ಬೆಂಗಳೂರು : ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳುಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ. ಪ್ರತಿಯೊಂದು ಯೋಜನೆಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ. ಮಲ್ಲೇಶ್ವರಂನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿ ಅಶ್ವತ್ಥ ನಾರಾಯಣನಿಗೆ ಕಮಿಷನ್ ಹೋಗ್ತಿದೆ. ಮಲ್ಲೇಶ್ವರಂನ ಬಹುತೇಕ ಕಾಂಟ್ರಾಕ್ಟರ್ ಗಳು ಸಚಿವರ ಸಂಬಂಧಿಗಳೇ ಇದ್ದಾರೆ ಎಂದು ಆರೋಪಿಸಿದರು.
ಈಗ ಪಿಎಸೈ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಭ್ರಷ್ಟಾಚಾರಕ್ಕೆ ಆರ್ ಎಸ್ ಎಸ್ ಕುಮ್ಮಕ್ಕು ಇದೆ.ಅದರ ಹಣದಿಂದಲೇ ಶ್ರೀಮಂತ ಎನ್ ಜಿಓ ಆಗಿ ಆರ್ ಎಸ್ ಎಸ್ ಇದೆ. ಪ್ರತಿಯೊಬ್ಬ ಸಚಿವರ ಬಳಿ ಆರ್ ಎಸ್ ಎಸ್ ಒಎಸ್ ಡಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ. ಈ ಕೂಡಲೆ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು. ಸ್ವ ಇಲಾಖೆಯಲ್ಲಿ ಗಂಭೀರವಾದ ಆರೋಪ ಎದುರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೆಂದ್ರ ರಾಜೀನಾಮೆ ನೀಡಬೇಕು. ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು, ಗೃಹ ಸಚಿವರ ಮೇಲೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.