ಗೋದಾಮಿನಲ್ಲಿ ಅಗ್ನಿ ಆಕಸ್ಮಿಕ : 40 BMW ಕಾರ್ ಗಳು ಭಸ್ಮ

ಥಾಣೆ : ನವಿ ಮುಂಬೈನ ಟರ್ಭೆ ಎಂಐಡಿಸಿ ಪ್ರದೇಶದ ಷೋರೂಂ ಕಂ ಗೋಡೌನ್‍ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಕನಿಷ್ಠಪಕ್ಷ 40 ಬಿಎಂಡಬ್ಲ್ಯೂ ಕಾರ್‌ಗಳು ಸುಟ್ಟು ಕರಕಲಾಗಿವೆ. ಸಾವು-ನೋವಿನ ವರದಿಯಾಗಿಲ್ಲ ಎಂದು ಅಗ್ನಿಶಾಮಕ ದಳದ ಅಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಂಡಬ್ಲ್ಯೂ ಕಾರ್‍ಗಳ ಷೋರೂಂನಲ್ಲಿ ಮಂಗಳವಾರ ಮುಂಜಾನೆ 5.30ರಲ್ಲಿ ಹೊತ್ತಿಕೊಂಡ ಅಗ್ನಿಜ್ವಾಲೆ ಅಲ್ಲಿ ನಿಲ್ಲಿಸಿದ್ದ ಕಾರ್‍ಗಳನ್ನು ಭಸ್ಮ ಮಾಡಿದೆ ಎಂದು ಮುಖ್ಯ ಅಗ್ನಿಶಾಮಕ ಅಕಾರಿ ಎಂಐಡಿಸಿ ಅಗ್ನಿಶಾಮಕದಳದ ಆರ್.ಬಿ.ಪಾಟೀಲ್ ಹೇಳಿದ್ದಾರೆ.

ಕನಿಷ್ಠ ಪಕ್ಷ 40ರಿಂದ 45 ಬಿಎಂಡಬ್ಲ್ಯೂ ಕಾರ್‍ಗಳು ಅಗ್ನಿಗೆ ಆಹುತಿಯಾಗಿವೆ ಎಂದು ಅವರು ಅರುಹಿದ್ದಾರೆ. ಸ್ಥಳಕ್ಕೆ ಧಾವಿಸಿದ 10 ಅಗ್ನಿಶಾಮಕ ವಾಹನಗಳಿಂದ ಮಂಗಳವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು ಎಂದು ಪಾಟೀಲ್ ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *