ಸರಕಾರದ ನಿರ್ಲಕ್ಷ್ಯ : ವಿಧಾನಸೌಧದತ್ತ ಹೊರಟ ಬಿಸಿಯೂಟ ನೌಕರರ ಮೇಲೆ ಪೊಲೀಸ್‌ ದೌರ್ಜನ್ಯ

ಬೆಂಗಳೂರು :  ಬಿಸಿಯೂಟ ನೌಕರರನ್ನು ಖಾಯಂ ಮಾಡಬೇಕು, ನಿವೃತ್ತಿ ಹೊಂದುವ ನೌಕರರಿಗೆ 1 ಲಕ್ಷ ರೂ ಇಡುಗಂಟು ನೀಡಬೇಕು ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಬಿಸಿಯೂಟ ನೌಕರರು ನಡೆಸುತ್ತಿರುವ ಪ್ರತಿಭಟನೆ 3 ನೇ ದಿನಕ್ಕೆ ಕಾಲಿಟ್ಟಿದೆ.

ಫೆ.13ರಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ಬುಧವಾರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕಾರ್ಯಕರ್ತೆಯರು ನಿರ್ಧರಿಸಿದ್ದರು. ಬೆಳಗ್ಗೆ 10;30 ಕ್ಕೆ ರಸ್ತೆ ತಡೆ ನಡೆಸಿದ ಬಿಸಿಯೂಟ ಕಾರ್ಯಕರ್ತೆಯರು 12 ಗಂಟೆಯೊಳಗೆ ಸಚಿವರು ಬರದೆ ಹೋದಲ್ಲಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಸಮಯ 12 ಕಳೆದರೂ ಸಚಿವರು ಬಾರದ ಹಿನ್ನಲೆಯಲ್ಲಿ ಘೋಷಣೆಗಳನ್ನು ಕೂಗುತ್ತ ವಿಧಾನಸೌಧದತ್ತ ಹೆಜ್ಜೆ ಹಾಕಿದರು. ಈ ವೇಳೆ ಪೋಲೀಸರು ಒತ್ತಾಯ ಪೂರ್ವಕವಾಗಿ ತಡೆಯಲು ಪ್ರಯತ್ನಿಸಿದಾಗ ಹೋರಾಟಗಾರರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು. ಈ ವೇಳೆ ಹಲವು ಬಿಸಿಯೂಟ ನೌಕರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕ್ಯಾಡ್‌ ತಳ್ಳಿ ವಿಧಾನಸೌಧಕ್ಕೆ ಹೊರಟಾಗ ಕೊನೆಗೆ ಪೊಲೀಸರು ಹಲವು ಕಾರ್ಯಕರ್ತರನ್ನು ಬಂಧಿಸಿದರು.

ಇದನ್ನೂ ಓದಿನಿವೃತ್ತ ಬಿಸಿಯೂಟ ನೌಕರರಿಗೆ ಇಡಿಗಂಟು ಜಾರಿಗೊಳಿಸಲು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್‌.ವರಲಕ್ಷ್ಮಿ,  ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಸೇರಿದಂತೆ ನೂರಾರು ನಾಯಕರನ್ನು ಬಂಧಿಸಿದ್ದಾರೆ.

ನಿವೃತ್ತಿ ಹೊಂದುವ ಅಕ್ಷರ ದಾಸೋಹದ ನೌಕರರಿಗೆ .1 ಲಕ್ಷ ಇಡುಗಂಟು ನೀಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು. ಅಡುಗೆ ಸಿಬ್ಬಂದಿ ಅಪಘಾತದಲ್ಲಿ ಮರಣ ಹೊಂದಿದರೆ ಕುಟುಂಬದವರಿಗೇ ಉದ್ಯೋಗ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *