5 ನೇ ಹಂತಕ್ಕೆ ಬಾಲಿವುಡ್‌ ಖಾನ್‌ಗಳಿಂದ ಮತದಾನ

ಮುಂಬೈ: ಲೋಕಸಭಾ ಚುನಾವಣೆಗೆ ಸೋಮವಾರ ಮೇ 20 ರಂದು ನಡೆದ ಐದನೇ ಹಂತದ ಮತದಾನದಲ್ಲಿ ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌, ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌ ತಮ್ಮ ಹಕ್ಕು ಚಲಾಯಿಸಿದರು. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ತಮ್ಮ ಕುಟುಂಬದೊಂದಿಗೆ ಮುಂಬೈನ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.

ಇತ್ತೀಚೆಗಷ್ಟೇ ಭಾರತದ ಪೌರತ್ವ ಪಡೆದುಕೊಂಡ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮೊದಲ ಬಾರಿಗೆ ದೇಶದಲ್ಲಿ ಮತದಾನ ಮಾಡಿದ್ದು, ಭಾರತದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರಕ್ಕಾಗಿ ಮತದಾನ ಮಾಡಿ ಎಂದು ಹೇಳಿದರು.

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಮುಂಬೈನ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಈ ಹಿಂದೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ನಾನು ಮೇ 20 ರಂದು ನನ್ನ ಮತದಾನದ ಹಕ್ಕನ್ನು ಚಲಾಯಿಸಲಿದ್ದೇನೆ. ಆದ್ದರಿಂದ ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡಿ, ಆದರೆ ಹೋಗಿ ಮತ ಚಲಾಯಿಸಿ ಮತ್ತು ನಿಮ್ಮ ಭಾರತ ಮಾತೆಗೆ ತೊಂದರೆ ಕೊಡಬೇಡಿ. ಭಾರತ್ ಮಾತಾ ಕಿ ಜೈ ಎಂದಿದ್ದರು.

Donate Janashakthi Media

Leave a Reply

Your email address will not be published. Required fields are marked *