ಫೊಟೊ ಮತ್ತು ಕಿರುವಿಡಿಯೊ ಸ್ಪರ್ಧೆ
ಕೊರೊನಾ ಕಾಲವನ್ನು ಸೆರೆಹಿಡಿದ ಫೊಟೊ ಕಿರುವಿಡಿಯೊ
ಕೊನೆಯ ದಿನಾಂಕ 20 ಸೆಪ್ಟೆಂಬರ್ 2020
ಮೊದಲನೆ ಬಹುಮಾನ : ರೂ.5000 ಎರಡನೆಯ ಬಹುಮಾನ : ರೂ.3000 ಮೂರನೆ ಬಹುಮಾನ : ರೂ.2000
ಸ್ಪರ್ಧೆಯ ನಿಯಮಗಳು
* ಫೊಟೊ ಮತ್ತು ಕಿರುವಿಡಿಯೊಗಳು ಸ್ವತಂತ್ರ ರಚನೆಗಳಾಗಿರಬೇಕು. ಒಬ್ಬರು ತಲಾ ಒಂದು ಫೊಟೊ ಮತ್ತು/ಅಥವಾ ಕಿರುವಿಡಿಯೊ ಮಾತ್ರ ಕಳಿಸಬಹುದು
* ಕಿರುವಿಡಿಯೊ 3 ನಿಮಿಷ ಕಾಲಮಿತಿಯನ್ನು ಮೀರಬಾರದು, 720ಠಿ ಅಥವಾ 1080p resolution ನಲ್ಲಿ ಮತ್ತು .mp4 format ನಲ್ಲಿ ಇರಬೇಕು
* ಫೊಟೊ .jpeg format ನಲ್ಲಿರಬೇಕು. filesize 5 MB ಮಿತಿಯನ್ನು ಮೀರಬಾರದು. 300 dpi resolution ಮತ್ತು ಉದ್ದವಾದ ಬದಿ ಗರಿಷ್ಠ 1920 pixel ಸೈಜಿನ ವರೆಗೆ ಇರಬಹುದು.
* ಫೊಟೊ ಮತ್ತು ಕಿರುವಿಡಿಯೊಗಳು ಎಲ್ಲೂ ಪ್ರಕಟಿತ ಅಥವಾ ಪ್ರದರ್ಶಿತವಾಗಿರಬಾರದು
* ಪ್ರತ್ಯೇಕ ಫೈಲಿನಲ್ಲಿ ಹೆಸರು ಅಂಚೆ ವಿಳಾಸ, ಫೋನ್ ನಂಬರ್, ಈ ಮೇಲ್ ವಿಳಾಸ ಒದಗಿಸಬೇಕು. ಇತ್ತೀಚೆಗಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೂರು ಪದ ಮೀರದಂತೆ ಕಿರು ಪರಿಚಯವನ್ನು ಕಳುಹಿಸಬೇಕು.
* ಫೊಟೊ ಸ್ಪರ್ಧೆಗೆ ಫೊಟೊ ಮತ್ತು ಕಿರುಪರಿಚಯವನ್ನು [email protected] ಗೆ ಪ್ರತ್ಯೇಕ ಫೈಲುಗಳಲ್ಲಿ ಈ ಮೈಲ್ ಅಥವಾ WeTransfer link ಮೂಲಕ ಮಾತ್ರ ಕಳಿಸಬೇಕು
* ಕಿರುವಿಡಿಯೊ ಸ್ಪರ್ಧೆಗೆ ಕಿರುವಿಡಿಯೊ ಮತ್ತು ಕಿರುಪರಿಚಯವನ್ನು video@janashakthimedia.com ಗೆ ಪ್ರತ್ಯೇಕ ಫೈಲುಗಳಲ್ಲಿ ಈ ಮೈಲ್ ಅಥವಾ WeTransfer link ಮೂಲಕ ಮಾತ್ರ ಕಳಿಸಬೇಕು
* ಜನಶಕ್ತಿ ಮಿಡಿಯಾದ ಸಿಬ್ಬಂದಿ ಹಾಗೂ ಕುಟುಂಬದವರು ಭಾಗವಹಿಸುವಂತಿಲ್ಲ.
* ಸ್ಪರ್ಧೆಗೆ ಕಳುಹಿಸಿದ ರಚನೆಗಳನ್ನು ಹಿಂದಿರುಗಿಸುವುದಿಲ್ಲ.
* ಬಹುಮಾನಿತ ಫೊಟೊ ಮತ್ತು ಕಿರುವಿಡಿಯೊಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕನ್ನು ಜನಶಕ್ತಿ ಮೀಡಿಯಾ ಹೊಂದಿರುತದೆ.
* ಸಂಪಾದಕರ ತೀರ್ಮಾನವೇ ಅಂತಿಮ
* ಸ್ಪರ್ಧೆಗೆ ರಚನೆಗಳನ್ನು ಕಳಿಸಲು ಕೊನೆಯ ದಿನಾಂಕ 20 ಸೆಪ್ಟೆಂಬರ್ 2020. ನಂತರ ಬಂದವುಗಳನ್ನು ಮತ್ತು ಮೇಲೆ ಹೇಳಿದ ನಿಯಮಗಳನ್ನು ಉಲ್ಲಂಘಿಸುವ ಫೊಟೊ ಮತ್ತು ಕಿರುವಿಡಿಯೊಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.