ನನ್ನನ್ನು ಕೇಳಿ ಹಣ ಹೂಡಿದ್ರಾ? ಸಚಿವೆ ನಿರ್ಮಲಾ ಸೀತಾರಾಮನ್ ಉಡಾಫೆ ಪ್ರಶ್ನೆ
ಬೆಂಗಳೂರು: ನಗರದ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ವಂಚನೆ ಪ್ರಕರಣಕ್ಕೆ ಎರಡು ವರ್ಷಗಳಾಗ್ತಾ ಬಂತು. ಇದನ್ನ ಸಿಐಡಿ ತನಿಖೆಗೆ ವಹಿಸಲಾಗಿದೆ. ಆದರೆ ಏನು ತನಿಖೆ ಆಗ್ತಾ ಇದೆ ಅನ್ನೊದು ಗೊತ್ತಿಲ್ಲ. ವಾಸ್ತವದಲ್ಲಿ ಸಿಐಡಿಗೆ ಇಷ್ಟು ದೊಡ್ಡ ಹಗರಣ ತನಿಖೆ ಮಾಡಲು ಸಾಮರ್ಥ್ಯ ಇಲ್ಲ. ಈಗಾಗಲೇ ಸುಮಾರು ಠೇವಣಿದಾರರು ಮೃತರಾಗಿದ್ದಾರೆ ಎಂದು ಕೆಪಿಸಿಸಿ ಮುಖಂಡ ಡಾ ಶಂಕರ ಗುಹಾ ದ್ವಾರಕನಾಥ್ ಆರೋಪಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಗುಹಾ ರವರು ಈ ಹಗರಣದಲ್ಲಿ ಬಿಜೆಪಿಯ ಮಾಜಿ ಎಮ್ಎಲ್ಸಿ ಅಶ್ವಥ್ ನಾರಾಯಣ್ ಡೀಫಾಲ್ಟರ್ 12 ಕೋಟಿ ರೂಪಾಯಿ ಹಣ ಕಟ್ಟಿಲ್ಲ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ನೀಡಬೇಕೆಂದು ಮನವಿ ಮಾಡಿದ್ದಾರೆ.
ತುರ್ತು ಕ್ರಮ ಜರುಗಿಸದೇ ಇದ್ರೆ ಆರ್ಬಿಐ ಚಲೋ ನಡೆಸಬೇಕಾಗುತ್ತೆ. ರಾಜಕೀಯ ಹಿತಾಸಕ್ತಿ ಬಿಟ್ಟು ಗ್ರಾಹಕರ ಪರವಾಗಿ ಕೆಲಸ ಮಾಡಬೇಕಿದೆ. ಕೇಂದ್ರ ಹಣಕಾಸು ಸಚಿವೆ ಕೂಡ ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಬಿಐ ಕೂಡ ಈ ವಂಚನೆಗಳನ್ನ ನೋಡಿಕೊಂಡು ಯಾಕೆ ಸುಮ್ಮನಿದೆ. ಆರ್ಬಿಐ ತುರ್ತಾಗಿ ಕ್ರಮಕೈಗೊಳ್ಳಬೇಕಿದೆ. 25 ಸಾವಿರ ಜನ ಹಣವನ್ನ ಕಳೆದುಕೊಂಡಿದ್ದಾರೆ.
ಸಿಐಡಿ ಸ್ಟ್ರಾಂಗ್ ಕೇಸ್ ಮಾಡಿಲ್ಲ. 2130 ಕೋಟಿ ರೂಪಾಯಿ ಗ್ರಾಹಕರಿಗೆ ವಾಪಸ್ ಬರಬೇಕಿದೆ. ಆದರೆ ಆರ್‌ಬಿಐ ಮಾತ್ರ ಸ್ಪಷ್ಟ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಹಣ ಕಳೆದುಕೊಂಡ ಹಲವರು ಸಾವನ್ನಪ್ಪಿದ್ದಾರೆ. ಆಡಿಟ್ ರಿಪೋರ್ಟ್ ನೆಪದಲ್ಲಿ ಸಮಯ ತಳ್ಳುತ್ತಿದ್ದಾರೆ. ವಿಳಂಬದ ಹಿಂದೆ ರಾಜಕೀಯ ಹಿತಾಸಕ್ತಿ ಕಾಣುತ್ತಿದೆ. ಸ್ಥಳೀಯ ರಾಜಕಾರಣಿಗಳ ವಿರುದ್ದ ಗಂಭೀರ ಆರೋಪ ಕೇಳಿ ಬರುತ್ತಿದೆ ಎಂದು ಡಾ ಶಂಕರ ಗುಹಾ ದ್ವಾರಕನಾಥ್ ಈ ಪ್ರಕರಣದ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮೇಕೆದಾಟು ಯೋಜನೆ ಭೂಮಿಪೂಜೆ ಏರ್ಪಡಿಸಿ-ಸರಕಾರದ ಜತೆ ನಾವಿದ್ದೇವೆ: ಡಿ.ಕೆ. ಶಿವಕುಮಾರ್
ನನ್ನನ್ನು ಕೇಳಿ ಹಣ ಹೂಡಿದ್ರಾ? ಹಣಕಾಸು ಸಚಿವೆಯ ಪ್ರಶ್ನೆ : ನನ್ನನ್ನು ಕೇಳಿ ನೀವು ರಾಘವೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಹಣ ಹೂಡಿಕೆ ಮಾಡಿದ್ದೀರಾ ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮ್ಮನ್ನು ಪ್ರಶ್ನಿಸಿದರು ಎಂದು ಠೇವಣಿದಾರ ಹರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಫಾರೆನ್ಸಿಕ್ ಆಡಿಟ್ ಇನ್ನು ಆಗೇ ಇಲ್ಲಾ, ಈ ಹಗರಣದಲ್ಲಿ ಬಿಜೆಪಿಯ ಮಾಜಿ ಎಮ್ ಎಸ್ಸಿ ಆಶ್ವಥ್ ನಾರಾಯಣ್ ಡೀಫಾಲ್ಟರ್ ಆಗಿದ್ದು, 12 ಕೋಟಿ ರೂಪಾಯಿ ಹಣ ಕಟ್ಟಿಲ್ಲ ಎಂದು ಆರೋಪಿಸಿದರು. ಜೊತೆಗೆ ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ನೀಡಬೇಕೆಂದು ಮನವಿ ಮಾಡಿಕೊಂಡರು. ಅಲ್ಲದೆ ತುರ್ತು ಕ್ರಮ ಜರುಗಿಸದೇ ಇದ್ರೆ ಆರ್ ಬಿ ಐ ಚಲೋ ನಡೆಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.