ಶಹಾಪುರ: ಒಂದೆ ಕಾಮಗಾರಿಗೆ ಎರಡು ಬಾರಿ ಬಿಲ್ ಮಾಡಿ ಅಧಿಕಾರಿಗಳು ಭ್ರಷ್ಟಾಚರದಲ್ಲಿ ಭಾಗಿಯಾಗಿ ಸರ್ಕಾರದ ಹಣ ದುರುಪಯೋಗ ಮಾಡಿದ್ದಾರೆ ಎಂದು ಭಾಗಣ್ಣ ರಸ್ತಾಪುರ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಸ್ತಾಪುರ ಗ್ರಾಮ ಪಂಚಾಯತಿಯ ರಸ್ತಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 2018-19 ನೇ ಸಾಲಿನ ನರೇಗಾ ಯೋಜನೆಯಡಿ 1.20 ಲಕ್ಷ ರೂ ವೆಚ್ಚದ ಹೈಟೇಕ್ ಶೌಚಾಲಯ ಪೂರ್ಣಗೊಂಡಿದೆ. ಆದರೆ ಮತ್ತೆ ಅದೆ ಕಟ್ಟಡಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಒಂದೆ ಕಾಮಾಗಾರಿಗೆ ಎರಡೆರೆಡು ಬಿಲ್ ಮಾಡಿ ಹಣ ಪಡೆಯುವ ಉದ್ದೇಶವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೊಂದಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
15 ನೇ ಹಣಕಾಸಿ ಯೋಜನೆಯಡಿಯಲ್ಲಿ 85 ಸಾವಿರ ಬಿಲ್ ಮಾಡಿ ಸರಕಾರಕ್ಕೆ ದ್ರೋಹ ಬಗೆದಿದ್ದಾರೆ. ಸರಕಾರದ ಹಣ ದುರುಪಯೋಗವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. 2020 ಅವಧಿಯಲ್ಲಿ ಸುಳ್ಳು ದಾಖಲೆ ಸೃಷ್ಠಿಸಿದ ಪಂಚಾಯತ ಅಭಿವೃದ್ದಿ ಅಧಿಕಾರಿ ಸಂಗಪ್ಪ, ಜೆಇ ಹಾಗೂ ಗುತ್ತೆದಾರ ವಿರುದ್ದ ಸಂಬಂದಪಟ್ಟ ಅಧಿಕಾರಿಗಳು ಕೂಡಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೂ ದೂರು ನೀಡಲಾಗುವುದು ಎಂದು ಭಾಗಣ್ಣ ರಸ್ತಾಪುರ ತಿಳಿಸಿದ್ದಾರೆ.