ಜಗತ್ತಿನಾದ್ಯಂತ ಉದ್ಯೋಗ ಕಡಿತದ ಪರ್ವ ಮುಂದುವರಿದ್ದರಿಂದ ಆರ್ಥಿಕ ಹಿಂಜರಿತದ ಭೀತಿಗೆ ಸಿಲುಕಿದ ಭಾರತೀಯ ಷೇರು ಮಾರುಕಟ್ಟೆ ಪ್ರಪಾತಕ್ಕೆ ಕುಸಿದಿದೆ.
ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕುಸಿತಕ್ಕೆ ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಸಾಕ್ಷಿಯಾಯಿತು. ಇದರಿಂದ ಹೂಡಿಕೆದಾರರು ಲಕ್ಷಾಂತರ ಕೋಟಿ ರೂ.ನಷ್ಟ ಅನುಭವಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಷೇರು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 2600 ಅಂಕಗಳಷ್ಟು ಕುಸಿತ ಕಂಡಿದೆ. 80 ಸಾವಿರ ಗಡಿ ದಾಟಿದ್ದ ಸೂಚ್ಯಂಕ 78,288ಕ್ಕೆ ಕುಸಿತ ಕಂಡಿದೆ. ನಿಷ್ಟಿ 463.20 ಅಂಕ ಅಂಕ ಕುಸಿದಿದ್ದು, 24.254.50ಕ್ಕೆ ಬಂದು ನಿಂತಿದೆ.
ಷೇರು ಮಾರುಕಟ್ಟೆ ಕಳೆದ 14 ವರ್ಷಗಳಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿತ ಅನುಭವಿಸಿದೆ. ಅಮೆರಿಕದ ಟೆಕ್ ಕಂಪನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತದ ಘೋಷಣೆ ಮಾಡಿವೆ. ಅದರಲ್ಲೂ ಚಿಪ್ ತಯಾರಿಕಾ ಕಂಪನಿ 18 ಸಾವಿರ ಉದ್ಯೋಗಿಗಳ ಕಡಿತ ಘೋಷಿಸಿದೆ.
ಆರ್ಥಿಕ ಹಿಂಜರಿತದ ಆರಂಭದ ಸೂಚನೆಯನ್ನು ಟೆಕ್ ಕಂಪನಿಗಳು ನೀಡುತ್ತಿರುವುದರಿಂದ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬ ಸುದ್ದಿಗಳು ಭಾರತೀಯ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿವೆ ಎಂದು ಹೇಳಲಾಗಿದೆ.