ಮಂಡ್ಯ: ಧರ್ಮಸ್ಥಳ ಸಂಘ ಗ್ರಾಮೀಣ ಭಾಗದಲ್ಲಿ ಸಾಲ ನೀಡಿ ಜನರಿಂದ 40% ಬಡ್ಡಿ ವಸೂಲು ಮಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಬಡವ
ಮಂಡ್ಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನರೇಂದ್ರ ಸ್ವಾಮಿ, ಧರ್ಮಸ್ಥಳ ಸಂಘದಲು ಧರ್ಮದ ಕಲಸವೇ ಇಲ್ಲ. ಕೂಟ್ಟೆ ಸಾಲಕ್ಕೆ ಬಡವರಿಂದ ಶೇಕಡ 40ರಷ್ಟು ಬಡ್ಡಿ ವಸೂಲಿ ಮಾಡುತ್ತಾರೆ. ಧರ್ಮಸ್ಕಳ ಸಂಘಕ್ಕೆ ವರ್ಷಕ್ಕೆ ನೀವೂ ಕಟ್ಟುತ್ತಿರುವ ಬಡ್ಡಿ ಎಷ್ಟು ನಿಮಗೆ ಯಾರಿಗೂ ಗೊತ್ತಿಲ್ಲ ಧರ್ಮಸ್ಥಳದ ಸಂಘದ ಬಗ್ಗೆ, ಮಂಜುನಾಥ್ ಸ್ವಾಮಿ ಅಂದುಕೊಂಡು ಬಿಟ್ಟಿದ್ದೀರ ನೀವು, ಸಂಘದ ಹೆಸರು ಧರ್ಮಸ್ಥಳದು.
ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವ: ರೂ.1,685 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿಯಾಗಿ ಕಲಬುರಗಿ ಅಭಿವೃದ್ಧಿ- ಸಿಎಂ ಸಿದ್ದರಾಮಯ್ಯ
ಆದರೆ ಅಲ್ಲಿ ಧರ್ಮದ ಕೆಲಸ ಒಂದು ನಡೆಯುತ್ತಿಲ್ಲ. ನೀವೂ ಕಷ್ಟಪಟ್ಟು ಕೂಲಿನಾಲಿ ಮಾಡಿ, ವಾರದ ದುಡ್ಡು ಕಟ್ಟಿ, ಚೀಟಿ ಮಾಡುತ್ತೀರಿ. ಅರ್ಜೆಂಟ್ ಆಗಿ ಹತ್ತಿಪ್ಪತ್ತು ಸಾವಿರ ಹಣ ಸಿಗಬಹುದು. ಹತ್ತಿಪ್ಪತ್ತು ಸಾವಿರಕ್ಕೆ ವರ್ಷಕ್ಕೆ ಎಷ್ಟು ಬಡ್ಡಿ ಕಟ್ಟುತ್ತಾ ಇದ್ದೀರಿ ಅಂತ ಗೊತ್ತಿದೆಯಾ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು.
ಈ ಪಿಡಗನ್ನು ತಪ್ಪಿಸಬೇಕು, ಒಂದು ಮನೆಯ ಬದುಕು ಉಳಿಯಬೇಕು ಅಂದ್ರೆ, ಒಂದು ತಾಯಿಗೆ ಜವಾಬ್ದಾರಿಯಾಗಿ ನಿಲ್ಲೋಣಾ ಅಂತ 2 ಸಾವಿರ ರೂಪಾಯಿ ಕೊಡ್ತಾ ಇರೋದು. ನಮ್ಮ ಎದುರಾಳಿ ಪಕ್ಷದವರು ಏನೇನೋ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಕೂಲತೆಯ ಬಗ್ಗೆ ಮಾತನಾಡಿದರು.
ಇದನ್ನೂ ನೋಡಿ: ಕರ್ನಾಟಕದ ಜನ ಚಳುವಳಿಯಲ್ಲಿ ಸೀತಾರಾಂ ಯೆಚೂರಿ Janashakthi Media