ದೇವನಹಳ್ಳಿ | ರ‍್ಯಾಗ್‌ ಮಾಡಿದ ಆರೋಪದ ಹಿನ್ನಲೇ 23 ವಿದ್ಯಾರ್ಥಿಗಳ ಬಂಧನ

ದೇವನಹಳ್ಳಿ: ರ‍್ಯಾಗ್‌ ಮಾಡಿದ ಆರೋಪದ ಹಿನ್ನಲೇ ನಗರದ  ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಥಮ ವರ್ಷದ 23 ಹಿರಿಯ ವಿದ್ಯಾರ್ಥಿಗಳನ್ನು ದೇವನಹಳ್ಳಿ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ಆಧರಿಸಿ ಬಿಲಾಲ್‌, ಝಿರಿಲ್‌ ಮತ್ತು ಮಿಶಾಲ್‌ ಎಂಬ ಮೂವರು ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಬೆಳಗಾವಿ| ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸೆತ್ತು ಮಹಿಳೆ ಆತ್ಮಹತ್ಯೆ

ಪುಸ್ತಕಗಳನ್ನು ಹಿಡಿದು ನಿಲ್ಲುವಂತೆ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರೆಂದು ಕಿರಿಯ ವಿದ್ಯಾರ್ಥಿಗಳು ದೂರಿನಲ್ಲಿ ಆರೋಪಿಸಿದ್ದಾರೆ. ದೂರು ದಾಖಲಾಗುತ್ತಲೇ ತಲೆ ಮರೆಸಿಕೊಂಡಿರುವ ಉಳಿದ ವಿದ್ಯಾರ್ಥಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಮದ್ಯ, ಸಿಗರೇಟ್ ತರಲು ತಮ್ಮನ್ನು ಬಳಸಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.

ರ‍್ಯಾಗಿಂಗ್‌ ಕುರಿತು ವಿದ್ಯಾರ್ಥಿಗಳು ಕಾಲೇಜು ಆಡಳಿತಕ್ಕೆ ದೂರು ನೀಡಿದ್ದರು. ಈ ಬಗ್ಗೆ ಹಿರಿಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಕಾಲೇಜಿನ ಆಡಳಿತ ವಿಭಾಗದ ಮುಖ್ಯಸ್ಥ ಮಿಥುನ್‌ ಮಾಧವನ್ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಕಿರಿಯ ವಿದ್ಯಾರ್ಥಿಗಳ ಮೇಲೂ ಕಬ್ಬಿಣದ ಸರಳು, ಕಲ್ಲು ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ನೋಡಿ : “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media

Donate Janashakthi Media

Leave a Reply

Your email address will not be published. Required fields are marked *