ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಅಕ್ರಮ; ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಬೆಂಗಳೂರಿನ ಜೆಪಿ ಭವನದಲ್ಲಿ ‌ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿದ ಅವರು, ಕೆಲವು ಭಿನ್ನಾಭಿಪ್ರಾಯದಲ್ಲಿ ಯತ್ನಾಳ್ ಈ‌ ರೀತಿಯಲ್ಲಿ ಹೇಳಿದ್ದಾರೆ. ಅದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಅಕ್ರಮ ನಡೆದಿಲ್ಲ ಎಂದು ಹೇಳಲ್ಲ, ಆದರೆ 40 ಸಾವಿರ ಕೋಟಿ ರೂ. ನಡೆದಿದೆ ಎಂದು‌ ನಂಬಲು ಆಗುವುದಿಲ್ಲ ಎಂದರು‌.

ಕೋವಿಡ್ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ಯತ್ನಾಳ್ ಆರೋಪ ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ರಾಜ್ಯದ ಅತ್ಯಂತ ಸುಸಂಸ್ಕೃತ ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದ ರಮೇಶ್ ಕುಮಾರ್, ನೆಹರೂ, ಗಾಂಧಿ ಕುಟುಂಬದ ಹೆಸರಿನಲ್ಲಿ ನಾವು ಮೂರು ತಲೆಮಾರು ತಿಂದು ತೇಗುವಷ್ಟು ಸಂಪಾದನೆ ಮಾಡಿದ್ದೇವೆ ಎಂದಿದ್ದರು. ಈ ಬಗ್ಗೆ ಕಾಂಗ್ರೆಸ್ ಏಕೆ ಮೌನವಾಗಿದೆ ಎಂದರು.

ಇದನ್ನು ಓದಿ : ನವ-ಉದಾರವಾದವು ಹಾಲಿನ ಹೊಳೆ-ಜೇನಿನ ಮಳೆ ಸುರಿಸಿದೆಯೇ?

ಯತ್ನಾಳ್ ಆರೋಪ ತನಿಖೆ ಮಾಡಿ, ಸತ್ಯಾಂಶ ಹೊರಗಿಡಿ. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ನಿರ್ವಹಣೆಯಲ್ಲಿ ವ್ಯತ್ಯಾಸ ಆಗಿರಬಹುದು. ಆದರೆ ಯತ್ನಾಳ್ 40 ಸಾವಿರ ಕೋಟಿ ಅಕ್ರಮ ಎಂದು ಆರೋಪ ನಂಬಲು ಸಾಧ್ಯವಿಲ್ಲ ಎಂದರು.

ನೀವು ಎನ್ ಡಿ ಎ ಮಿತ್ರ ಪಕ್ಷ ಆಗಿರುವುದರಿಂದ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೀರಾ? ಎಂಬ ಪ್ರಶ್ನೆಗೆ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು‌.

ಸೀಟು ಹಂಚಿಕೆ ಸಂಕ್ರಾಂತಿ ಆದ ಮೇಲೆ ನಡೆಯಲಿದೆ. ಆಗ ನಿಮಗೆಲ್ಲಾ ಸಿಹಿ ಸುದ್ದಿ ಕೊಡುತ್ತೇನೆ ಎಂದರು. 28 ಕ್ಷೇತ್ರಗಳಲ್ಲಿ ನಾವು ಗೆಲ್ಲಬೇಕು, ಈ‌ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇವೆ ಎಂದರು.

Donate Janashakthi Media

Leave a Reply

Your email address will not be published. Required fields are marked *