ಕರಾಳ ಭಾನುವಾರಕ್ಕೆ 51 ಮಂದಿ ಬಲಿ

ಬೆಂಗಳೂರು: ಕಳೆದ ಮೇ 26ರ ಭಾನುವಾರ ರಾಜ್ಯದ ಪಾಲಿಗೆ ಒಂದು ರೀತಿಯಲ್ಲಿ ಕರಾಳ ಭಾನುವಾರವಾಗಿ ಪರಿಣಮಿಸಿದ್ದು, ಕಳೆದ 24 ತಾಸುಗಳಲ್ಲಿ ರಾಜ್ಯದಲ್ಲಿ 51 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಹಾಸನ, ಚಿಕ್ಕೋಡಿ, ಕಾರವಾರ, ರಾಮನಗರ ಸೇರಿದಂತೆ ಹಲವೆಡೆ ನಿನ್ನೆ ಒಂದೇ ದಿನ ರಸ್ತೆ ಅಪಘಾತಗಳು ಸಂಭವಿಸಿತ್ತು. ಈ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬರೋಬ್ಬರಿ 51 ಜನರು ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮಾಹಿತಿ ನೀಡಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

ಹಾಸನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅತೀ ಹೆಚ್ಚು 6 ಮಂದಿ ಮೃತಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ನಡೆದ ಅಪಘಾತಗಳಲ್ಲಿ ನಿನ್ನೆಯೇ ಅತಿ ಹೆಚ್ಚು ಸಾವು ಸಂಭವಿಸಿದೆ. ರಾಜ್ಯಾದ್ಯಂತ ಒಟ್ಟು 51 ಮಂದಿ ಒಂದೇ ದಿನ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ. ಹೀಗಾಗಿ ದಯವಿಟ್ಟು ಸಂಚಾರಿ ನಿಯಮ ಪಾಲಿಸಿ ಎಂದು ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ.

ಇದನ್ನು ಓದಿ : ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಮಹಿಳೆ ಸಾವು

ಇನ್ನು ಕಲಬುರಗಿಯ ಕಮಲಾಪುರ ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ನಿನ್ನೆ ಹಾಸನದಲ್ಲಿ ಬೆಳ್ಳಂಬೆಳಗ್ಗೆ 7.30ರ ಸುಮಾರಿಗೆ ಕಾರು ಮತ್ತು ಟ್ರಕ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರ್‌ನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಒಂದೇ ದಿನದಲ್ಲಿ ಇಷ್ಟೊಂದು ಅಪಘಾತಗಳಾಗಿರುವುದಕ್ಕೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಪೊಲೀಸ್‌ ವ್ಯವಸ್ಥೆ ಇನ್ನಷ್ಟು ಸಾರಿಗೆ ನಿಯಮಗಳನ್ನು ಬಿಗಿಗೊಳಿಸಬೇಕು ಎಂದಿದ್ದಾರೆ.

ರಸ್ತೆ ಸುರಕ್ಷತೆ ಬಗ್ಗೆ ಪೊಲೀಸರ ಜವಾಬ್ದಾರಿ ಜತೆಗೆ ನಾಗರಿಕರ ಹೊಣೆಗಾರಿಕೆ ಇರುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು. ಅತಿ ವೇಗದಿಂದ ಒಂದು ಜೀವ ಹೋದರೆ ಒಂದು ಕುಟುಂಬವೇ ಅನಾಥವಾಗುತ್ತದೆ ಎನ್ನುವುದನ್ನು ನೆನಪಿಡಬೇಕು.ಅತಿ ವೇಗ, ಅಜಾಗರೂಕತೆಯಿಂದಲೇ ಹೆಚ್ಚು ಅಪಘಾತಗಳು ಸಂಭವಿಸಿವೆ ಎನ್ನುವ ಅಂಶ ಆಘಾತಕಾರಿ. ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಹಾಗೂ ರಸ್ತೆ ಸುರಕ್ಷತೆ ನಿಮಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅತಿವೇಗಕ್ಕಿಂತ_ಜೀವ_ಅಮೂಲ್ಯ ಎಂದು ಸಲಹೆ ನೀಡಿ ಟ್ವೀಟ್‌ ಮಾಡಿದ್ದಾರೆ. ಭಾನುವಾರ

ಇದನ್ನು ನೋಡಿ : ಬಿಜೆಪಿ ಸೋತರೆ, ಮೋದಿ ಸುಲಭವಾಗಿ ಅಧಿಕಾರ ಬಿಟ್ಟುಕೊಡುವರೇ? Janashakthi Media

Donate Janashakthi Media

Leave a Reply

Your email address will not be published. Required fields are marked *