ದೆಹಲಿ: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ‘ಯೆಲ್ಲೋ ಅರ‍್ಟ್’ ಘೋಷಿಸಲಾಗಿದೆ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಸೋಂಕು ಕ್ರಮೇಣ ಸಮುದಾಯಕ್ಕೂ ಹರಡುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಕಳವಳ ವ್ಯಕ್ತಪಡಿಸಿದ್ದಾರೆ.
ಕೋವಿಡ್ ದೃಢಪಟ್ಟವರು ಓಮೈಕ್ರಾನ್ ಸೋಂಕು ಹೊಂದಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ನಡೆಸುವ ವಂಶವಾಹಿ ಸಂರಚನೆ ವಿಶ್ಲೇಷಣೆ ವರದಿಯಲ್ಲಿ ಶೇಕಡಾ 46ರಷ್ಟು ಮಾದರಿಗಳು ಓಮೈಕ್ರಾನ್ ಸೋಂಕನ್ನು ಹೊಂದಿದೆ ಎಂಬುದನ್ನು ತೋರಿಸುತ್ತಿದೆ. ಇದರಲ್ಲಿ ವಿದೇಶಿ ಪ್ರಯಾಣದ ಹಿನ್ನೆಲೆ ಇಲ್ಲದವರು ಒಳಗೊಂಡಿದ್ದಾರೆ. ಇದರ ರ‍್ಥ ಓಮೈಕ್ರಾನ್ ದೆಹಲಿಯಲ್ಲಿ ಕ್ರಮೇಣ ಸಮುದಾಯಕ್ಕೂ ಹರಡುತ್ತಿದೆ’ ಎಂದು ಹೇಳಿದ್ದಾರೆ.
ಅನೇಕ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ವರದಿ ಬಂದ ಬಳಿಕ ಕೋವಿಡ್ ಸೋಂಕು ತಗುಲಿದೆ. ಅಷ್ಟರ ವೇಳೆಗೆ ಕುಟುಂಬ ಸದಸ್ಯರಿಗೂ ಸೋಂಕು ಹರಡುತ್ತಿದೆ ಎಂದು ಹೇಳಿದರು.
ಯೆಲ್ಲೋ ಅರ‍್ಟ್ ಅಡಿಯಲ್ಲಿ ಶಾಲೆ-ಕಾಲೇಜುಗಳ ಬಂದ್, ಅಗತ್ಯ ವಸ್ತುಗಳ ಹೊರತಾಗಿ ಅಂಗಡಿಗಳನ್ನು ಮುಚ್ಚಲಾಗಿದೆ. ಮೆಟ್ರೋ ಹಾಗೂ ಬಸ್‌ಗಳಲ್ಲಿ ಶೇ. 50ರಷ್ಟು ಆಸನ ಸಾರ‍್ಥ್ಯದ ಪ್ರಯಾಣ ನರ‍್ಬಂಧವನ್ನು ಹೇರಲಾಗಿದೆ.