ಕಂಗನಾ ಸುಳ್ಳು ಬಯಲು : ‘ಮೈತ್ರಿ ಕಾರಣಕ್ಕೆ ಶಿವಸೇನೆಗೆ ಮತ ಕೊಡಬೇಕಾಯಿತು’

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಶಿವಸೇನೆಗೆ ಮತ ಚಲಾಯಿಸುವಂತೆ ಒತ್ತಡ ಹೇರಲಾಯಿತು ಎಂಬ ನಟಿ ಕಂಗನಾ ರಾಣಾವತ್ ಆರೋಪ ಸುಳ್ಳು ಎಂಬುದು ದೃಢಪಟ್ಟಿದೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿದೆ.

ಇತ್ತೀಚೆಗೆ ಟೈಮ್ಸ್ ನೌ ಸುದ್ದಿವಾಹಿನಿ ರಾಜಕೀಯ ಸಂಪಾದಕಿ ನಾವಿಕಾ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ನಟಿ ಕಂಗನಾ ರಾಣಾವತ್ ಬಿಜೆಪಿಯ ಜೊತೆಗಿನ ಮೈತ್ರಿ ಕಾರಣಕ್ಕೆ ಶಿವಸೇನೆಗೆ ಒಲ್ಲದ ಮನಸ್ಸಿನಿಂದ ಮತ ಚಲಾಯಿಸಬೇಕಾಯಿತು ಎಂದು ಹೇಳಿದ್ದರು.

ಬಿಜೆಪಿ ಮತ್ತು ಶಿವಸೇನೆ ಎನ್‌ಡಿಎ ಒಕ್ಕೂಟದ ಭಾಗವಾಗಿದ್ದವು. ಹಾಗಾಗಿ ಬಿಜೆಪಿ ಕಂಗನಾ ಕ್ಷೇತ್ರವನ್ನು ಶಿವಸೇನೆಗೆ ಬಿಟ್ಟುಕೊಟ್ಟಿತ್ತು. ಬಿಜೆಪಿಯ ಕಾರಣಕ್ಕೆ ಶಿವಸೇನೆಗೆ ಮತ ಚಲಾಯಿಸಿದೆ ಎಂದು ಸಂದರ್ಶನದಲ್ಲಿ ಹೇಳಿದ್ದರು.

ಆದರೆ ಕಳೆದ ಎರಡು ಲೋಕಸಭೆ ಮತ್ತು ಎರಡು ವಿಧಾನಸಭಾ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ ಕಂಗನಾ ರಾಣಾವತ್ ಅವರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದ್ದರಿಂದ ಅವರು ಶಿವಸೇನೆಗೆ ಮತ ಚಲಾಯಿಸಲು ಸಾಧ್ಯವಿಲ್ಲ. ಮತ ಚಲಾಯಿಸಿಲ್ಲ. ಕಂಗನಾ ಆರೋಪ ಸುಳ್ಳು ಎಂದು ಇಂಡಿಯಾ ಟುಡೆ ಉಪಸಂಪಾದಕ ಕಮಲೇಶ್ ಸುತಾರ್ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
“ಮಹಾರಾಷ್ಟç ಚುನಾವಣಾ ಆಯೋಗದ ಪ್ರಕಾರ ಕಂಗನಾ ಬಾಂದ್ರಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಆಶಿಶ್ ಶೆಲಾರ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರು. ಲೋಕಸಬಾ ಚುನಾವಣೆ ಯಲ್ಲೂ ಭಾರತೀಯ ಜನತಾ ಪಕ್ಷದ ಪೂನಂ ಮಹಾಜನ್ ಸ್ಪರ್ಧಿಸಿ ಗೆಲುವು ಕಂಡಿದ್ದರು’ ಎಂದು ಟ್ವೀಟ್ ಮಾಡಿದ್ದರು.

ಕಮಲೇಶ್ ಸುತಾರ್ ಟ್ವೀಟ್‌ನಿಂದ ಕೆರಳಿರುವ ಕಂಗನಾ ‘ಕಮಲೇಶ್ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಾಗಿ ಕಾನೂನು ನೋಟಿಸ್ ಕಳಿಸುತ್ತೇನೆ. ನಾನು ಲೋಕಸಭಾ ಚುನಾವಣೆಯ ಕುರಿತು ಸ್ಪಷ್ಟಮಾತುಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಆದರೆ ಕಮಲೇಶ್ ಉದ್ದೇಶಪೂರಕವಾಗಿ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡುತ್ತಿದ್ದಾರೆ ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ. ಆದರೆ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಇದ್ದರು ಎಂಬುದು ವಾಸ್ತವ!

ಪತ್ರಕರ್ತನಿಗೆ ಕಂಗನಾ ಅವರ ಬೆದರಿಕೆಯನ್ನು ಖಂಡಿಸಿ ಮುಂಬಯಿ ಪ್ರೆಸ್ ಕ್ಲಬ್ ಟ್ವೀಟ್ ಮಾಡಿದ ಮೇಲೆ, ಅವರು ತಮ್ಮ ಟ್ವೀಟ್ ಅಳಿಸಿದ್ದಾರೆ!

 

Donate Janashakthi Media

Leave a Reply

Your email address will not be published. Required fields are marked *