ದೇಶ ಸ್ವತಂತ್ರಗೊಂಡು 76 ವರ್ಷ; ರಾಜ್ಯದಲ್ಲಿದ್ದಾರೆ 7,449 ಮಲ ಹೊರುವರು!

ಮಲ ಹೊರುವ ಪದ್ದತಿಯಲ್ಲಿ ತೊಡಗಿರುವ 92.33% ಜನರು ಪರಿಶಿಷ್ಟ ಜಾತಿ (SC) ಮತ್ತು 3.3% ಜನರು ಪರಿಶಿಷ್ಟ ಪಂಗಡ (ST) ಸಮುದಾಯದಕ್ಕೆ ಸೇರಿದವರಾಗಿದ್ದಾರೆ 

ಬೆಂಗಳೂರು: ದೇಶಕ್ಕೆ ಸ್ವಾಂತತ್ಯ್ರ ಸಿಕ್ಕಿ 76 ವರ್ಷಗಳು ಕಳೆದರೂ, ರಾಜ್ಯದಲ್ಲಿ ‘ಮಲ ಹೊರುವ’ ಪದ್ದತಿಯನ್ನು ನಿಷೇಧಿಸಿ 50 ವರ್ಷಗಳಾದರೂ ಕರ್ನಾಟಕದಾದ್ಯಂತ 7,449 ಜನರು ಇನ್ನೂ ಮಲಹೊರುವ ಪದ್ದತಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಗುರುತಿಸಲಾಗಿದೆ. ಈ ಪದ್ದತಿಯಲ್ಲಿ ತೊಡಗಿರುವ 92.33% ಕಾರ್ಮಿಕರು ಪರಿಶಿಷ್ಟ ಜಾತಿ (SC) ಮತ್ತು 3.3% ಕಾರ್ಮಿಕರು ಪರಿಶಿಷ್ಟ ಪಂಗಡಗಳಿಗೆ (ST) ಸೇರಿದ್ದಾರೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ನಡೆಸಿದ ಇತ್ತೀಚಿನ ಅಧ್ಯಯನ ತಿಳಿಸಿದೆ ಎಂದು TNIE ಪತ್ರಿಕೆಯು ವರದಿ ಮಾಡಿದೆ.

ಕರ್ನಾಟಕ ಸರ್ಕಾರವು 1972 ರಲ್ಲಿ ಐಪಿಡಿ ಸಾಲಪ್ಪ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಮಲಹೊರುವ ಕೆಲಸ ಮಾಡುವವರ ಜೀವನ ಮತ್ತು ಕೆಲಸದ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ತನ್ನ ಅಂತಿಮ ವರದಿಯನ್ನು 1976ರಲ್ಲಿ ಸಲ್ಲಿಸಿತು. ಈ ಸಮಿತಿಯ ಮಧ್ಯಂತರ ಶಿಫಾರಸುಗಳನ್ನು ಆಧರಿಸಿ 1973ರ ಆಗಸ್ಟ್ 15ರಂದು ಮಲ ಹೊರುವ ಪದ್ದತಿಯನ್ನು ನಿಷೇಧಿಸಿ ಸುತ್ತೋಲೆಯನ್ನು ಹೊರಡಿಸಲಾಯಿತು.

ಇದನ್ನೂ ಓದಿ: ರಾಯಚೂರು ವಿವಿಯಲ್ಲಿ ಕೋಟ್ಯಾಂತರ ರೂ. ಅನುದಾನ ದುರ್ಬಳಕೆ : ಶೇ 900 ಹೆಚ್ಚುವರಿ ಹಣ ಪಾವತಿ!

ಕರ್ನಾಟಕದಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ (SKKS) ಆಶ್ರಯದಲ್ಲಿ 2020ರ ಜನವರಿಯಲ್ಲಿ ನಡೆಸಲಾದ ‘ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಇನ್ ಕರ್ನಾಟಕ – ಎ ಸಿಚುಯೇಶನ್ ಅಸೆಸ್‌ಮೆಂಟ್’ ಎಂಬ ತನ್ನ ಅಧ್ಯಯನದಲ್ಲಿ ಸಿದ್ಧಾರ್ಥ ಕೆಜೆ ಹೇಳಿದ್ದಾರೆಂದು TNIE ಪತ್ರಿಕೆ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿದ ಕರ್ನಾಟಕ ಸಫಾಯಿ ಕರ್ಮಚಾರಿ ಕಾವಲು ಸಮಿತಿ (SKKS)ಯ ರಾಜ್ಯ ಸಂಚಾಲಕ ಕೆ.ಬಿ. ಓಬಳೇಶ್, “ಪದ್ದತಿಯನ್ನು ನಿಷೇಧಿಸಿ ಐವತ್ತು ವರ್ಷಗಳ ನಂತರ, ಭಾರತವು ತನ್ನ 76 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿವ ವೇಳೆಯು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಲಹೊರುವ ಪದ್ದತಿಯನ್ನು ಮಾಡುವ 7,449 ಜನರನ್ನು ಗುರುತಿಸಲಾಗಿದೆ” ಎಂದು ಹೇಳಿದ್ದಾರೆ.

ಮಲಹೊರುವ ಪದ್ದತಿಯು ನಿಷೇಧಗೊಂಡರೂ ಈಗಲೂ ಪ್ರಚಲಿತದಲ್ಲಿರುವ ಪದ್ದತಿಯಾಗಿದೆ. 1993 ರಲ್ಲಿ ಭಾರತೀಯ ಸಂಸತ್ತು, ”ದಿ ಎಂಪ್ಲಾಯಿಮೆಂಟ್‌ ಆಫ್‌ ಮ್ಯಾನುಯಲ್ ಸ್ಕ್ಯಾವೆಂಜರ್ಸ್‌ ಆಂಡ್ ಕಂನ್ಸ್‌ಟ್ರಕ್ಷನ್‌ ಆಫ್‌ ಡ್ರೈ ಲ್ಯಾಟ್ರಿನ್ಸ್‌ (EMSCDL) (ಪ್ರೋಹಿಬಿಷನ್) ಆಕ್ಟ್‌-1993” ಅನ್ನು ಅಂಗೀಕರಿಸಿತು. ಈ ಕಾಯ್ದೆಯು ಮಲಹೊರುವ ಪದ್ದತಿಯನ್ನು ನಿಷೇಧಿಸಿತ್ತು.

ಇದನ್ನೂ ಓದಿ: ದ್ವೇಷದಾಟ 2023 : ಮಣಿಪುರ, ಹರ್ಯಾಣ ,ರೈಲಿನಲ್ಲಿ ಬುಲೆಟ್‍ಬಾಜಿ

ಕಾಯ್ದೆಯನ್ನು ರಾಜ್ಯಗಳು ಅಂಗೀಕರಿಸಿ ಜಾರಿಗೆ ತರಬೇಕಿತ್ತು. ಆದರೆ ಕೆಲವು ರಾಜ್ಯಗಳು ಇದನ್ನು ಅಳವಡಿಸಿಕೊಂಡಿತಾದರೂ ಯಾವುದೆ ರಾಜ್ಯವು ಅದನ್ನು ಕಾರ್ಯಗತಗೊಳಿಸಲಿಲ್ಲ. EMSCDL ಕಾಯ್ದೆಯು ಸಂಪೂರ್ಣ ವಿಫಲವಾದ ನಂತರ, 2013 ರಲ್ಲಿ, ಸಂಸತ್ತು “ಪ್ರೋಹಿಬಿಷನ್ ಆಫ್‌ ಎಂಪ್ಲಾಯಿಮೆಂಟ್‌ ಆಸ್ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಆಂಡ್‌ ದೈಯರ್ ರಿಹಬಿಲಿಯೇಷನ್” (PEMSR) ಕಾಯಿದೆಯನ್ನು ಅಂಗೀಕರಿಸಿತು. ಈ ಕಾಯಿದೆಯು ಮಲ ಹೊರುವ ಪದ್ದತಿಯನ್ನು ನಿಷೇಧಿಸುವುದು ಮಾತ್ರವಲ್ಲದೆ ಅಂತಹ ಕೆಲಸ ಮಾಡುವವರಿಗೆ ಪುನರ್ವಸತಿ ನೀಡುವ ಕಾಯ್ದೆಯಾಗಿದೆ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU) ನಡೆಸಿದ ಇತ್ತೀಚಿನ ಅಧ್ಯಯನವು ಕರ್ನಾಟಕದ 30 ಜಿಲ್ಲೆಗಳಲ್ಲಿ ಮಲ ಹೊರುವ ಪದ್ದತಿಯ ಕೆಲಸದಲ್ಲಿ ತೊಡಗಿರುವ 92.33% ಕಾರ್ಮಿಕರು ಪರಿಶಿಷ್ಟ ಜಾತಿಯವರಾಗಿದ್ದು, 3.3% ಪರಿಶಿಷ್ಟ ಪಂಗಡ(ST)ದ ಸಮುದಾಯಕ್ಕೆ ಸೇರಿದ್ದಾರೆ ಎಂದು ಅಧ್ಯಯನ ಹೇಳಿದೆ. ಈ ಸಮೀಕ್ಷೆಗೆ ಒಳಗಾದವರಲ್ಲಿ ಸುಮಾರು 74% ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ ಎಂದು TNIE ಪತ್ರಿಕೆ ವರದಿ ಮಾಡಿದೆ.

“ಕರ್ನಾಟಕದಲ್ಲಿ 7,449 ಮಲ ಹೊರುವ ಪದ್ದತಿಯಲ್ಲಿ ಕೆಲಸ ಮಾಡುವ ಜನರಿದ್ದಾರೆ. ಆದರೆ ರಾಜ್ಯದ 18 ಜಿಲ್ಲೆಗಳಲ್ಲಿ 10 ಜಿಲ್ಲೆಗಳ 2020-21ರ ಸಮೀಕ್ಷೆಯಲ್ಲಿ ಜಿಲ್ಲಾಡಳಿತ ಶೂನ್ಯ ಮಲಹೊರುವ ಪದ್ದತಿಯಿದೆ ಎಂದು ಹೇಳಿದೆ” ಎಂದು ಓಬಳೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ವಸಾಹತುಶಾಹಿ ‘ದೇಶದ್ರೋಹ ಕಾನೂನು’ ರದ್ದು; ಕಠಿಣ ಶಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಪರಿಚಯ?

“ಸಮೀಕ್ಷೆಯ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಪ್ರಕಾರ, ಜಿಲ್ಲಾಡಳಿತವು ಆಯ್ಕೆ ಮಾಡಿದ ಸರ್ವೇಕ್ಷಣಾ ಸಮಿತಿಯು ಮೊದಲು ತಮ್ಮ ಜಿಲ್ಲೆಗಳಲ್ಲಿ ಮಲ ಹೊರುವವರ ಸಮೀಕ್ಷೆಯನ್ನು ಮಾಡಬೇಕಾಗಿದೆ. ಈ ಸರ್ವೇಕ್ಷಣಾ ಸಮಿತಿಯಲ್ಲಿ ಮಲಹೊರುವ ಪದ್ದತಿಯಂತೆ ಕೆಲಸ ಮಾಡುವ ಸಮುದಾಯದ ಒಬ್ಬ ವ್ಯಕ್ತಿ ಇರುವಂತೆ ಕಡ್ಡಾಯಗೊಳಿಸಲಾಗಿತ್ತು. ಆದರೆ ಆ ಸಮುದಾಯದ ಯಾವುದೇ ಸದಸ್ಯರಿಲ್ಲದೆ ಸಮೀಕ್ಷೆಯನ್ನು ಮಾಡಲಾಗಿದೆ ಹಾಗೂ ಮಲ ಹೊರುವ ಪದ್ದತಿಯ ಯಾವುದೆ ಶೌಚಾಲಯವಿಲ್ಲ ಎಂದು ಸಮೀಕ್ಷೆಯು ತೀರ್ಮಾನಿಸಿದೆ” ಎಂದು ಓಬಳೇಶ್ ಹೇಳಿದ್ದಾರೆ.

“ಮಲಹೊರುವ ಸಮುದಾಯವು ಪ್ರಬಲವಾಗಿರುವ ಎಂಟು ಜಿಲ್ಲೆಗಳಲ್ಲಿ, ಈ ಸಮಿತಿಯು 2,400 ಮಲ ಹೊರುವ ಪದ್ದತಿಯಂತೆ ಕೆಲಸ ಮಾಡುವವರನ್ನು ಗುರುತಿಸಿದ್ದಾರೆ. ಉಳಿದ 10 ಜಿಲ್ಲೆಗಳಲ್ಲಿ ಅಸಮರ್ಪಕ ಸಮೀಕ್ಷೆ ಮಾಡಲಾಗಿದೆ. ಹೀಗಾಗಿ ಮಲಹೊರುವ ಕಾರ್ಮಿಕರನ್ನು ಪುನರ್ವಸತಿ ಯೋಜನೆಯಿಂದ ಹೊರಗಿಡಲಾಗಿದೆ. ಅವರಿಗೆ ನೀಡುವ ಪರಿಹಾರದಲ್ಲಿ ಉಚಿತ ಶಿಕ್ಷಣ, ಪರಿಹಾರ ಮತ್ತು ಪರ್ಯಾಯ ಜೀವನೋಪಾಯ ವೃತ್ತಿಗೆ ಪರಿವರ್ತನೆ ಮಾಡುವ ಸೌಲಭ್ಯವಿದೆ” ಎಂದು ಓಬಳೇಶ್ ಅವರು ಹೇಳಿದ್ದಾರೆ.

ಮಲಹೊರುವ ಪದ್ದತಿಯನ್ನು ಸಾಮಾನ್ಯವಾಗಿ ಒಂದು ಸಮುದಾಯವು ಆನುವಂಶಿಕ ಉದ್ಯೋಗವಾಗಿ ಮಾಡುತ್ತಿದೆ. “ಈ ಕೆಲಸವನ್ನು ನಿರ್ವಹಿಸುವವರು ಸಮಾಜದ ಅತ್ಯಂತ ಅಂಚಿನಲ್ಲಿರುವ ವರ್ಗಕ್ಕೆ ಸೇರಿದವರಾಗಿರುವುದರಿಂದ, ಅದನ್ನು ತೊಡೆದುಹಾಕುವುದನ್ನು ಸರ್ಕಾರವು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ. ಸಮಾಜವಾಗಿ, ನಾವು ನಮ್ಮ ಸುತ್ತಮುತ್ತ ಸ್ವಚ್ಛವಾಗಿ ಇರಬೇಕು ಎಂದು ಬಯಸುತ್ತೇವೆ. ಆದರೆ ಈ ತ್ಯಾಜ್ಯವನ್ನು ಸ್ವಚ್ಛಗೊಳಿಸುವವರು ಯಾರು ಎಂಬ ಪ್ರಶ್ನೆಯನ್ನು ಕೇಳುತ್ತಲೆ ಇದ್ದೇವೆ” ಎಂದು “ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಇನ್ ಕರ್ನಾಟಕ – ಎ ಸಿಚುಯೇಶನ್ ಅಸೆಸ್‌ಮೆಂಟ್” ಅಧ್ಯಯನ ನಡೆಸಿರುವ ಸಿದ್ಧಾರ್ಥ ಪ್ರತಿಪಾದಿಸಿದ್ದಾರೆ ಎಂದು TNIE ಪತ್ರಿಕೆ ವರದಿ ಮಾಡಿದೆ.

ವಿಡಿಯೊ ನೋಡಿ: ಸೌಜನ್ಯಳಿಗೆ ನ್ಯಾಯ ಸಿಗುವವರೆಗೂ ಧರ್ಮಸ್ಥಳ ಸಂಘದ ಸಾಲ ಕಟ್ಟುವುದಿಲ್ಲ

Donate Janashakthi Media

Leave a Reply

Your email address will not be published. Required fields are marked *