ಮೂರನೇ ಅಲೆ ಸನ್ನಿಹಿತ : ಜಾಗೃತೆ ತಪ್ಪಿದರೆ ಅಪಾಯ ತಪ್ಪಿದ್ದಲ್ಲ – ಐಎಂಎ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ಲಾಕ್ಡೌನ್ ಅನ್ನು ತೆರವುಗೊಳಿಸಿದ ಬಳಿಕ ಜನರು ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ… ದೇಶದಲ್ಲಿ ಕೋವಿಡ್ ಮೂರನೇ ಅಲೆ ನಿಶ್ಚಿತವಾಗಿದ್ದು, ಧಾರ್ಮಿಕ ಯಾತ್ರೆ, ಪ್ರವಾಸೋದ್ಯಮ ಆರಂಭಕ್ಕೆ ರಾಜ್ಯಸರ್ಕಾರಗಳು ಆತುರ ಪಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಹೇಳಿದೆ.

ದೇಶದಲ್ಲಿ ಸಂಭಾವ್ಯ ಕೋವಿಡ್ ಸಾಂಕ್ರಾಮಿಕ ಮೂರನೇ ಅಲೆ ಕುರಿತು ಮಾಹಿತಿ ನೀಡಿರುವ ಐಎಂಎ, ಜನರು ಅನ್ ಲಾಕ್ ಬಳಿಕ ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು ಅನುಸರಿಸುತ್ತಿಲ್ಲ. ಈ ಬಗ್ಗೆ ಸರ್ಕಾರಗಳೂ ಕೂಡ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.

ಜನರು ತಮ್ಮ ಮನಸೋ ಇಚ್ಛೆ ತಿರುಗಾಡುತ್ತಿದ್ದಾರೆ. ಯಥೇಚ್ಛ ಜನಸಂದಣಿ ಇರುವಕಡೆಗಳಲ್ಲಿ ಸಾಮೂಹಿಕ ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ದೇಶದಲ್ಲಿ ಮೂರನೇ ಅಲೆ ಖಚಿತ ಎಂಬುದನ್ನು ಒತ್ತಿ ಹೇಳುತ್ತಿವೆ. ಇವರೇ ಕೋವಿಡ್ ಸಂಭಾವ್ಯ ಮೂರನೇ ಅಲೆಯ ಸೂಪರ್ ಸ್ಪ್ರೆಡರ್ ಗಳಾಗಿದ್ದಾರೆ ಎಂದು ಐಎಂಎ ಆತಂಕ ವ್ಯಕ್ತಪಡಿಸಿದೆ.

ಧಾರ್ಮಿಕ ಯಾತ್ರೆ, ಪ್ರವಾಸೋದ್ಯಮ ಆರಂಭಕ್ಕೆ ಆತುರ ಬೇಡ : ಇದೇ ವೇಳೆ ದೇಶದಲ್ಲಿ ಧಾರ್ಮಿಕ ಯಾತ್ರೆ, ಪ್ರವಾಸೋಧ್ಯಮ ಆರಂಭಕ್ಕೆ ಆತುರ ಬೇಡ ಎಂದು ಸಲಹೆ ನೀಡಿರುವ ಐಎಂಎ, ‘ಪ್ರವಾಸೋದ್ಯಮ, ತೀರ್ಥಯಾತ್ರೆಗಳ ಆರಂಭಕ್ಕೆ ಈಗ ಸೂಕ್ತ ಸಮಯವಲ್ಲ.. ಇದಕ್ಕಾಗಿ ಇನ್ನೂ ಒಂದಷ್ಟು ತಿಂಗಳು ಕಾಯಬೇಕಾಗುತ್ತದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಮೂರನೇ ಆರ್ಭಟಿಸುತ್ತಿದೆ. ಈ ಹೊತ್ತಿನಲ್ಲಿ ಧಾರ್ಮಿಕ ಯಾತ್ರೆ, ಪ್ರವಾಸೋಧ್ಯಮದಿಂದ ಅಪಾಯ ಕಟ್ಟಿಟ್ಟಬುತ್ತಿ. ಸೋಂಕು ಪ್ರಸರಣ ಹೆಚ್ಚಳವಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿಕೋವಿಡ್‌ ನಿರ್ವಹಣೆಯ ವಿಫಲತೆಯಿಂದಲೇ ಹರ್ಷವರ್ಧನ್‌ ರಾಜೀನಾಮೆ: ಡಿ.ಕೆ.ಶಿವಕುಮಾರ್‌

ಮೂರನೇ ಅಲೆ ಆರಂಭವಾಗಿದೆ : ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಕೋವಿಡ್ ಮೂರನೇ ಅಲೆ ಅಪ್ಪಳಿಸುತ್ತದೆ ಎಂಬ ತಜ್ಞರ ವರದಿಯ ಬೆನ್ನಲ್ಲೇ ಇತ್ತ ಹೈದರಾಬಾದ್ ಮೂಲಕ ವಿಜ್ಞಾನಿಯೊಬ್ಬರು ಕಳೆದ ಜುಲೈ 4ರಿಂದಲೇ ಕೋವಿಡ್ ಮೂರನೇ ಅಲೆ ಆರಂಭವಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಹಿರಿಯ ಭೌತವಿಜ್ಞಾನಿ ಡಾ.ವಿಪಿನ್ ಶ್ರೀವಾಸ್ತವ ಅವರು, ಭಾರತದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ವಿವರವಾಗಿ ವಿಶ್ಲೇಷಿಸಿದ್ದು, ಜುಲೈ 4 ರಿಂದಲೇ ಮೂರನೇ ಅಲೆ ಪ್ರಾರಂಭವಾಗಿರಬಹುದು ಎಂದು ಹೇಳಿದ್ದಾರೆ.

ಕಳೆದ 15 ತಿಂಗಳುಗಳ ಅಂಕಿ-ಅಂಶಗಳನ್ನು ವಿಶ್ಲೇಷಿಸಿರುವ ಹಾಗೂ ಹೊಸ ಸೋಂಕುಗಳು ಮತ್ತು ಸಾವುಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಲೆಕ್ಕಾಚಾರ ಹಾಕಿರುವ ಹೈದರಾಬಾದ್ ಮೂಲದ ಸಂಶೋಧಕರ ತಂಡ ಸ್ಪೋಟಕ ಮಾಹಿತಿಯನ್ನು ಹೊರಗೆ ಹಾಕಿದ್ದು, ಕರೋನ ಸಾಂಕ್ರಾಮಿಕ ರೋಗದ ಮೂರನೇ ಅಲೆ ಜುಲೈ 4 ರಂದು ಪ್ರಾರಂಭವಾಗಿ ನಮ್ಮ ನಡುವೆ ಕುಳಿತಿದೆ ಎಂದು ವರದಿ ಮಾಡಿದೆ.

ಇದನ್ನೂ ಓದಿ : ಸರಕಾರದ ವೈಫಲ್ಯವನ್ನು ಬಿಚ್ಚಿಟ್ಟಿದೆಯಾ ಸಂಪುಟ ಸರ್ಜರಿ? ಭರ್ತಿಯಾಗಿದ್ದರೂ ಇಬ್ಬರ ಕೈಯಲ್ಲಿದೆ ಆಡಳಿತದ ಕೀಲಿ ಕೈ!!

ಡಾ. ವಿಪಿನ್​ ಶ್ರೀವಾಸ್ತವ್​, ಪ್ರಸಿದ್ದ ಭೌತ ವಿಜ್ಞಾನಿ ಹಾಗೂ ಹೈದರಾಬಾದ್​ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಈ ಸಂಗತಿಯನ್ನು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಎರಡನೇ ಅಲೆಯ ಅಟ್ಟಹಾಸ ಪ್ರಾರಂಭವಾಗಿದ್ದು ಫೆಬ್ರುವರಿಯ ಮೊದಲ ವಾರದಲ್ಲಿ ಆಗಲೇ ಒಂದಷ್ಟು ಹೊಸ ರೂಪಾಂತರದ ಕೇಸ್​ಗಳು ಸಹ ಬಂದವು ಆದರೆ ಈ ಅಬ್ಬರದಲ್ಲಿ ಅದು ಸದ್ದು ಮಾಡಲಿಲ್ಲ. ಎಲ್ಲಾ ರೀತಿಯ ಅಧ್ಯಯನಗಳ ಪ್ರಕಾರ ಈಗಾಗಲೇ ಅಂದರೆ ಜುಲೈ 4ರಂದೇ 3 ಅಲೆಯ ವೈರಸ್​ ಬಂದು ನಮ್ಮ ನಡುವೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಡಾ. ಶ್ರೀವಾತ್ಸವ ಅವರು ವಿಶ್ಲೇಷಿಸಿದ ಸಂಗತಿಗಳಲ್ಲಿ ಅವರು ಮುಖ್ಯವಾಗಿ ತಿಳಿಸಿರುವ ಅಂಶ ಏನೆಂದರೇ, ಹೊಸ ತರಂಗದ ಪ್ರಾರಂಭಿಕ ಹಂತದ ಚಿಹ್ನೆಗಳು ಗೋಚರಿಸುತ್ತಿವೆ. ಅವರ ಪ್ರಕಾರ, ಸಾಮಾಜಿಕ ಅಂತರ, ಸ್ಯಾನಿಟೈಜರ್​ ಬಳಕೆ, ಮಾಸ್ಕ್​ಗಳ ಬಳಕೆ ಮತ್ತು ವ್ಯಾಕ್ಸಿನೇಷನ್ ಮುಂತಾದ ಕರೋನವೈರಸ್ ತಡೆಗಟ್ಟಲು ಇರುವ ಅಂಶಗಳನ್ನು ನಿರ್ಲಕ್ಷಿಸಿದರೆ ಶೀಘ್ರದಲ್ಲೇ ಮತ್ತೊಮ್ಮೆ ನಾವು ಅವಘಡಕ್ಕೆ ತುತ್ತಾಗುತ್ತೇವೆ ಎಂದು ಎಚ್ಚರಿಸಿದ್ದಾರೆ. ಕಳೆದ 460 ದಿನಗಳ ದೈನಂದಿನ ಕೋವಿಡ್ -19 ಡೇಟಾವನ್ನು ಮ್ಯಾಪ್ ತಯಾರಿಸಿದ್ದು ನಂತರ ಈ ಸಂಗತಿಯನ್ನು ಹೊರಹಾಕಲಾಗಿದೆ.

ಈ ಅಂಕಿ- ಅಂಶದ ಹೆಸರು ‘ಡೈಲಿ ಡೆತ್​ ಲೋಡ್​’ (DDL) ಈ ನಕ್ಷೆಯನ್ನು 24 ಗಂಟೆಗಳ ಅವಧಿಯಲ್ಲಿ ಕರೋನವೈರಸ್ ಸಾವುಗಳು ಮತ್ತು ಹೊಸ ಸಕ್ರಿಯ ಪ್ರಕರಣಗಳ ಅನುಪಾತವನ್ನು ತೆಗೆದುಕೊಳ್ಳುವ ಮೂಲಕ ಲೆಕ್ಕಹಾಕಲಾಗಿದೆ.

ಡಾ. ಶ್ರೀವಾಸ್ತವ್​ ಅವರು ಹೇಳಿದಂತೆ ”ನಾನು ಹೇಳಿರುವ ಲೆಕ್ಕಾಚಾರ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ. ಒಂದು ಸನ್ನಿವೇಶದಿಂದ ಮತ್ತೊಂದು ಸನ್ನಿವೇಶಕ್ಕೆ ಇದನ್ನು ಹೋಲಿಕೆ ಮಾಡಲು ಬರುವುದಿಲ್ಲ. ಈ ವ್ಯತ್ಯಾಸವನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.

2021 ರ ಮೇ ತಿಂಗಳಲ್ಲಿ ಸಾವಿನ ಸಂಖ್ಯೆ ತುಂಬಾ ಹೆಚ್ಚಾಗಿದ್ದಾಗ , ಮೇ 6 ಮತ್ತು ಮೇ 17 ರ ನಡುವಿನ 10 ದಿನಗಳ ಅವಧಿಯಲ್ಲಿ ‘ಡೈಲಿ ಡೆತ್​ ಲೋಡ್​’ (DDL) ತೀವ್ರವಾಗಿ ಏರಿಳಿತವಾಯಿತು ಎಂದು ಅವರು ವಿವರಿಸುತ್ತಾರೆ. ನಂತರ ಡಿಡಿಎಲ್ ಇಳಿಕೆಯಾಗಿದ್ದಾಗ ಇದ್ದಂತಹ ದನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಇದು ಹೇಳುತ್ತದೆ. ಎರಡನೇ ಅಲೆ ಉತ್ತುಂಗದಲ್ಲಿ ಇದ್ದಾಗಲೂ ಅತ್ಯಂತ ಕಡಿಮೆ ಸಾವು ಸಂಭವಿಸಿರುವುದನ್ನು ಈ ಅಂಕಿ-ಅಂಶ ಹೇಳುತ್ತದೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *