ತೆರೆಯ ಮೇಲೆ ರಾರಾಜಿಸುತ್ತಿದೆ ರಾಬರ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಇಂದು ಬೆಳಗ್ಗೆ 6 ಗಂಟೆಗೆ ಬಿಡುಗಡೆಯಾಗಿದೆ. ಪೋಸ್ಟರ್‌, ಟೀಸರ್‌ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಸಂಚಲನ ಸೃಷ್ಟಿಸಿರುವ ‘ರಾಬರ್ಟ್ ಸಿನಿಮಾ ಇಂದು ಬರೋಬ್ಬರಿ 1200 ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದೆ.

ಚಾಲೆಂಜಿಂಗ್‌ ಸ್ಟಾರ್‌,  ಡಿ ಬಾಸ್‌ ಅಭಿನಯದ ಸಿನಿಮಾ ಇಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ತರುಣ್​ ಸುಧೀರ್​ ನಿರ್ದೇಶನ ಈ ಸಿನಿಮಾದಲ್ಲಿ ಆಶಾ ಭಟ್​ ಸಿನಿಮಾದ ನಾಯಕಿಯಾಗಿ ಮಿಂಚಿದ್ದಾರೆ, ಸಿನಿಮಾದ ಪ್ರಮುಖ ಪಾತ್ರದಲ್ಲಿ ತೆಲುಗಿನ ಖಳನಾಯಕ ಜಗಪತಿ ಬಾಬು ವಿಲನ್‌ ಆಗಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಮತ್ತು ಪ್ರಮುಖ ಪಾತ್ರಗಳಲ್ಲಿ ವಿನೋದ್​​ ಪ್ರಭಾಕರ್​, ರವಿಶಂಕರ್, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ನಟ ದರ್ಶನ ಕುರಿತು ಮತ್ತು ರಾಬಟ್‌ ಸಿನಿಮಾದ ಕುರಿತು  ಸಿಎಂ ಯಡಿಯೂರಪ್ಪನವರು ಶುಭಾಶಯಗಳು  ತಿಳಿಸಿದ್ದಾರೆ. ಇನ್ನು ವಿಶೇಷವೆಂದರೆ  ಸಿಎಂ ಯಡಿಯೂರಪ್ಪನವರು ತಾವು ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ.

ಪ್ರೇಕ್ಷಕರಲ್ಲಿ ಬಹು ಕೂತುಹಲ ಮೂಡಿಸಿರುವ ರಾಬಟ್‌ ಸಿನಿಮಾದ ಕುರಿತು ಸಿನಿಮಾ ನಟ, ನಟಿಯರು, ಅಭಿಮಾನಿಗಳು ಟ್ವೀಟರ್‌ ಖಾತೆಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ರಾಬಟ್‌ ಸಿನಿಮಾಕ್ಕೆ ಅಭಿನಂದೆಗಳನ್ನು ತಿಳಿಸಿದ್ದಾರೆ.

ಬಾಕ್ಸ್ ಆಫೀಸ್ ಸುಲ್ತಾನ್ ಗೆ ಹೀರೋ ಚಿತ್ರತಂಡದಿಂದ ಶುಭಾಶಯಗಳು,  ರಾಬರ್ಟ್ ಭರ್ಜರಿ ಯಶಸ್ಸು ಸಾಧಿಸಲಿ ಎಂದು ನಟ ರಿಷಬ್‌ ಶಟ್ಟಿ  ಟ್ವೀಟ್‌ ಮೂಲಕ ಶುಭಾಶಯಗಳು ತಿಳಿಸಿದ್ದಾರೆ. ಹಿರಿಯ ನಟೆ ಸುಮಲತಾ ಅಂಬರೀಶ್‌ ಸೇರಿದಂತೆ ಅನೇಕರು ಟ್ವೀಟ್‌ ಮೂಲಕ ಶುಭಾಶಯ ಕೋರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *