ಶೇಖ್ ಹಸೀನಾ ಅವಾನಿ ಲೀಗ್ ಪಕ್ಷದ 29 ಕಾರ್ಯಕರ್ತರ ಹತ್ಯೆ!

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾನಿ ಲೀಗ್ ಪಕ್ಷದ ಕಾರ್ಯಕರ್ತರು ಹಾಗೂ ಅವರ ಕುಟುಂಬದವರು ಸುಮಾರು 29 ಶವಗಳು ಪತ್ತೆಯಾಗಿದೆ. ದೇಶಾದ್ಯಂತ ಅವಾನಿ ಲೀಗ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅವಾನಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ.

76 ವರ್ಷದ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಬೆನ್ನಲ್ಲೇ ಹಿಂಸಾಚಾರ ಏಕಮುಖವಾಗಿದ್ದು, ಅವಾನಿ ಪಕ್ಷವನ್ನು ಗುರಿಯಾಗಿಸಿ ದಾಳಿ ನಡೆಯುತ್ತಿವೆ.

ಇದನ್ನೂ ಓದಿ :ಶೇಖ್ ಹಸೀನಾಗೆ ಸಂಕಷ್ಟ: ರಾಜಾಶ್ರಯ ನೀಡಲು ಒಪ್ಪದ ಬ್ರಿಟನ್, ವೀಸಾ ರದ್ದುಗೊಳಿಸಿದ ಅಮೆರಿಕ!

ಸತ್ಕಿರಾ ಪ್ರದೇಶವೊಂದರಲ್ಲೇ ಅವಾನಿ ಪಕ್ಷದ 10 ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ 5 ಮಂದಿ ಅಪ್ರಾಪ್ತರು ಎಂದು ಹೇಳಲಾಗಿದೆ. ಅಲ್ಲದೇ ಪಕ್ಷದ ಮುಖಂಡರ ಮನೆ ಹಾಗೂ ಅಂಗಡಿಗಳ ಮೇಲೆ ದಾಳಿ ಮಾಡಿ ಹಾನಿ ಮಾಡಲಾಗಿದ್ದು, ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ.

ಕುಮಿಲಾ ಪ್ರದೇಶದಲ್ಲಿ ಸುಮಾರು 11 ಮಂದಿಯ ಮೇಲೆ ಮುಗಿಬಿದ್ದ ಗುಂಪು ಹತ್ಯೆ ಮಾಡಿದೆ. ಮಾಜಿ ಕೌನ್ಸಿಲರ್ ಮೊಹಮದ್ ಶಾಹ ಅಲಮ್ ಅವರ ಮೂರಂತಸ್ತಿನ ಕಟ್ಟಡಕ್ಕೆ ನುಗ್ಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಒಂದೇ ಕಟ್ಟಡದಲ್ಲಿ 6 ಮಂದಿಯನ್ನು ಹತ್ಯೆ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *