ಬಳ್ಳಾರಿ : ಜಿಂದಾಲ್ ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಜನರ ವಿರೋಧ ವ್ಯಕ್ತವಾಗಿದೆ. ಬಳ್ಳಾರಿ ಜಿಲ್ಲೆಯ ಜಿಂದಾಲ್ ಸಂಸ್ಥೆ ಕೊರೊನಾ ನಿಯಂತ್ರಣ ಮಾಡಲು 1000,ಆಕ್ಸಿಜನ್ ಬೆಡ್ ವ್ಯವಸ್ಥೆ ಗಳನ್ನು ಮಾಡಿ ಕೊರೊನಾ ನಿಯಂತ್ರಣ ಗೆ ಸಹಕಾರ ಮಾಡಲು ಮುಂದೆ ಬಂದಿದೆ. ಆದರೆ ಇದೇ ವಿಚಾರವಾಗಿ ಸಾರ್ವಜನಿಕರಿಗೂ ಮತ್ತು ಸಚಿವ ಆನಂದ್ ಸಿಂಗ್ ನಡುವೆ ಮಾತಿನ ಚಕಮಕಿ ನಡೆದಿದೆ.
ಜಿಂದಾಲ್ ಬೆಡ್ ಉಸ್ತುವಾರಿಯನ್ನು ಸಚಿವ ಆನಂದ್ ಸಿಂಗ್ ನೋಡಿಕೊಳ್ತಿದ್ದಾರೆ. ಶನಿವಾರ ಆಕ್ಸಿಜನ್ ಸಪ್ಲೈ ಮಾಡುವ ವಿಚಾರ ನಿಮಿತ್ತ ಫ್ಯಾಕ್ಟರಿ ವೀಕ್ಷಣೆ ಮಾಡಲು ಸಚಿವ ಜಗದೀಶ್ ಶೆಟ್ಟರ್ ಆಗಮಿಸಿ ವಾಸ್ತವ ಸ್ಥಿತಿಗಳನ್ನು ವೀಕ್ಷಿಸಿಹೋಗಿದ್ದಾರೆ.
ಇದೆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಜಿಂದಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ರೋಗಿಗಳುಗೆ ಅವಕಾಶವನ್ನು ಕೊಡಬೇಕು. ಇದನ್ನು ನೋಡುತ್ತಾ ಇದ್ದಾರೆ ಜಿಂದಾಲ್ ಅವರಿಗೆ ಮಾತ್ರವೇ ಟ್ರಿಟ್‌ಮೆಂಟ್ ಸಿಗುವ ಅವಕಾಶ ಕಾಣುತ್ತದೆ ಎಂದು ಸಚಿವ ಜಗದಿಷ್ ಶೆಟ್ಟರ್‌ಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಜನರ ಗೋಸ್ಕರ ಮಾಡಬೇಕು, ಅವರಗೋಸ್ಕರ ಮಾಡಿದರೆ ಏನೂ ಪ್ರಯೋಜನ ಇಲ್ಲವೆಂದು ಕಂಪನಿ ಅವರ ಜೊತೆಯಲ್ಲಿ ಮಾತುನಾಡುತ್ತೇನೆ ಎಂದರು.
ಈ ವಿಚಾರ ಆನಂದ್‌ಸಿಂಗ್‌ಗೆ ಮುಜುಗರ ತಂದಿದ್ದು, ಈ ವಿಷಯದ ಕುರಿತು ನನ್ನನ್ನು ಕೇಳೋದು ಬಿಟ್ಟು ಅವರನ್ನು ಯಾಕೆ ಕೇಳೋದು? ನೀವೂ ಲೀಡರ್ ಅಗಲಿಕ್ಕೆ ಬಂದಿದ್ದಿರಾ ಎಂದು ಸಾರ್ವಜನಿಕರ ಮೇಲೇ ಗರಂ ಆಗಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ.ಪಂಪನಗೌಡ.ಬಿ.ಬಳ್ಳಾರಿ.