ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿರುವ ಮಾಹಿತಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.
ಇದನ್ನು ಓದಿ :ಟ್ರಂಪ್ 2.0: ಮೊದಲ ದಿನವೇ ಸುಗ್ರೀವಾಜ್ಞೆಗಳ ಸೆಂಚುರಿ
ಭೂಮಿಯ ಮೇಲ್ಮೈಯಿಂದ 10 ಕಿ.ಮೀ ಆಳದಲ್ಲಿ ಈ ಕಂಪನ ಸಂಭವಿಸಿದ್ದು, ಮುಂದೆಯೂ ಸಣ್ಣ ಪ್ರಮಾಣದಲ್ಲಿ ಭೂಕಂಪಗಳು ಸಂಭವಿಸುವ ಸಾಧ್ಯತೆ ಇದೆ ಎಂದು NCS ಎಚ್ಚರಿಸಿದೆ. ಇದಕ್ಕೂ ಮುನ್ನ ಭಾನುವಾರವೂ ಅಫ್ಘಾನಿಸ್ತಾನ 4.2 ತೀವ್ರತೆಯ ಭೂಕಂಪಕ್ಕೆ ಸಾಕ್ಷಿಯಾಗಿತ್ತು. ಆದರೆ ಭಾನುವಾರದ ಭೂಕಂಪವು 140 ಕಿ.ಮೀ ಆಳದಲ್ಲಿ ಸಂಭವಿಸಿತ್ತು ಎಂದು NCS ತಿಳಿಸಿದೆ.
ಫೆಬ್ರವರಿ 23 ರಂದು ಅಫ್ಘಾನಿಸ್ತಾನದಲ್ಲಿ 120 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿತು. ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿ ಸಂಭವಿಸುವ ಭೂಕಂಪಗಳು ಹೆಚ್ಚು ಅಪಾಯಕಾರಿ. ಏಕೆಂದರೆ ಭೂಮಿಯ ಒಳಭಾಗದಿಂದ ಬಿಡುಗಡೆಯಾಗುವ ಶಕ್ತಿಯು ಕಡಿಮೆ ಅಂತರದಲ್ಲಿ ಮೇಲ್ಮೈ ತಲುಪುತ್ತದೆ. ಇದು ಭೂಮಿಯ ಮೇಲೆ ತೀವ್ರ ಕಂಪನಕ್ಕೆ ಕಾರಣವಾಗುತ್ತದೆ. ಪರಿಣಾಮವಾಗಿ ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಫ್ಘಾನಿಸ್ತಾನವು ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಪ್ರದೇಶದಲ್ಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಿಂದೂ ಕುಶ್ ಪರ್ವತ ಶ್ರೇಣಿಯು ಭೂವೈಜ್ಞಾನಿಕವಾಗಿ ಸಕ್ರಿಯ ಪ್ರದೇಶವಾಗಿದ್ದು, ಇಲ್ಲಿ ಪ್ರತಿ ವರ್ಷ ಭೂಕಂಪಗಳು ಸಂಭವಿಸುತ್ತವೆ ಎಂದು ರೆಡ್ ಕ್ರಾಸ್ ಹೇಳಿದೆ
ಇದನ್ನು ಓದಿ :ದೆಹಲಿ ವಿಧಾನಸಭಾ ಚುನಾವಣೆ: ಎಎಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುತ್ತದೆಯೇ?