ನವದೆಹಲಿ :ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಮುಕ್ತಾಯವಾಗಿದ್ದು, 58 ಸ್ಥಾನಗಳಲ್ಲಿ ಶೇ.61.01ರಷ್ಟು ಜನರು ಮತ ಚಲಾಯಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಶೇ.78.27ರಷ್ಟು ಮತದಾನವಾಗಿದೆ. ಜಾರ್ಖಂಡ್‍ನಲ್ಲಿ 63.56, ಒಡಿಶಾ 61.84, ಹರಿಯಾಣ 59.43, ದೆಹಲಿ 58.70, ಬಿಹಾರ 55.25, ಉತ್ತರ ಪ್ರದೇಶ 54.3 ಮತ್ತು ಜಮ್ಮು ಕಾಶ್ಮೀರದ ಅನಂತ್‍ನಾಗ್ ರಜೌರಿ ಕ್ಷೇತ್ರದಲ್ಲಿ 53.60ರಷ್ಟು ಮತದಾನವಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮತದಾನವಾಗಿದೆ. 2019ರ ಚುನಾವಣೆಯಲ್ಲಿ 60.60ರಷ್ಟು ಮತದಾನವಾಗಿದ್ದು, 2024ರ ಚುನಾವಣೆಯಲ್ಲಿ 58.70ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಷ್ಣುಪುರ್ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ.83.95) ಮತದಾನವಾಗಿದೆ. ಉತ್ತರಪ್ರದೇಶದ ಫುಲ್‍ಪುರದಲ್ಲಿ ಕನಿಷ್ಠ (ಶೇ.48.97) ಮತದಾನವಾಗಿದೆ.
6ನೇ ಹಂತದಲ್ಲಿ ಬಿಹಾರ ಮತ್ತು ಬಂಗಾಳದಲ್ಲಿ ತಲಾ ಎಂಟು ಸ್ಥಾನಗಳು, ದೆಹಲಿಯಲ್ಲಿ ಏಳು, ಹರಿಯಾಣದಲ್ಲಿ 10, ಜಾರ್ಖಂಡ್‌ನಲ್ಲಿ ನಾಲ್ಕು, ಉತ್ತರ ಪ್ರದೇಶದಲ್ಲಿ 14 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ3 ಕ್ಷೇತ್ರಗಳಿಗೆ ಮತದಾನ ನಡೆದಿದೆ.