ಬೆಂಗಳೂರು ಜ 01 : ಕೇಂದ್ರ ಸರಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ಪ್ರತಿಯನ್ನು ಸುಟ್ಟು ಹಾಕುವ ಮೂಲಕ ಸಿಐಟಿಯು ಹೊಸ ವರ್ಷಾಚರಣೆಯನ್ನು ಆಚರಿಸಿದೆ. ಹೊಸ ವರ್ಷ ಹೊಸ ಪ್ರತಿಜ್ಞೆ ಎಂಬ ಘೋಷಣೆಯೊಂದಿಗೆ ಕೇಂದ್ರ ಸರಕಾರದ ಕಾರ್ಮಿಕ ರೈತ ವಿರೋಧಿ ಕಾಯ್ದೆಗಳ ಪ್ರತಿಯನ್ನು ರಾಜ್ಯವ್ಯಾಪಿ ಧಹಿಸಿದ್ದು ವಿಶೇಷವಾಗಿತ್ತು.
ಮಂಡ್ಯ, ಹುಬ್ಬಳ್ಳಿ, ರಾಮನಗರ, ಮೈಸೂರು, ಕಲಬುರ್ಗಿ, ಕೋಲಾರ, ಬಳ್ಳಾರಿ, ಹಗರಿಬೊಮ್ನಹಳ್ಳಿ, ಮೈಸೂರು, ತುಮಕೂರು ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆದಿದೆ. ರೈತ-ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ಸು ಪಡೆಯಬೇಕು,ಪ್ರತಿ ಕುಟುಂಬಕ್ಕೆ ಮಾಸಿಕ 7500ರೂ ನೀಡಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಲಾಯಿತು.
ತುಮಕೂರಿನಲ್ಲಿ ಬೆಳಗ್ಗೆ 5 ಗಂಟೆಗೆ ಪೌರ ಕಾರ್ಮಿಕರು “ಕಾರ್ಮಿಕ ವಿರೋಧಿ” ಕಾಯ್ದೆಯ ಪ್ರತಿಯನ್ನು ಧಹಿಸಿ ಕೆಲಸವನ್ನು ಆರಂಬಿಸಿದ್ದು ವಿಶೇಷವಾಗಿತ್ತು. ಹುಬ್ಬಳ್ಳಿಯಲ್ಲಿ ಎಪಿಎಂಸಿ ಕಾರ್ಮಿಕರು ಕೇಂದ್ರ ಕಾರ್ಮಿಕ ಕಾಯ್ದೆಯ ಪ್ರತಿಯನ್ನು ಸುಟ್ಟು ಹಾಕುವ ಮೂಲಕ ಆಕ್ರೊಶ ವ್ಯಕ್ತಪಡಿಸಿದರು. ಅನೇಕ ಕಡೆ ಅಂಗನವಾಡಿ ನೌಕರರು ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿ ಕೆಲಸ ಆರಂಭಿಸಿದ್ದು ವಿಶೇಷವಾಗಿತ್ತು. ಬಿಸಿಯೂಟ, ಹಮಾಲಿ ಕಾರ್ಮಿಕರು, ಕಾರ್ಖಾನೆಯ ಕಾರ್ಮಿಕರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.