“ಸದ್ಯಕ್ಕೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ” ಗೌರವಧನ ಹೆಚ್ಚಳ ಇಲ್ಲ

ಬೆಂಗಳೂರು: ಗೌರವ ಧನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಕಿಯರ ಮಾಸಿಕ ಗೌರವಧನವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಆಚಾರ್ ಹಾಲಪ್ಪ ಹೇಳಿದ್ದಾರೆ.

ಇದನ್ನು ಓದಿ: ಪೌಷ್ಠಿಕ ಆಹಾರದ ಬದಲಿಗೆ ನಗದು ವರ್ಗಾವಣೆ: ಅಂಗನವಾಡಿ ನೌಕರರ ರಾಜ್ಯವ್ಯಾಪಿ ಧರಣಿ

ಸದ್ಯದ ಪರಿಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಕಿಯರ ಮಾಸಿಕ ಗೌರವಧನವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನಸಭೆಯಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನವಾಗಿ ನೀಡುತ್ತಿದ್ದೇವೆ. ಗೌರವಧನ ಜೀವನೋಪಾಯಕ್ಕೆ ಸಾಕಾಗುವುದಿಲ್ಲ ಎಂದರು.

1-11-2009ರಿಂದ ಅನ್ವಯವಾಗುವಂತೆ ಅಂಗನವಾಡಿ ಸಹಾಯಕಿಯರಿಗೆ 250 ರೂ. ಗೌರವಧನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇದನ್ನುಪರಿಗಣಿಸಲಿಸಲಿದೆ ಎಂದು ಆಶ್ವಾಸನೆ ಕೊಟ್ಟರು.

ಇದನ್ನೂ ಓದಿ : ನೌಕರಿ ಹೆಸರಲ್ಲಿ ಮೋಸ – ವಂಚಕರ ಕೈಗೆ ಬೇಡಿ ಹಾಕುವವರು ಯಾರು?

ಅಂಗನವಾಡಿಯವರಿಗೆ ದ್ರೋಹ ಬಗೆದ ಸರ್ಕಾರ:  ಅಂಗನವಾಡಿ ನೌಕರರಿಗೆ ರಾಜ್ಯ ಸರ್ಕಾರ ಗೌರವ ಧನ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರ ದಲ್ಲಿ ಇಲ್ಲ ಎಂಬ ಇಲಾಖೆಯ ಸಚಿವರಾದ ಮಾನ್ಯ ಹಾಲಪ್ಪ ಆಚಾರ್ ರವರ ಹೇಳಿಕೆ ಖಂಡನೀಯ ವಾದದ್ದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಿಳಿಸಿದೆ.

ಅಂಗನವಾಡಿ ನೌಕರರಿಗೆ 2017ರಿಂದ ಒಂದು ನಯಾ ಪೈಸೆ ಗೌರವ ಧನ ರಾಜ್ಯ ದಲ್ಲಿ ಈ ಸರ್ಕಾರ ಬಂದ ನಂತರ ನೀಡಿಲ್ಲ.ಅಂಗನವಾಡಿ ನೌಕರರಿಗೆ ಗೌರವ ದನ ಹೆಚ್ಚಳ.ಆರ್ಥಿಕ ಸವಲತ್ತು ನೀಡಬೇಕಾದೆ ಮಾತ್ರ ಈ ಸರ್ಕಾರ ಕ್ಕೆ ಆರ್ಥಿಕ ಹೊರೆ.ರಾಜ್ಯ ದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ ಫ್ರತಿ ನಿತ್ಯ ಬೆಲೆ ಏರಿಕೆ ನಿರಂತರ ವಾಗಿ ಮಾಡುತ್ತಿರುವ ಸರ್ಕಾರ ಇವರಿಗೆ ಕೊಡುವ ಹತ್ತು ಸಾವಿರ ರೂನಲ್ಲಿ ಜೀವನ ನಿರ್ವಹಣೆ ಸಾದ್ಯವೇ ಎಂದು ಆಲೋಚನೆ ಮಾಡಬೇಕಿದೆ ಎಂದು ರಾಜ್ಯಾಧ್ಯಕ್ಷರಾದ ಎಸ್. ವರಲಕ್ಷ್ಮಿ ಪ್ರಶ್ನಿಸಿದ್ದಾರೆ.

45 ವರ್ಷಗಳಿಂದ ಈ ಸರ್ಕಾರ ಗಳು ಜಾರಿಗೆ ತಂದ ಎಲ್ಲಾ ಯೋಜನೆ ಗಳನ್ನು ಜನರ ಮನೆ ಬಾಗಿಲಿಗೆ ತಲಪಿಸಿ ಸರ್ಕಾರ ಯಾವುದೇ ಕೆಲಸ ಹೇಳಿದರೂ ಹಗಲಿರುಳು ಎನ್ನದೆ ದುಡಿಯುತ್ತಿರುವ ಕೋವಿಡ್ ವಾರಿಯರ್ಸ್‌ ಆಗಿ ಪ್ರಾಣವನ್ನು ಲೆಕ್ಕಿಸದೆ ಸೋಂಕು ತಡೆಗಟ್ಟಲು ಪಣ ತೊಟ್ಟು ನಿಂತು ರಾಜ್ಯ ಸರ್ಕಾರ ದ ಘನತೆ ಎತ್ತಿ ಹಿಡಿದ ಮಾತೆಯರಿಗೆ ಮಾಡಿದ ಮಹಾನ್ ದ್ರೋಹ ಇದಾಗಿದೆ ಕಳೆದ ಬಜೆಟ್ ನಲ್ಲಿ ಇಲಾಖೆಯ ಶಿಫಾರಸ್ಸು ಜಾರಿ ಮಾಡಲು ಮುಖ್ಯ ಮಂತ್ರಿ ಯೊಂದಿಗೆ ಮಾತನಾಡುವುದಾಗಿ ಹಿಂದಿನ ಸಚಿವರು.ಹಾಲಿ ಸಚಿವರು ನೀಡಿದ ಬರವಸೆ ಹುಸಿಯಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದ ಆರೋಪಿಸಿದ್ದಾರೆ.

ಅಧಿವೇಶನದಲ್ಲಿ ಸೇವಾಜೇಷ್ಠತೆ ಆಧಾರದಲ್ಲಿ ಗೌರವ ಧನ ನೀಡುವ ಶಿಫಾರಸು ಜಾರಿ ಮಾಡಲು ಅಂಗನವಾಡಿ ನೌಕರರ ಬೇಡಿಕೆ ಬಗ್ಗೆ ಮಾತನಾಡಿರಿ, ಎಂದು ಒತ್ತಾಯಿಸಿ ರಾಜ್ಯದ ಎಲ್ಲಾ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ವಿನಂತಿಸಲಾಗಿತ್ತು ಆದರೆ ಯಾರು ಕೂಡ ಚಕಾರ ವೆತ್ತದೆ ಇರುವುದು ದುಡಿಯುವ ಜನತೆಯ ಬಗ್ಗೆ ಸರ್ಕಾರಕ್ಕೆ ಇರುವ ಅಲಕ್ಷ್ಯಕ್ಕೆ ಕನ್ನಡಿ ಹಿಡಿದಂತೆ ಇದೆ. ಸಚಿವರು ಅಂಗನವಾಡಿ ನೌಕರರ ಸೇವೆಯನ್ನು ಪರಿಗಣಿಸಿ ಅವರ ಬೇಡಿಕೆ ಈಡೇರಿಸಲು ಬೇಕಾದ 339.48 ಕೋಟಿ ಅನುದಾನ ಬಿಡುಗಡೆ ಮಾಡಿ ಅಂಗನವಾಡಿ ಮಾತೆಯರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ಒತ್ತಾಯಿಸಲಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ.

Donate Janashakthi Media

One thought on ““ಸದ್ಯಕ್ಕೆ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ” ಗೌರವಧನ ಹೆಚ್ಚಳ ಇಲ್ಲ

Leave a Reply

Your email address will not be published. Required fields are marked *