ಕೆಪಿಟಿಸಿಎಲ್ ನ ನೇಮಕಾತಿ ಆದೇಶವನ್ನು ರದ್ದುಗೊಳಿಸಿರುವ ಸರಕಾರದ ಕ್ರಮವನ್ನು ಖಂಡಿಸಿ ಅಭ್ಯರ್ಥಿಗಳು ಇಂದಿನಿಂದ ಫ್ರೀಡಂ ಪಾರ್ಕ್ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಸೂಚನೆಯಂತೆ ಹಲವು ಇಲಾಖೆಗಳ ನೇಮಕಾತಿ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಕೆಲವು ನೇಮಕಾತಿಗಳನ್ನು ರದ್ದು ಮಾಡಿದೆ ಎಂಬ ಅಂಶವು ಈಗ ಬೆಳಕಿಗೆ ಬಂದಿದೆ. ಆ ಸಾಲಿಗೆ ಈಗ ಕೆಪಿಟಿಸಿಎಲ್ ನ ನೇಮಕಾತಿ ಸೇರಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು. 2020 ರ ಫೆಭ್ರವರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಕಿರಿಯ ಸಹಾಯಕ ಎಂಜಿನಿಯರ್ ನೇಮಕಾತಿ ಪ್ರಕ್ರೀಯೆಯ ಆದೇಶವನ್ನು ಹೊರಡಿಸಿತ್ತು.
ನೇಮಕಾತಿ ರದ್ದು ಮಾಡಿರುವ ಸರಕಾರ ಕ್ರಮವನ್ನು ಪ್ರಶ್ನಿಸುವಂತೆ ವಿಪಕ್ಷ ನಾಯಕರಿಗೆ ಮನವಿ ಮಾಡಿದ್ದೇವೆ. ಸಧನದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಚರ್ಚೆ ನಡೆಸಬಹುದು ಎಂಬ ಭರವಸೆ ಇದೆ ಎಂದು ಪ್ರತಿಭಟನೆಕಾರರು ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಪ್ರೇಮ್, ಸುನೀಲ್, ಪೂಜಾ, ಹರೀಶ್ ಸೇರಿದಂತೆ ನೂರಕ್ಕು ಹೆಚ್ಚು ಪ್ರತಿಭಟನೆಕಾರರು ಭಾಗವಹಿಸಿದ್ದಾರೆ.