ಗ್ಯಾಂಗ್ಟಕ್: ತೀಸ್ತಾ ನದಿ ಪ್ರವಾಹದಲ್ಲಿ ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ಏಳು ಯೋಧರ ಮೃತದೇಹಗಳು ದೊರಕಿವೆ. ಶುಕ್ರವಾರ ಬೆಳಗ್ಗಿನವರೆಗೆ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ 118 ಜನ ಪತ್ತೆಯಾಗಿಲ್ಲ.
ನಾಪತ್ತೆಯಾಗಿದ್ದ 23 ಸೇನಾ ಸಿಬ್ಬಂದಿ ಪೈಕಿ ಏಳು ಮೃತದೇಹಗಳು ದೊರಕಿವೆ. ಒಬ್ಬರನ್ನು ರಕ್ಷಿಸಲಾಗಿದೆ. ಇನ್ನು 15 ಮಂದಿಯನ್ನು ಪತ್ತೆ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಪಿ.ಎಸ್ ತಮಂಗ್ ಹೇಳಿದ್ದಾರೆ. ಸಿಕ್ಕಿಂ ಪ್ರವಾಹ
ಇದನ್ನೂ ಓದಿ: ಕಮಲ “ದಳವನ್ನು” ನುಂಗುತ್ತಾ? ಜೆಡಿಎಸ್ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಿದೆಯೇ ಬಿಜೆಪಿ?
ಲಾಚೆನ್ ಮತ್ತು ಲಾಚುಂಗ್‌ನಲ್ಲಿ ಸುಮಾರು 3 ಜನರು ಸಿಲುಕಿಕೊಂಡಿದ್ದಾರೆ. ಸೇನೆ ಮತ್ತು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಎಲ್ಲರನ್ನೂ ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ತಿಳಿಸಿದ್ದಾರೆ.
ಸೇನೆ ಮತ್ತು ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ವಿಡಿಯೋ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ