗಳನ್ನು ಹಾಕಿ ಸನ್ಮಾನಿಸಿ, ಮನವಿ ಮಾಡಿದ್ದೇವೆ, ತಮ್ಮಲ್ಲಿರುವ ಅಷ್ಟು ರೋಷ, ಸಿಟ್ಟು, ಅಸಹಾಯಕತೆಯನ್ನು ಮೀರಿ ಪ್ರತಿಭಟಿಸುತ್ತಿದ್ದಾರೆ. ಕೆಲ ಸಾರಿಗೆ ನೌಕರರು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ನೌಕರರ ಪರಿಸ್ಥಿತಿ ಹೀನವಾಗಿದೆ. ಆದಷ್ಟು ಇದನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ಒಂದು ನಿರ್ಧಾರಕ್ಕೆ ಮುಂದಾಗಬೇಕು ಎಂದು ಸಾರಿಗೆ ನೌಕರರು ಮನವಿ ಮಡಿಕೊಳ್ಳುತ್ತಿದ್ದಾರೆ.