ಬೆಂಗಳೂರು: ಕರ್ನಾಟಕದಲ್ಲಿ ಇಂದು ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, 14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಇದುವರೆಗೂ ರಾಜ್ಯದ 14 ಕ್ಷೇತ್ರಗಳಲ್ಲಿ ಶೇ.22.34ರಷ್ಟು ವೋಟಿಂಗ್ ಆಗಿದೆ.
ಬೆಳಗ್ಗೆ 11 ಗಂಟೆಯ ವೇಳೆಗೆ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಮತದಾನ ಆಗಿದ್ದು, ಇದುವರೆಗೂ 30.98ರಷ್ಟು ವೋಟಿಂಗ್ ಆಗಿದೆ. ಕನಿಷ್ಠ ಪ್ರಮಾಣದ ಮತದಾನ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಆಗಿದ್ದು, ಇದೂವರೆಗೂ ಶೇ.19.21ರಷ್ಟು ಮತದಾನವಾಗಿದೆ. ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಶೇ.22.34ರಷ್ಟು ಮತದಾನ ಆಗಿದೆ.
ಇದನ್ನು ಓದಿ : ಹಾಸನ ಪೆನ್ ಡ್ರೈವ್ ಪ್ರಕರಣ ವಿಚಾರಣೆಗೆ ಪೊಲೀಸ್ ತಂಡ ರಚಿಸುವಂತೆ ಸಿಎಂ ಸಿದ್ಧರಾಮಯ್ಯಗೆ ಪತ್ರ; ರಾಜ್ಯ ಮಹಿಳಾ ಆಯೋಗ
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
- ಉಡುಪಿ-ಚಿಕ್ಕಮಗಳೂರು ಶೇ.29.03
- ಹಾಸನ -ಶೇ.22.03
- ದಕ್ಷಿಣ ಕನ್ನಡ – ಶೇ.30.98
- ಚಿತ್ರದುರ್ಗ – ಶೇ.21.75
- ತುಮಕೂರು- 23.32
- ಮಂಡ್ಯ- ಶೇ.21.24
- ಮೈಸೂರು – ಶೇ.25.09
- ಚಾಮರಾಜನಗರ- ಶೇ.22.81
- ಬೆಂಗಳೂರು ಗ್ರಾಮಾಂತರ- ಶೇ.20.35
- ಬೆಂಗಳೂರು ಉತ್ತರ – ಶೇ.19.78
- ಬೆಂಗಳೂರು ಕೇಂದ್ರ -ಶೇ. 19.21
- ಬೆಂಗಳೂರು ದಕ್ಷಿಣ- ಶೇ.19.81
- ಚಿಕ್ಕಬಳ್ಳಾಪುರ- ಶೇ.21.92
- ಕೋಲಾರ – ಶೇ.20.76
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 2,88,08,182 ಮತದಾರರು ಶುಕ್ರವಾರ ವೋಟಿಂಗ್‌ಗೆ ಅರ್ಹರಾಗಿದ್ದು, ಅದರಲ್ಲಿ ಮೊದಲ ಬಾರಿ ಮತ ಚಲಾಯಿಸುವ ಯುವ ಮತದಾರರು 5,99,444 ಮಂದಿ ಇದ್ದಾರೆ. 14 ಲೋಕಸಭಾ ಕ್ಷೇತ್ರಗಳ ಪೈಕಿ ಕೋಲಾರ, ಚಾಮರಾಜನಗರ ಹಾಗೂ ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರಗಳಾಗಿವೆ.
ಇದನ್ನು ನೋಡಿ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ : ಜಿದ್ದಾ ಜಿದ್ದಿಕಣ, ಕ್ಷೀಣಗೊಂಡ ಜೆಡಿಎಸ್ ಪ್ರಾಬಲ್ಯ Janashakthi Media