ಬೆಂಗಳೂರು : ತಣಿಸಂದ್ರ ಆಸ್ಪತ್ರೆಯಲ್ಲಿ ಟಿ ಬಿ ಅರ್ಥಿಗಳಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಟಿ ಬಿ ಅರ್ಥಿಗಳಿಗೆ ತಿಳಿಸಿ ನ್ಯೂಟ್ರಿಶನ್ ಪೌಡರ್ ಅನ್ನು ವಿತರಿಸಲಾಯಿತು ಈ ಕಾರ್ಯ ಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಗೂ ಕೆ ಎಚ್ ಪಿ ಟಿ ಸಿಬ್ಬಂದಿಯವರು ಭಾಗಿಯಾಗಿದ್ದರು.
ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುವ ಅನಿವಾರ್ಯತೆ ಇದ್ದು ಇಂದಿನ ಪರಿಸ್ಥಿತಿ ಯಾವುದೇ ರೋಗ ಲಕ್ಷಣಗಳಿದ್ದರು ಅದು ಕೋವಿಡ್ ಎನ್ನುವ ಪರಿಸ್ಥಿತಿಯಲ್ಲಿ ನಾವು ತಲುಪಿರುವುದು ವಿಪರ್ಯಾಸ ಇದಕ್ಕೆ ಸಂಬಂಧಿಸಿದಂತೆ ಬೇರೆ ರೋಗಗಳಂತೆ ಟಿ ಬಿ ಯು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದರ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಟಿಯಲ್ಲಿನ ಅಮೃತಹಳ್ಳಿ ಗೆ ಸೇರಿದ ಚಿರಂಜೀವಿ ಲೇ ಔಟ್ ನಲ್ಲಿ ಹೊರ ರಾಜ್ಯಗಳಿಂದ ವಲೆಸೆ ಬಂದು ಸ್ಲಮ್ ನಲ್ಲಿ ವಾಸವಾಗಿರುವ ಜನರಿಗಿ ಟಿ ಬಿ ಬಗ್ಗೆ ಜಾಗೃತಿ ನೀಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು.
ಈ ಶಿಬಿರದಲ್ಲಿ ಟಿ ಬಿ ಎಚ್ ವಿ ಆದಂತಹ ಶ್ರೀನಿವಾಸ್ ಹಾಗೂ ಕೆ ಎಚ್ ಪಿ ಟಿ ಸಿಬ್ಬಂದಿ ಯಾದ ಪವನ್ ಕುಮಾರ್ ಹಾಗೂ ಸ್ಥಳೀಯ ಆಶಾ ವರ್ಕರ್ ಆದ ಸುಶೀಲ ರವರು ಬಾಗಿಯಾಗಿ ಸ್ಲಾಮ್ ನಲ್ಲಿರುವ ಸುಮಾರು 50 ಮನೆಗಳಿಗೆ ಭೇಟಿ ನೀಡಿ ಟಿ ಬಿ ಸ್ಕ್ರೀನಿಂಗ್ ಹಾಗೂ ಟಿ ಬಿ ಬಗ್ಗೆ ಅರಿವು ಮೂಡಿಸಲಾಯಿತು.