ದಸರಾ ಲೈಟಿಂಗ್ ನೋಡಲು ಬರುತ್ತಿದ್ದ ಮೂವರು ಅಪಘಾತದಲ್ಲಿ ಸಾವು

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಗೂಡ್ಸ್‌ ಆಟೋ ನಡುವೆ ಅಪಘಾತ ಸಂಭವಿಸಿ, ದಸರಾ ದೀಪಾಲಂಕಾರ ನೋಡಲು ಬರುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ನರಸೀಪುರದಿಂದ ಮೈಸೂರಿಗೆ ಲೈಟಿಂಗ್ಸ್ ನೋಡಲು ಗೂಡ್ಸ್ ಆಟೋದಲ್ಲಿ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಎಸ್ಆರ್ಟಿಸಿ ಬಸ್ ನಂಬರ್ KA 10 F 0334, ಮತ್ತು ಮೂರು ಚಕ್ರದ ಆಟೋ ನಂಬರ್ KA 11 A 6052 ನಡುವೆ ಮುಖಾಮುಖಿ ಡಿಕ್ಕಿ ಹೊಡದಿದೆ.

ಗೂಡ್ಸ್‌ ಆಟೋದಲ್ಲಿದ್ದ ಇನ್ನೂ ನಾಲ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *