ಹಾಸನ: ಕಾಡಿನಿಂದ ಆಹಾರ ಅರಿಸಿಕೊಂಡು ಬಂದು ಜಮೀನಿನೊಳಗೆ ಹಾದುಹೋಗುತ್ತಿದ್ದ ಮೂರು ಕರಡಿಗಳು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಲ್ಲುಸಾದರ ಹಳ್ಳಿ ಗ್ರಾಮದಲ್ಲಿ ಬಾರಿ ಮಳೆ ಗಾಳಿಗೆ ರೈತರ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದೆ.
ಇದು ಯಾರ ಗಮನಕ್ಕೂ ಬಂದಿಲ್ಲ. ಆಹಾರ ಅರಸಿ ಬರುತ್ತಿದ್ದ ಮೂರು ಕರಡಿಗಳ ಪೈಕಿ ಗಂಡು ಕರಡಿ ಮೊದಲು ರೈತನ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒದ್ದಾಡಿ ಪ್ರಾಣ ಬಿಟ್ಟಿದೆ.
ಕರಡಿ ಒದ್ದಾಡುವುದನ್ನು ಕಂಡು ಗಾಬರಿಯಿಂದ ಓಡಿದ ಮರಿ ಕರಡಿ ಹಾಗೂ ತಾಯಿ ಕರಡಿ ನಂತರ ಪಕ್ಕದ ರೈತನ ಜಮೀನಿಗೆ ನುಗ್ಗಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯತ್ ಸ್ಪರ್ಶದಿಂದ ತಾಯಿ ಕರಡಿ ಹಾಗೂ ಮರಿ ಕರಡಿ ಪ್ರಾಣ ಬಿಟ್ಟಿದೆ.
ಇದನ್ನೂ ಓದಿ: ಫ್ರಿಜ್‌ನಲ್ಲಿಟ್ಟಿದ್ದ ಆಹಾರ ಸೇವಿಸಿ 5 ವರ್ಷದ ಮಗು ಸಾವು
ಆರರಿಂದ-ಏಳು ವರ್ಷದ ಗಂಡು-ಹೆಣ್ಣು ಕರಡಿಗಳು ಹಾಗೂ ಒಂದು ವರ್ಷದ ಕರಡಿ ಮರಿ ತಮ ಪ್ರಾಣ ಕಳೆದುಕೊಂಡು ರೈತರ ಪ್ರಾಣ ಉಳಿಸಿವೆ. ಬೆಳಿಗ್ಗೆ ಜಮೀನಿನ ಬಳಿ ಬಂದ ರೈತರು ಮೂರು ಕರಡಿಗಳು ಸಾವನ್ನಪ್ಪಿರುವುದನ್ನು ಕಂಡು ಎಚ್ಚೆತ್ತುಕೊಂಡು ಕೂಡಲೇ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ವಿದ್ಯುತ್ ತಂತಿ ತುಂಡಾಗಿ ಕರೆಂಟ್ ಶಾಕ್ನಿಂದಲೇ ಕರಡಿಗಳು ಮೃತಪಟ್ಟಿವೆ ಎಂದು ರೈತರು ದೃಢಪಡಿಸಿದ್ದಾರೆ.ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳು ಮೂರು ಕರಡಿಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದ್ದಾರೆ.
ಇದನ್ನೂ ನೋಡಿ: ಸಾಲಕ್ಕಾಗಿ ನೀಡಿದ ಚೆಕ್ ನಿಂದ ಆಗುವ ತೊಂದರೆಗಳು