ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಆದರೆ ಫಲಿತಾಂಶ ಮಾರ್ಗಸೂಚಿ ತಂತ್ರ ಅನುಸರಿಸಿ ಫಲಿತಾಂಶ ನೀಡಲಾಗಿದೆ. ಅದರಂತೆ ಉತ್ತೀರ್ಣಗೊಂಡ ವಿದ್ಯಾರ್ಥಿಗಳಲ್ಲಿ 2,239 ವಿದ್ಯಾರ್ಥಿಗಳು 600ಕ್ಕೆ 600 ಅಂಗ ಗಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 3,35,138 ವಿದ್ಯಾರ್ಥಿಗಳು ಹಾಗೂ 3,31,359 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಇದನ್ನು ಓದಿ: ಪಿಯುಸಿ ನಂತರ ಮುಂದೇನು ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಶಿಬಿರ
ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ಪ್ರಕಟಸಿದರು. ಫಲಿತಾಂಶದ ವಿವರಗಳನ್ನು ಮಲ್ಲೇಶ್ವರಂನ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದರು.
- 6,66,497 ವಿದ್ಯಾರ್ಥಿಗಳು ತೇರ್ಗಡೆ
- ಡಿಸ್ಟಿಂಕ್ಷನ್ ಮತ್ತು ಮೊದಲ ಶ್ರೇಣಿಯಲ್ಲಿ ತೇರ್ಗಡೆ: 4,50,706 ವಿದ್ಯಾರ್ಥಿಗಳು
- ದ್ವಿತೀಯ ದರ್ಜೆ- 1,47,055 ವಿದ್ಯಾರ್ಥಿಗಳು
- ತೃತೀಯ ದರ್ಜೆ- 68,729 ವಿದ್ಯಾರ್ಥಿಗಳು
- ಕಲಾವಿಭಾಗದಲ್ಲಿ 600 ಅಂಕಗಳಿಕೆ: 18 ವಿದ್ಯಾರ್ಥಿಗಳು
- ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಕೆ: 292 ವಿದ್ಯಾರ್ಥಿಗಳು
- ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಕೆ: 1929 ವಿದ್ಯಾರ್ಥಿಗಳು
- ಫಲಿತಾಂಶ ತಡೆ ಹಿಡಿಯಲಾದ ವಿದ್ಯಾರ್ಥಿಗಳ ಸಂಖ್ಯೆ- 07
ಈ ಬಾರಿ ಫಲಿತಾಂಶವನ್ನು ಪರೀಕ್ಷೆಯನ್ನು ನಡೆಸದ ಪ್ರಕಟಿಸಲಾಗಿದೆ. ಎಸ್ಎಸ್ಎಲ್ ಸಿ, ಪ್ರಥಮ ಪಿಯುಸಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಕೃಪಾಂಕ ಅನುಸರಿಸಿ ಫಲಿತಾಂಶವನ್ನು ನೀಡಲಾಗಿದೆ. ಎಸ್ ಎಸ್‌ಎಲ್‌ಸಿ ಯ ಶೇ.45ರಷ್ಟು, ಮೊದಲ ಪಿಯುಸಿ ಶೇ. 45, ದ್ವಿತೀಯ ಪಿಯುಸಿ ಶೇ.10, ಶೇ.5ರಷ್ಟು ಕೃಪಾಂಕ ನೀಡಿ ಫಲಿತಾಂಶ ನೀಡಲಾಗಿದೆ. ತಜ್ಞರ ವರದಿ ಆಧಾರದ ಮೇಲೆ ಫಲಿತಾಂಶವನ್ನು ನೀಡಲಾಗುತ್ತಿದೆ.
ಇದನ್ನು ಓದಿ: ಅಕ್ಟೋಬರ್ 1ರಿಂದ ಶೈಕ್ಷಣಿಕ ವರ್ಷಾರಂಭ: ಯುಜಿಸಿ
ಈ ಬಾರಿ 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 2,52,056 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಪಡೆದಿದ್ದರೆ 1,47,055 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ನಲ್ಲಿ ತೆರ್ಗಡೆ ಹೊಂದಿದ್ದಾರೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡದ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಬೆಂಗಳೂರು ದಕ್ಷಿಣವಿದ್ದು ಇಲ್ಲಿ 302 ವಿದ್ಯಾರ್ಥಿಗಳು ಪೂರ್ಣ ಅಂಕವನ್ನು ಪಡೆದುಕೊಂಡಿದ್ದಾರೆ. ಬೆಂಗಳೂರು ಉತ್ತರದ 261 ವಿದ್ಯಾರ್ಥಿಗಳು, ಉಡುಪಿಯ 149 ವಿದ್ಯಾರ್ಥಿಗಳು, ಹಾಸನದ 104 ವಿದ್ಯಾರ್ಥಿಗಳು 600 ಅಂಕಗಳನ್ನು ಪಡೆದಿದ್ದಾರೆ.
ಫಲಿತಾಂಶ ಬೇಡ ಎನ್ನುವವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪೂರಕ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪೂರಕ ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಾರ ಆಗಸ್ಟ್ 19 ರಿಂದ ಸೆಪ್ಟಂಬರ್ 3 ರವರೆಗೆ ಪರೀಕ್ಷೆ ನಡೆಯಲಿದೆ. ಇದೇ ಅವಧಿಯಲ್ಲಿ ಸಿಇಟಿ ಪರೀಕ್ಷೆ ನಡೆಯಲಿರುವುದರಿಂದ ಸೆಪ್ಟೆಂಬರ್ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷಾ ಅರ್ಜಿ ಸಲ್ಲಿಸಲು ಜುಲೈ 31 ಕಡೆ ದಿನಾಂಕ ಆಗಿದೆ.