ಕೋವಿಡ್ ಲಸಿಕೆ ಅಡ್ಡಪರಿಣಾಮ : ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ನವದೆಹಲಿ(ಜ.20): ದೇಶಾದ್ಯಂತ ಕೋವಿಡ್ ಲಸಿಕಾ ವಿತರಣೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಮೂರನೇ ದಿನದ ಹೊತ್ತಿಗೆ ದೇಶಾದ್ಯಂತ ಲಸಿಕೆ ಪಡೆದವರ ಸಂಖ್ಯೆ  3,81,305 ಮಂದಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆದರೆ ಲಸಿಕೆ ಪಡೆದವರಲ್ಲಿ 700 ಕ್ಕೂ ಹೆಚ್ಚು ಜನರಿಗೆ ಅಡ್ಡ ಪರಿಣಾಮಗಳು ಗೋಚರವಾಗಿದ್ದು, ಇಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ಕೊರೊನಾ ಲಸಿಕೆ ವಿತರಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ನಾಲ್ಕು ದಿನಗಳಲ್ಲಿ 80,696 ಜನರಿಗೆ ವ್ಯಾಕ್ಸಿನ್ ನ್ನು ವಿತರಿಸಲಾಗಿದೆ.

ಕೊರೋನಾ ಲಸಿಕೆ ಪಡೆದ ಕೇವಲ ಶೇ.0.18 ಜನರ ಮೇಲೆ ಮಾತ್ರ ಅಡ್ಡಪರಿಣಾಮ ಉಂಟಾಗಿದೆ. ಕೇವಲ ಶೇ.0.002ರಷ್ಟುಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ವಿಶ್ವದಲ್ಲೇ ತೀರಾ ಕಮ್ಮಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆರೋಗ್ಯ (ಆರೋಗ್ಯ) ಸದಸ್ಯ ವಿ.ಕೆ. ಪೌಲ್‌, ‘ಲಸಿಕೆ ಪಡೆದ ನಂತರ ಉಂಟಾದ ಅಡ್ಡಪರಿಣಾಮಗಳು, ಅದರ ಗಂಭೀರತೆ ನಗಣ್ಯ. ಎರಡೂ ಲಸಿಕೆಗಳು ಸುರಕ್ಷಿತ’ ಎಂದು ಸ್ಪಷ್ಟಪಡಿಸಿದರು.

ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? ಭಾಗ-1 ದೇಹ ರಕ್ಷಣಾ ವ್ಯೂಹ ಮತ್ತು ಲಸಿಕೆಯ ವಿಜ್ಞಾನ

ಇದೇ ವೇಳೆ, ‘ವೈದ್ಯರು, ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಬೇಸರದ ವಿಚಾರ. ಹೀಗಾಗಿ ಜನರು ಲಸಿಕೆ ಪಡೆಯಲು ಮುಂದಾಗಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕದಲ್ಲೂ ಲಸಿಕೆ ವಿತರಣೆ  ನಡೆಯುತ್ತಿದೆ. ಕೊರೊನಾ ಲಸಿಕೆ ವಿತರಣೆಯಲ್ಲಿ ಕರ್ನಾಟಕ  ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು ನಾಲ್ಕು ದಿನಗಳಲ್ಲಿ 80,696 ಜನರಿಗೆ ವ್ಯಾಕ್ಸಿನ್ ನ್ನು ವಿತರಿಸಲಾಗಿದೆ. ಕೆಲವೆಡೆ ಅಡ್ಡ ಪರಿಣಾಮದ ವರದಿಗಳು ಕೇಳಿ ಬರುತ್ತಿವೆ. ಮೂರನೇ ಹಂತದ ಟ್ರಯಲ್‌ ಪೂರ್ಣಗೊಳ್ಳದ ಕೋವ್ಯಾಕ್ಸಿನ್‌ ಲಸಿಕೆ ಪಡೆಯುವವರಿಂದ ಒಪ್ಪಿಗೆ ಪತ್ರದ ಮೇಲೆ ಸಹಿ ಪಡೆಯುತ್ತಿರುವುದು ಸಾಕಷ್ಟು ಜನರಲ್ಲಿ ಅನುಮಾನ ಮೂಡಿಸುತ್ತಿದೆ.

ಇದನ್ನೂ ಓದಿಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? ಭಾಗ-4

ಸಾರ್ವಜನಿಕರ ಹಿತದೃಷ್ಟಿಯಿಂದ ಸೀಮಿತ ಬಳಕೆಗೆ ಕೇಂದ್ರೀಯ ಸಂಸ್ಥೆಗಳು ಕ್ಲಿನಿಕಲ್‌ ಟ್ರಯಲ್‌ ಮಾದರಿಯಲ್ಲಿ ಕೋವ್ಯಾಕ್ಸಿನ್‌ ವಿತರಣೆಗೆ ಒಪ್ಪಿಗೆ ನೀಡಿವೆ. ಒಂದು ವೇಳೆ ಏನಾದರೂ ಅಡ್ಡ ಪರಿಣಾಮಗಳು ಉಂಟಾದಲ್ಲಿ ಸರಕಾರ ಗುರುತಿಸಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ, ಗಂಭೀರ ಸ್ವರೂಪದ ಅಡ್ಡಪರಿಣಾಮ ಉಂಟಾದರೆ ಮತ್ತು ಅದು ಸಾಬೀತಾದರೆ ಭಾರತ್‌ ಬಯೋಟೆಕ್‌ ಇಂಡಿಯಾ ಲಿ.ನಿಂದ ಪರಿಹಾರ ನೀಡಲಾಗುತ್ತದೆ ಎಂದು ಬರೆದಿರುವ ಪತ್ರದ ಮೇಲೆ ಸಹಿ ಪಡೆಯಲಾಗುತ್ತದೆ. ಈ ವಿಚಾರವಾಗಿ ಸಾಕಷ್ಟು ಜನ ಅನುಮಾನ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವೈದ್ಯರೇ ಕೋವ್ಯಾಕ್ಸಿನ್‌ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸುತ್ತಿದೆ.

Donate Janashakthi Media

Leave a Reply

Your email address will not be published. Required fields are marked *