ಮತ್ತೆ-ಮತ್ತೆ ಎಲ್‍ಪಿಜಿ ಏಟು-ಜಿಡಿಪಿ ಜಿಗಿತದ ಜೋಕು ಮತ್ತು  ಹರ್ಯಾಣದಲ್ಲಿ ‘ಸಬ್‍ ಕಾ ಪ್ರಯಾಸ್’ ಜಾರಿ

ವೇದರಾಜ ಎನ್‌ ಕೆ

ಕಳೆದ ವಾರದ ನೋಟೀಕರಣದ ಪ್ರಕಟಣೆಯ ನಂತರ ಈ ವಾರ,ಅದರ ಜೊತೆಗೇ, ಇನ್ನೆರಡು ಕ್ರಮಗಳು ವ್ಯಂಗ್ಯಚಿತ್ರಕಾರರ ಗಮನ ಸೆಳೆದವು- ಎರಡು ತೀಗಳಲ್ಲಿ ಮೂರನೇ ಬಾರಿ ಅಡುಗೆ ಅನಿಲದ ದರಗಳಲ್ಲಿ ಏರಿಕೆ ಮತ್ತು ಅದನ್ನು ಬದಿಗೊತ್ತಿ ಜಿಡಿಪಿ ಯಲ್ಲಿ ‘ಜಿಗಿತ’ದ ಪ್ರಕಟಣೆ. ಇವೆರಡಕ್ಕೂ ಮೊದಲು ಗಮನ ಸೆಳೆದದ್ದು ಹರ್ಯಾಣದಲ್ಲಿ ರೈತರ ‘ತಲೆ ಒಡೆ’ ದಾದರೂ ಪ್ರತಿಭಟನೆಯನ್ನು ಹತ್ತಿಕ್ಕುವ ಆದೇಶ.

ಸಪ್ಟಂಬರ್‍ 1 ರಿಂದ ಮತ್ತೆ ಎಲ್‍ಪಿಜಿ ಬೆಲೆಯಲ್ಲಿ 25ರೂ.ಹೆಚ್ಚಳವಾಗಿದೆ. ಜುಲೈನಲ್ಲಿ 25.50 ಮತ್ತು ಆಗಸ್ಟ್ ಮಧ್ಯದಲ್ಲಿ 25 ರೂ. ನಂತರ ಮತ್ತೆ 25ರೂ. ಅಂದರೆ ಎರಡು ತಿಂಗಳಲ್ಲಿ 75.50 ರೂ,., ಅಂದರೆ ಸುಮಾರು 10% ಹೆಚ್ಚಳದ ನಂತರ ಒಂದು ಸಿಲಿಂಡರ್ ನ ಬೆಲೆ ಬೆಂಗಳೂರಿನಲ್ಲಿ 887.50 ತಲುಪಿದೆ, ಕೊಲ್ಕತಾದಲ್ಲಿ ಆಗಲೇ 900ರೂ. ದಾಟಿದೆ, ಪೆಟ್ರೋಲಿನ ಶತಕದ  ನಂತರ ನಾಲ್ಕಂಕಿಯ ಎಲ್‍ಪಿಜಿಗೆ ಹೆಚ್ಚು ಸಮಯ ಕಾಯಬೇಕಾಗಿಲ್ಲ. ದೇಶ ಇನ್ನೂ ಒಲಿಂಪಿಕ್‍-ಪಾರಾಲಿಂಪಿಕ್ ಗುಂಗಿನಲ್ಲೇ ಇರುವಾಗ ಇದು ಕೇಂದ್ರ ಸರಕಾರದ ಹೈಜಂಪ್‍ ‘ಸಾಧನೆ’ ಎಂದು  ಸಹಜವಾಗಿಯೇ ವರ್ಣಿಸಬಹುದು! ಆದರೆ  ಅದರ ಹೊರೆಯನ್ನು ಹೊರಬೇಕಾದವರ ಕಷ್ಟವನ್ನೂ ಮರೆಯುವಂತಿಲ್ಲವಲ್ಲ!

 

 

***

ಈ ವರ್ಷದ ಮೊದಲ 8 ತಿಂಗಳಲ್ಲಿ 190 ರೂ. ಅಂದರೆ 27% ಏರಿಕೆಯಾಗಿದೆ, ಅಚ್ಛೇದಿನ್‍ ಆರಂಭವಾದ ನಂತರದ 7 ವರ್ಷಗಳಲ್ಲಿ ದುಪ್ಪಟ್ಟಿಗಿಂತಲೂ ಹೆಚ್ಚಿನ ಏರಿಕೆ: ಸರಾಸರಿ 410ರಿಂದ 887ಕ್ಕೆ!

ಇನ್ನು ಮುಂದೆ ಅದು ಸಾಮಾನ್ಯ ಮನೆಗಳಿಗೆ ಹೊಂದಿಕೆಯಾಗದು ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರ.

 

ಸುಭಾನಿ (ಡೆಕ್ಕನ್‍ ಕ್ರಾನಿಕಲ್)

***

‘ಸಬ್‍ ಕಾ ವಿಕಾಸ್’ ಬದಲು ಎಂತಹಾ ವಿಕಾಸ….ತುಂಬಿದ ಸಿಲಿಂಡರ್‍ ಖಾಲಿ ಮಾಡಿ ಅಡುಗೆಗೆ ಕಟ್ಟಿಗೆ ಹೊರುವತ್ತ!

ದಿನೇಶ್ ಕುಕ್ಕುಜಡ್ಕ, ಫೇಸ್‍ ಬುಕ್

***

ಬೆಂಗಳೂರಿಗೆ ಸಂಘಟನಾ ಕೆಲಸದಲ್ಲಿ ಬಂದಿದ್ದ ಆಳುವ ಪಕ್ಷದ ಒಬ್ಬ ಕೇಂದ್ರ ಮುಖಂಡರು ಕೇಂದ್ರ ಸರಕಾರದ ’ಸಾಧನೆ’ಗಳ ರಾಗ ಹಾಡಿ, ಅನಿಲ ಬೆಲೆ ಏರಿಕೆ ಕುರಿತ ಪತ್ರಕರ್ತರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಾದಾಗ “ಒಂದು ಪೆಟ್ರೋಲ್, ಒಂದು ಟೊಮೆಟೊ, ಒಂದು ಈರುಳ್ಳಿ ವಿಚಾರ ಇಟ್ಟುಕೊಂಡು ಚರ್ಚೆ ಮಾಡಬೇಡಿ” ಎಂದರಂತೆ!

 

ಪ್ರಕಾಶ್ ಶೆಟ್ಟಿ(ಪ್ರಜಾವಾಣಿ)

ಟಿಪ್ಪಣಿಯ ಅಗತ್ಯವೇ ಇಲ್ಲ!

***

 

ಆದರೂ ಆಳುವ ಪಕ್ಷದ ಮುಖಂಡರು  ಅಪೇಕ್ಷಿಸುವಂತೆ, ‘ಪಾಸಿಟಿವ್’ ಆಗಿ ವಿಚಾರ ಮಾಡುವುದು ಹೇಗೆ ಎಂದು ಈ ವ್ಯಂಗ್ಯಚಿತ್ರಕಾರರು ಐಡಿಯಾ ಕೊಟ್ಟಿದ್ದಾರೆ.

ಮೊದಲು ಹೆಚ್ಚು ಬೆಲೆಯ ಆಹಾರ ತಿನ್ನಲು ಹೊರಗೆ ಹೋಗುತ್ತಿದ್ದೆವು,

ಈಗ ಮನೆಯಲ್ಲೇ ತಿನ್ನಬಹುದು. ಥಿಂಕ್‍ ಪಾಸಿಟಿವ್..”

 

ಕೀರ್ತಿಶ್‍ (ಬಿಬಿಸಿ ನ್ಯೂಸ್‍ ಹಿಂದಿ)

***

ಅದೇ ಸಮಯದಲ್ಲಿ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ 20.1%ಕ್ಕೆ ಜಿಗಿದಿದೆ ಎಂದು ಕೇಂದ್ರ ಸರಕಾರದ ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹರ್ಷ ವ್ಕಕ್ತ ಪಡಿಸಿದೆ.

 

“ನೋಡಿಲ್ಲಿ, ಜಿಡಿಪಿ ಯತ್ತ!       “ಖಂಡಿತಾ ನೋಡುತ್ತಿದ್ದೇನೆ !!”

ಅಲೋಕ್ ನಿರಂತರ್,  ಸಕಾಳ್‍ ಮಾಧ್ಯಮ ಗುಂಪು

***

ಜಿಡಿಪಿ ದತ್ತಾಂಶ ದೇಶ ಅರ್ಥವ್ಯವಸ್ಥೆ v ಆಕಾರದ ಚೇತರಿಕೆ ಪಡೆಯುತ್ತದೆ ಎಂದು ಸರಕಾರ ಹೇಳಿದ್ದನ್ನು ಸಾಬೀತು ಮಾಡಿದೆ ಎಂದು ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು ಇನ್ನಷ್ಟು ಸಂತೋಷದಿAದ ಹೇಳಿದ್ದಾರೆ.

ಆದರೆ ಕಳೆದ ವರ್ಷ ಇದೇ ಅವಧಿಯ ಜಿಡಿಪಿ ದರದಲ್ಲಿ 24.3% ಕುಸಿತವಾಗಿತ್ತು ಎಂಬುದನ್ನು ಅನುಷ್ಠಾನ ಮಂತ್ರಾಲಯದ ಆ ಪ್ರಕಟಣೆಯೇ ಹೇಳುತ್ತದೆ. ಅಂದರೆ ಇದು ಕಳೆದ ವರ್ಷದ ಕುಸಿತದ ಮೇಲೆ ಆಗಿರುವ ‘ಏರಿಕೆ, ಅಂದರೆ, ವಾಸ್ತವವಾಗಿ ಇನ್ನೂ 4.2%ದಷ್ಟು ಕೆಳಗೆಯೇ ಇದೆ! ಜೋಕಿನಲ್ಲಾದೂ ಏನಾದರೂ ಹೊಸ ರುಚಿ ಇರಲಿ ಎಂಬ ನಿರೀಕ್ಷೆಯಲ್ಲಿ ತಪ್ಪೇನಿಲ್ಲ.

ಪಿ.ಮಹಮ್ಮದ್, ಫೇಸ್ ಬುಕ್

***

ಕಳೆದ ನಾಲ್ಕು ಹಣಕಾಸು ವರ್ಷಗಳ ಮೊದಲ ತ್ರೈಮಾಸಿಕದ ಅಂಕಿ-ಅಂಶಗಳನ್ನು ನೋಡಿದಾಗ ಇದು ಸ್ಪಷ್ಟವಾಗಿ ಕಾಣುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅವು ಹೀಗಿವೆ: 2017: ರೂ. 31.46ಲಕ್ಷ ಕೋಟಿ ; 2018: 33.84 ಲಕ್ಷ ಕೋಟಿ; 2019: 35.66 ಲಕ್ಷ ಕೋಟಿ ; 2020: 26.95 ಲಕ್ಷ ಕೋಟಿ ಮತ್ತು 2021ರ ಮೊದಲ ತ್ರೈಮಾಸಿಕದಲ್ಲಿ  32.38ಲಕ್ಷ ಕೋಟಿ ರೂ.

ಅಂದರೆ ಇದು ಕೊವಿಡ್-ಪೂರ್ವದ 2019ರ ಮೊದಲ ತ್ರೈಮಾಸಿಕಕ್ಕಿಂತ ಕಡಿಮೆ ಮಾತ್ರವಲ್ಲ, ಅದರ ಹಿಂದಿನ ವರ್ಷದ ಮೊದಲ ತ್ರೈಮಾಸಿಕಕ್ಕಿಂತಲೂ ಕಡಿಮೆ, ಸುಮಾರು 1.5ಲಕ್ಷ ಕೋಟಿ ರೂ.ಗಳಷ್ಟು, ಅಂದರೆ 4%ದಷ್ಟು ಕಡಿಮೆ!

ಹೀಗಿದೆ ಜಿಡಿಪಿ ಬೆಳವಣಿಗೆಯ ಸಂಪೂರ್ಣ ಚಿತ್ರ!

ಮಂಜುಲ್, ಫಸ್ಟ್ ಪೋಸ್ಟ್

***

ಈ ವ್ಯಂಗ್ಯಚಿತ್ಕಾರರು ಇದಕ್ಕೊಂದು ಚೆನ್ನಾದ ಉದಾಹರಣೆ ಕೊಡುತ್ತಾರೆ.

ಪಾಕೆಟ್‍ಮನಿ 125ರೂ. ಕಮ್ಮಿಯಾಯಿತು ಎಂದಾಗ ‘ಪರಿಷ್ಕರಿಸಿ’ 100ರೂ.ಕೊಡುತ್ತಾನೆ.

ಅದು ಎರಡು ವರ್ಷಗಳ ನಂತರ 120 ಆಗುತ್ತದೆ; ಈಗಲೂ  125 ಆಗುವುದಿಲ್ಲ,

ಆದರೇನಂತೆ! ಎರಡು ವರ್ಷಗಳಲ್ಲಿ 20% ದಾಖಲೆ ಜಿಗಿತ!

 

ಸಂದೀಪ್ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

***

ಇದಕ್ಕೆ ಮೂರುದಿನಗಳ ಮೊದಲು ಹರ್ಯಾಣದ ಕರ್ನಾಲ್‍ನಲ್ಲಿ ಅಲ್ಲಿನ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠೀ ಪ್ರಹಾರದ ಸುದ್ದಿ ಬಂದಿತ್ತು. ಒಬ್ಬ ಪ್ರತಿಭಟನಾಕಾರರ ಸಾವೂ ಸಂಭವಿಸಿದೆ. ಅದರ ಹಿಂದಿನ ದಿನವಷ್ಟೇ ದೇಶದ ರಾಜಧಾನಿಯ ಗಡಿಗಳಲ್ಲಿ ಹೋರಾಟದ 9 ತಿಂಗಳು ಪೂರೈಸಿದ ರೈತ ಹೋರಾಟಗಾರರ ರಾಷ್ಟ್ರೀಯ ಸಮಾವೇಶ ಸಪ್ಟಂಬರ್ 25ರಂದು ಭಾರತ್‍ ಬಂದ್‍ಗೆ ಕರೆ ನೀಡಿತ್ತು.

ಪಿ.ಮಹಮ್ಮದ್, ವಾರ್ತಾಭಾರತಿ

***

ಲಾಠೀ ಪ್ರಹಾರದ ಆದೇಶ ನೀಡಿದ ಕರ್ನಾಲ್‍ ನ ಎಸ್‌ಡಿಎಂ ಆಯುಷ್ ಸಿನ್ಹಾರವರ ವೈರಲ್ ಆದ ವೀಡಿಯೋದಲ್ಲಿ: “ಎಲ್ಲರನ್ನೂ ಎತ್ತಿ-ಎತ್ತಿ ಹಿಂದಕ್ಕೆ ಹೊಡೆಯಿರಿ. … ನನ್ನ ಬಳಿ ಯಾವುದೇ ಮನುಷ್ಯ ದಾಟಿಕೊಂಡು ಬರಲು ಆಗಬಾರದು. ಏನಾದರೂ ಬಂದರೆ, ಅವನ ತಲೆ ಒಡೆದಿರಬೇಕು”ಎನ್ನುತ್ತಿರುವುದು ಕೇಳ ಬರುತ್ತದೆ.

“ಅವರ ತಲೆ ಒಡೆಯಿರಿ!”     ಸತೀಶ್‍ ಆಚಾರ್ಯ, ಫೇಸ್‍ಬುಕ್

***

ಈ ವೀಡಿಯೋ ನೋಡುವಾಗ ಈ ವ್ಯಂಗ್ಯಚಿತ್ರಕಾರರಿಗೆ ಮಾತ್ರವಲ್ಲ, ಇನ್ನೂ ಹಲವರಿಗೆ ಎರಡು ವಾರಗಳ ಹಿಂದೆಯಷ್ಟೇ ಕೆಂಪು ಕೋಟೆಯಲ್ಲಿ ಪ್ರಧಾನ ಮಂತ್ರಿಗಳು ಸಬ್‍ ಕಾ ಸಾಥ್‍…ಇತ್ಯಾದಿಗೆ ಹೊಸದಾಗಿ ಸೇರಿಸಿರುವ ‘ಸಬ್‍ ಕಾ ಪ್ರಯಾಸ್’ ಘೋಷಣೆ ನೆನಪಾಗಿದೆ.

“ಅಭಿನಂದನೆಗಳು, ಎಸ್‍ ಡಿ ಎಂ ಸಾಹೇಬ್ರೇ, ಪ್ರಧಾನಿಗಳ

‘ಎಲ್ಲರ ಪ್ರಯಾಸ’ ಪ್ರತಿಜ್ಞೆಯನ್ನುಶ್ರದ್ಧೆಯಿಂದ ಪಾಲಿಸಿದ್ದಕ್ಕೆ!”

ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

***

ಗಮನಾರ್ಹ ಸಂಗತಿಯೆಂದರೆ ಅದೇ ದಿನ ಪ್ರಧಾನ ಮಂತ್ರಿಗಳು ಪಕ್ಕದ ರಾಜ್ಯ ಪಂಜಾಬಿನ ಜಲಿಯನ್‍ ವಾಲಾ ಬಾಗ್‍ನಲ್ಲಿ 102 ವರ್ಷಗಳ ಹಿಂದೆ ಬ್ರಿಟಿಷ್‍ ವಸಾಹತುಶಾಹಿ ಆಳ್ವಿಕೆಯಲ್ಲಿ ನಡೆದ ಘೋರ ಹತ್ಯಾಕಾಂಡದ ಸ್ಮಾರಕದ ನವೀಕರಣದ ಉದ್ಘಾಟನೆ ನಡೆಸಿದರು.

ಇದು ನವೀಕರಣಕ್ಕಿಂತ ಹೆಚ್ಚಾಗಿ ‘ಡಿಸ್ನೀಕರಣ’ ಎಂದು ಹಲವರು, ಮುಖ್ಯವಾಗಿ ಇತಿಹಾಸಕಾರರು ಅಸಂತೋಷ ವ್ಯಕ್ತಪಡಿಸಿದ್ದಾರೆ. ಅಮೃತಸರದ ಗುರುನಾನಕ್‍ ದೇವ್‍ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಅಮನ್‍ ದೀಪ್‍ ಬಾಲ್ “ಹತ್ಯಾಕಾಂಡಗಳನ್ನು ನೆನಪಿಸಿಕೊಳ್ಳಬೇಕು, ಉತ್ಸವವಾಗಿ ಆಚರಿಸಬಾರದು” ಎಂದು ಟಿಪ್ಪಣಿ ಮಾಡಿದರೆ, ಭಗತ್‍ ಸಿಂಗ್‍ ಬಗ್ಗೆ ಬಹಳಷ್ಟು ಬರೆದಿರುವ  ಪ್ರೊ. ಚಮನ್‍ ಲಾಲ್ ಪಾರಂಪರಿಕ ಸ್ಥಳಗಳ ನವೀಕರಣವೆಂದರೆ ಅಲ್ಲಿರುವ ರಚನೆಗಳ ಬಾಳಿಕೆಯನ್ನು ಹೆಚ್ಚಿಸುವಂತಿರಬೇಕೇ ವಿನಹ ಅವುಗಳ ಚರ್ಯೆಯನ್ನು ಬದಲಿಸುವಂತದ್ದಾಗಿರಬಾರದು ಎಂದಿದ್ದಾರೆ.  ಈ ಘಟನೆಯ ಕುರಿತು ಸಂಶೋಧನೆ ಮಾಡಿ ಒಂದು ಪ್ರಸಿದ್ಧ ಕೃತಿಯನ್ನೇ ರಚಿಸಿರುವ ಇತಿಹಾಸಕಾರ  ಕಿಮ್ ವಾಗ್ಮರ್ “ಈ ಘಟನೆಯ ಕೊನೆಯ ಕುರುಹುಗಳನ್ನೂ ಅಳಿಸಿಹಾಕಿದಂತಾಗಿದೆ” ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಆದರೆ ಹರ್ಯಾಣದ ಮುಖ್ಯಮಂತ್ರಿಗಳು (ಮತ್ತು ಬಹುಶಃ ಕೇಂದ್ರ ಸರಕಾರ ಕೂಡ) ಇದಕ್ಕೆ ಏಕೆ ಇಷ್ಟೆಲ್ಲ ಕೂಗಾಟ ಎಂದು ಆಶ್ಚರ್ಯ ಪಡುತ್ತಿರುವಂತಿದೆ.

“ಜಲಿಯಾನ್ ವಾಲಾದ ಬಗ್ಗೆ ಕೂಗಾಡಬೇಡಿ…. ನಿಮಗೆ ಅದು ಇಷ್ಟವಿಲ್ಲವಾದರೆ

ನಾವು ಇನ್ನೊಂದು (ಜಲಿಯಾನ್‍ವಾಲಾ ಬಾಗ್) ಸೃಷ್ಟಿಸುತ್ತೇವೆ……”(ತಲೆಬುರುಡೆ ಒಡೆದು!)

ಮಂಜುಲ್, ಫಸ್ಟ್ ಪೋಸ್ಟ್

***

ಮುಖ್ಯಮಂತ್ರಿಗಳು  ತಮ್ಮ ಅಧಿಕಾರಿಯನ್ನು ಸಮರ್ಥಿಸಿಕೊಳ್ಳುತ್ತ , ಅವರು ಬಳಸಿದ ಮಾತು ಸರಿಯಿರಲಿಕ್ಕಿಲ್ಲ, ಆದರೆ ಕ್ರಮ ಸರಿಯಾಗಿತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ.

ಜಾಲಿಯಾನ್‍ ವಾಲಾ ಬಾಗ್ ಹತ್ಯಾಕಾಂಡ ನಡೆಸಿದ ಜನರಲ್‍ ಡಾಯರ್‍ ನ ನೆನಪಾಗುತ್ತಿದೆಯೇ?

“ವಾಹ್, ನಮ್ಮ ಉತ್ತರಾಧಿಕಾರಿಗಳು

ನಮ್ಮ ಬೂಟುಗಳಲ್ಲಿ ಚೆನ್ನಾಗಿ ಮಿಂಚುತ್ತಿದ್ದಾರೆ”

ರಾಜೇಂದ್ರ ಧೋಪಡ್ಕರ್, ಫೇಸ್‍ ಬುಕ್

***

ಇವೆಲ್ಲದರ ನಡುವೆ ವಿಶ್ಲೇಷಕರಂತೆ, ನಮ್ಮ ವ್ಯಂಗ್ಯಚಿತ್ರಕಾರರೂ ನೋಟೀಕರಣದ ಸರಕಾರದ ಗೀಳನ್ನು ಮರೆತಿಲ್ಲ-ಒಂದು  ಸ್ಯಾಂಪಲ್  ಇಲ್ಲಿದೆ:

ನಿಮ್ಮ ವೇಷಭೂಷಣಗಳ ಸಂಗ್ರಹವನ್ನು ನೋಟೀಕರಿಸಿದರೆ ಹೇಗೆ?  – ಸುರೇಂದ್ರನ್, ಟ್ವಿಟರ್

 

 

 

 

 

 

 

 

 

 

Donate Janashakthi Media

Leave a Reply

Your email address will not be published. Required fields are marked *