ಬೆಂಗಳೂರು ಜ, 02 : ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯ್ತಿಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಳಿಕ ರಾಜ್ಯ ಚುನಾವಣಾ ಆಯೋಗವು ರಾಜ್ಯದ 5,956 ಗ್ರಾಮ ಪಂಚಾಯ್ತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ(ಅ), ಹಿಂದುಳಿದ ವರ್ಗ(ಬ) ಮತ್ತು ಸಾಮಾನ್ಯ ವರ್ಗಗಳಗೆ ಹಾಗೂ ಈ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಸಂಖ್ಯೆಗಳನ್ನು, ನಿಗದಿ ಪಡಿಸಿ, ರಾಜ್ಯ ಚುನಾವಣಾ ಆಯೋಗ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಈ ಕುರಿತಂತೆ ಗೆಜೆಟ್ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಚುನಾವಣಾ ಆಯೋಗವು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಹುದ್ದೆಗಳನ್ನು ಆಯಾಯ ತಾಲೂಕಿನ ಜನಸಂಖ್ಯೆಯ ಆಧಾರದ ಮೇಲೆ ನಿಗದಿ ಪಡಿಸಿದೆ. 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಈ ಕೆಳಗಿಂತೆ ನಿಗಧಿ ಪಡಿಸಿ ಗೆಜೆಟ್ ನೋಟಿಫಿಕೇಷನ್ ನಲ್ಲಿ ಪ್ರಕಟಿಸಿದೆ.
ಮೀಸಲಾತಿ ಕುರಿತು ಜಿಲ್ಲಾವಾರು ಮಾಹಿತಿ ಈ ಕೆಳಗಿನ ಚಿತ್ರದಲ್ಲಿವೆ.