ಕೊಪ್ಪಳ: ಸೋಮವಾರ ಸಂಜೆಯಿಂದ ಕಲಿಕೆಯಲ್ಲಿ ಹಿಂದುಳಿದ ಕಾರಣಕ್ಕೆ ಭಯಗೊಂಡಿದ್ದ ಕುಷ್ಟಗಿ ತಾಲ್ಲೂಕಿನ ಮಣೇಧಾಳದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ಕು ಜನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಕೊಪ್ಪಳ
ಹುಬ್ಬಳ್ಳಿಯಲ್ಲಿ ಮಂಗಳವಾರದಂದು ಪತ್ತೆಯಾಗಿದ್ದಾರೆ. ಸೋಮವಾರ ರಾತ್ರಿಯ ಊಟದ ನಂತರ ವಸತಿ ಶಾಲೆ ಕೊಠಡಿ ಹಿಂಬಾಗಿಲ ಮೂಲಕ ಕಾಂಪೌಂಡ್ ಮೇಲಿನಿಂದ ಹಾರಿಹೋಗಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು.
ವಿದ್ಯಾರ್ಥಿಗಳಾದ ಎಂ. ರಾಂಪುರ ಗ್ರಾಮದ ಮನು ಕಡೇಮನಿ, ಚಿಕ್ಕ ವಂಕಲಕುಂಟಾ ಗ್ರಾಮದ ಗುರುರಾಜ, ಗುಮಗೇರಾ ಗ್ರಾಮದ ನೀಲಕಂಠ ಹಾಗೂ ಯಲಬುರ್ಗಾ ಪಟ್ಟಣದ ವಿಶ್ವ ನಾಪತ್ತೆಯಾಗಿದ್ದರು.
ಇದನ್ನೂ ಓದಿ: ಕರ್ನಾಟಕದ ನ್ಯಾಯಾಲಯಗಳಲ್ಲಿ ಒಟ್ಟು 109 ಸರ್ಕಾರಿ ಅಭಿಯೋಜಕರ ಹುದ್ದೆಗಳು ಖಾಲಿ ಇವೆ: ಸಚಿವ ಜಿ ಪರಮೇಶ್ವರ್
ವಿದ್ಯಾರ್ಥಿಗಳ ಪೋಷಕರನ್ನು ವಿಚಾರಿಸಲಾಗಿದ್ದು, ಮನೆಗೂ ಹೋಗಿಲ್ಲ. ಸುತ್ತಲಿನ ಗ್ರಾಮಗಳಲ್ಲಿ ಹುಡುಕಿದರೂ ಸಿಕ್ಕಿಲ್ಲ. ವಿದ್ಯಾರ್ಥಿಗಳು ಕೆಲಸ ಮಾಡಲು ದೂರದ ಪಟ್ಟಣಗಳಿಗೆ ಹೋಗುತ್ತೇವೆ ಎಂದು ತಮ್ಮ ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳ ನಾಪತ್ತೆ ಕುರಿತು ವಸತಿ ನಿಲಯ ಪಾಲಕ ಅಶೋಕ ಅವರು ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ‘ಅಪರಿಚಿತರು ವಿದ್ಯಾರ್ಥಿಗಳನ್ನು ಅಪಹರಿಸಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ ವಿದ್ಯಾರ್ಥಿಗಳು ಫೋನ್ ಕರೆ ಮಾಡಿ ‘ನಾವು ಹುಬ್ಬಳ್ಳಿಯಲ್ಲಿದ್ದೇವೆ, ಸುರಕ್ಷಿತವಾಗಿದ್ದೇವೆ’ ಎಂದು ಹೇಳಿದ್ದಾರೆ. ಅವರನ್ನು ಕರೆತರಲು ವಸತಿ ನಿಲಯದ ಸಿಬ್ಬಂದಿಯನ್ನು ಕಳುಹಿಸಲಾಯಿತು.
ಇದನ್ನೂ ನೋಡಿ: ಕುವೆಂಪು 120| ಕುವೆಂಪು ಗೀತೆಗಳ ಗಾಯನ ಉಮೇಶ್ ಎಚ್.ಸಿ Janashakthi Media