ದೇಶದಲ್ಲಿ 444 ಹೊಸ ಕೊರೊನಾ ಸೋಂಕು ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ 444 ಹೊಸ ಪ್ರಕರಣ ಪತ್ತೆಯಾಗಿದ್ದು, ಸಕ್ರಿಯ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 3,809ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಶೇ. 0.01 ಆಗಿದ್ದು ಚೇತರಿಕೆಯ ಪ್ರಮಾಣ ಶೇ. 98.80ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಒಂದು ಸಾವು ಸಂಭವಿಸುವುದರ ಮೂಲಕ ಕೊರೊನಾದಿಂದಾಗಿ ಮೃತರ ಸಂಖ್ಯೆ 5,30,782 ತಲುಪಿದೆ. ಈ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,41,56,345 ಇದ್ದು, ಮರಣ ಪ್ರಮಾಣ ಶೇ 1.19 ಎಂದಿದೆ.

ಲಸಿಕಾ ಅಭಿಯಾನದ ಮೂಲಕ ಈವರೆಗೆ 220.64 ಕೋಟಿ ಸಂಖ್ಯೆಯಲ್ಲಿ ದೇಶದಾದ್ಯಂತ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

Donate Janashakthi Media

Leave a Reply

Your email address will not be published. Required fields are marked *