ಸಿರಿಯಾ-ಟರ್ಕಿಯಲ್ಲಿ ಪ್ರಬಲ ಭೂಕಂಪನ; 200ಕ್ಕೂ ಮಂದಿ ಸಾವು-ಕಟ್ಟಡಗಳು ಕುಸಿತ

ಇಸ್ತಾಂಬುಲ್: ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ ಭೂಕಂಪನ ಸಂಭವಿಸಿದೆ. ತೀವ್ರತೆ ಪ್ರಮಾಣ 7.8ರಷ್ಟು ಎಂದು ವರದಿಯಾಗಿದೆ. ಇಲ್ಲಿನ ನಗರಗದ ಹಲವು ಕಟ್ಟಡಗಳು ಕುಸಿದಿದ್ದು, ಭೂಕಂಪನದ ತೀವ್ರತೆಯಿಂದ ನೆರೆಯ ಸಿರಿಯಾದಲ್ಲಿಯೂ ಹಾನಿಯುಂಟಾಗಿದೆ. ಇದರಿಂದ ಇನ್ನೂರಕ್ಕು ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಭೂಕಂಪನದಿಂದ ಸಿರಿಯಾ ಹಾಗೂ ಟರ್ಕಿಯಲ್ಲಿ ಸಾವಿಗೀಡಾಗಿದ್ದು, ಬದುಕುಳಿದವರನ್ನು ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಎಂದು ಸಿರಿಯಾದ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿರಿಯಾದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಪ್ರದೇಶ ಮತ್ತು ಬಂಡುಕೋರ ಬಣದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ 119 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಟರ್ಕಿಯಲ್ಲಿ ಪದೇ ಪದೇ ಭೂಕಂಪವಾಗುತ್ತದೆ. ಇದರಿಂದ ಲೆಬನಾನ್ ಮತ್ತು ಸಿರಿಯಾದಲ್ಲೂ ಭೂಕಂಪದ ಅನುಭವವಾಗಿದೆ. ಉತ್ತರ ನಗರವಾದ ಅಲೆಪ್ಪೊ ಮತ್ತು ಕೇಂದ್ರ ನಗರವಾದ ಹಮಾದಲ್ಲಿ ಕೆಲವು ಕಟ್ಟಡಗಳು ಕುಸಿದಿವೆ ಎಂದು ಸಿರಿಯಾದ ಮಾಧ್ಯಮಗಳು ವರದಿ ಮಾಡಿವೆ.

ಭೂಕಂಪನ 17.9 ಕಿ.ಮೀ. ವರೆಗೂ ವ್ಯಾಪಿಸಿದ್ದು, ಸುಮಾರು 34 ಕಟ್ಟಡಗಳು ನಾಶವಾಗಿವೆ. ಸರ್ಕಾರದ ವಿಪತ್ತು ನಿರ್ವಹಣಾ ಸಂಸ್ಥೆಯಾದ ಎಎಫ್‍ಎಡಿ ಪ್ರಕಾರ, ಗಜಿಯಾಂಟೆಪ್‍ನ ದಕ್ಷಿಣ ಪ್ರದೇಶವು ಟರ್ಕಿಯ ಪ್ರಮುಖ ಕೈಗಾರಿಕಾ ಹಾಗೂ ಉತ್ಪಾದನಾ ಕೇಂದ್ರಗಳಲ್ಲಿ ಒಂದು. ಇದು ಸಿರಿಯಾದ ಗಡಿ ಭಾಗದಲ್ಲಿದೆ. ಮೂಲಗಳ ಪ್ರಕಾರ  ಸೈಪ್ರಸ್‍ ಹಾಗೂ ಈಜಿಪ್ಟ್‌ ನಲ್ಲಿಯೂ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ವಲಯಗಳಲ್ಲಿ ಒಂದಾಗಿದೆ. 1999ರಲ್ಲಿ 7.4 ತೀವ್ರತೆಯ ಭೂಕಂಪನದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಡಜ್ಸ್ ಒಂದಾಗಿದೆ. 2020ರ ಜನವರಿಯಲ್ಲಿ ಎಲಾಜಿಗ್‍ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *