ಪೌರಕಾರ್ಮಿಕನ  ಕೊಲೆ: ಆರೋಪಿಗಳಿಗೆ ಕಠಿಣ  ಶಿಕ್ಷೆ ಅಗ್ರಹ

ತುಮಕೂರು: ಮೇ 05 ರಂದು  ಮುಂಬೈನ ಉತ್ತರ ಉಪನಗರದಲ್ಲಿರುವ ಭಾಯಂದರ್‌ನಲ್ಲಿ ,ಮೂವತ್ತು ವರ್ಷದ  ಪೌರ ಕಾರ್ಮಿಕ, ಕೃಷ್ಣ ಪಲಾರಾಮ್ ತುಸಮದ್ ಎಂಬಾತನನ್ನು ಹತ್ಯಮಾಡಿರುವ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಪೌರ  ಕಾರ್ಮಿಕರ ಸಂಘ, ನೀರು  ಸರಬರಾಜು ಕಾರ್ಮಿಕರ ಸಂಘ  ಹಾಗು  ಕಸದ  ಆಟೋ ಚಾಲಕರು- ಸಹಾಯಕ್ ಸಂಘಗಳು  ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾದ್ಯಕ್ಷ ಸೈಯದ್ ಮುಜೀಬ್ ಮಾತನಾಡಿ,  ಕೃಷ್ಣ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು. ಕೃಷ್ಣನನ್ನು ಹತ್ಯಮಾಡುವ ಸಂದರ್ಭದಲ್ಲಿ ಅವನ ಕೈಕಾಲುಗಳನ್ನು ಕಟ್ಟಿ ಕಬ್ಬಿಣದ ರಾಡ್‌ಗಳಿಂದ ಅಮಾನುಷವಾಗಿ ಥಳಿಸಲಾಗಿದೆ ಎಂದು  ತಿಳಿದು ಬಂದಿದೆ,  ಹೀಗಾದರು ಸ್ಥಳೀಯ ಪೊಲೀಸರು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನು ಎಫ್. ಐ.ಆರ್ ನಲ್ಲಿ  ಸೇರಿಸಿಲ್ಲ. ಸಂತ್ರಸ್ತೆಯ ಕುಟುಂಬಕ್ಕೆ ಯಾವುದೇ ಸರ್ಕಾರಿ ಅಧಿಕಾರಿ ಭೇಟಿ ನೀಡಲಿಲ್ಲ ಅಥವಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ!    ಮಹಾರಾಷ್ಟ್ರ ಸರ್ಕಾರ  ಈ ಸಾವಿನ ಬಗ್ಗೆ ತಾಳಿರುವ ಧೋರಣೆ ಖಂಡನಾರ್ಹ, ಯು.ಜಿ.ಡಿ ಯಲ್ಲಿ  ಇಳಿಸಿ ಕೊಲ್ಲುತ್ತಿದ್ದುದು ಸಾಕಾಗಿಲ್ಲ  ನೇರವಾಗಿ  ಕೊಲೆ ಮಾಡಲು ಅರಂಭಿಸಿರುವುದ ಅನಾಗರಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ತಕ್ಷಣ  25 ಲಕ್ಷ ಪರಿಹಾರ  ಹಾಗು  ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು  ಒತ್ತಾಯಿಸಿವೆ.  ಮತ್ತು ಈ ಪ್ರಕರಣದಲ್ಲಿ ಎಸ್‌ ಟಸಿ/ಎಸ್‌ ಟಿ (ದೌರ್ಜನ್ಯ ತಡೆ) ಕಾಯಿದೆಯ ನಿಬಂಧನೆಗಳನ್ನು ಸೇರಿಸಿ. ಹಾಗೂ ಸಮರ್ಥ, ದೋಷರಹಿತ ಮತ್ತು ತ್ವರಿತ ಪೊಲೀಸ್ ತನಿಖೆಯನ್ನು ಖಚಿತಪಡಿಸಿಕೊಳ್ಳಿ. ವಿಚಾರಣೆಯನ್ನು ತ್ವರಿತವಾಗಿ ಟ್ರ‍್ಯಾಕ್ ಮಾಡಿ ಮತ್ತು ಎಲ್ಲಾ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಿ. ಮತ್ತು ಬಲಿಪಶುವಿನ ಅಸಹಾಯಕ ಕುಟುಂಬಕ್ಕೆ ತಕ್ಷಣದ ಆರ್ಥಿಕ ಪರಿಹಾರವನ್ನು ಒದಗಿಸಿ ಬೇಕೆಂದು  ಪ್ರತಿಭಟನಾಕಾರರು  ಅಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ  ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ, ರಾಜ್ಯ  ಖಜಾಂಚಿ ಸಿ. ವೆಂಕಟೇಶ್, ಪೌರ ಕಾರ್ಮಿಕರ ಸಂಘ ಸಹ ಕಾರ್ಯಧರ್ಶಿ  ನಾಗರಾಜು, ನೀರು ಸರಬರಾಜು ನೌಕರರ ಮುಖಂಡ ಮಂಜುನಾಥ್, ಕಸದ ಅಟೋ ಚಾಲಕರ ಸಂಘ ಸಾಧಿಕ್ ಪಾಷ, ಶ್ರೀನಿವಾಸ್   ಮಾತನಾಡಿದರು, ಹೋರಾಟದ್ದಲಿ ಸಿಐಟಯುನ  ಲಕ್ಷ್ಮಿ ಕಾಂತ ಇದ್ದರು ಪ್ರತಿಭಟನೆಯಲ್ಲಿ  ನೂರಾರು   ಮುನಿಸಿಪಲ್  ಕಾರ್ಮಿಕರು  ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *