ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ರಾಮನಾಥಪುರಂ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ.ಬಿಜೆಪಿ ಕೇಂದ್ರ ನಾಯಕತ್ವ ಇಂಥದ್ದೊಂದು ನಿರ್ಧಾರ ಕೈಗೊಂಡರೆ ಮೋದಿಯವರು ರಾಮನಾಥಪುರಂನಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ನಾಂಪಲ್ಲಿಯ ಪಕ್ಷದ ಕಚೇರಿಯಲ್ಲಿ ನಡೆದ 11 ರಾಜ್ಯಗಳ ಬಿಜೆಪಿ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪ್ರಾದೇಶಿಕ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ ಎಂದು ಹೇಳಲಾಗಿದೆ. ದಕ್ಷಿಣದಲ್ಲಿ ಪಕ್ಷವನ್ನು ಗಟ್ಟಿಯಾಗಿ ಸ್ಥಾಪಿಸುವ ಉದ್ದೇಶದಿಂದ ದಕ್ಷಿಣ ಭಾರತದ ರಾಜ್ಯವೊಂದರಿಂದ ಮೋದಿ ಅವರನ್ನು ಕಣಕ್ಕಿಳಿಸಲು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿನಿಧಿಗಳ ಅಭಿಪ್ರಾಯ ಕೇಳಿದಾಗ ಬಹುತೇಕರು ನರೇಂದ್ರ ಮೋದಿ ಅವರನ್ನು ರಾಮನಾಥಪುರದಿಂದ ಕಣಕ್ಕಿಳಿಸಲು ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂಓದಿ:ಪ್ರಧಾನಿ ನರೇಂದ್ರ ಮೋದಿಗೆ, ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ 9 ಪ್ರಶ್ನೆಗಳು
ಪ್ರಸ್ತುತ, ಇಂಡಿಯನ್ ಮುಸ್ಲಿಂ ಲೀಗ್ನ ಕೆ ನವಾಸ್ಕಾನಿ ರಾಮನಾಥಪುರಂ ಕ್ಷೇತ್ರದ ಸಂಸದರಾಗಿದ್ದಾರೆ. ರಾಮನಾಥಪುರಂ ಮುಸ್ಲಿಂ ಹಿಂದೂಗಳ ಮತಬ್ಯಾಂಕ್ ಕೂಡ ಇಲ್ಲಿದೆ. ಒಂದು ವೇಳೆ ನರೇಂದ್ರ ಮೋದಿ ಅವರು ಇಲ್ಲಿಂದ ಸ್ಪರ್ಧಿಸಿದರೆ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಹಕಾರಿಯಾಗಲಿದೆ ಎಂಬುವುದು ಪಕ್ಷದ ಲೆಕ್ಕಾಚಾರವಾಗಿದೆ.
ಇದರೊಂದಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 50 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕೆಂದು ಎಂದು ಕಾರ್ಯಕರ್ತರಿಗೆ ಜೆಪಿ ನಡ್ಡಾ ಸಲಹೆ ನೀಡಿದ್ದಾರೆ. ಆಡಳಿತ ವಿರೋಧಿ ಅಂಶದಿಂದಾಗಿ ಉತ್ತರದ ಕೆಲವು ರಾಜ್ಯಗಳಲ್ಲಿ ಪಕ್ಷದ ಸೋಲಿನ ಸಂಭವನೀಯತೆಯನ್ನು ಸಮತೋಲನಗೊಳಿಸುವ ಸಲುವಾಗಿಯೇ ಈ ಸವಾಲು ನೀಡಲಾಗಿದೆ ಎನ್ನಲಾಗಿದೆ.
BJP National President Shri @JPNadda addressed the Regional Consultative Meeting at the State BJP Office in Hyderabad, Telangana. pic.twitter.com/mD5rn6Atib
— BJP (@BJP4India) July 9, 2023
ರಾಮನಾಥಪುರಂ ಮುಸ್ಲಿಂ ಬಾಹುಳ್ಯ ಇರುವ ಕ್ಷೇತ್ರ. ದೊಡ್ಡ ಮಟ್ಟದ ಹಿಂದೂಗಳ ಮತಬ್ಯಾಂಕ್ ಕೂಡ ಇಲ್ಲಿದೆ. ಪ್ರಸ್ತುತ ಇಂಡಿಯನ್ ಮುಸ್ಲೀಂ ಲೀಗ್ನ ಕೆ. ನವಸ್ಕನಿ ಸಂಸದರಾಗಿದ್ದಾರೆ. ವಾರಾಣಸಿಯಂತೆ ರಾಮನಾಥಪುರಂನಲ್ಲೂ ಹಿಂದೂ ಮತಬುಟ್ಟಿ ಮೇಲೆ ಕಣ್ಣಿಟ್ಟು ಮೋದಿ ಅವರನ್ನು ಕಣಕ್ಕಳಿಸಲು ಯೋಜನೆ ರೂಪಿಸಲಾಗುತ್ತಿದೆ. ನರೇಂದ್ರ ಮೋದಿ ಅವರು ಪ್ರಸ್ತುತ ಹಿಂದೂ ಮತಗಳ ಬಾಹುಖ್ಯವಿರುವ ವಾರಾಣಸಿಯನ್ನು ಪ್ರತಿನಿಧಿಸುತ್ತಿದ್ದಾರೆ. ಮುಸ್ಲಿಂ ಮತಗಳು ಗಣನೀಯವಾಗಿರುವ ರಾಮನಾಥಪುರಂನಲ್ಲಿ ನವಸ್ಕನಿ ಅವರನ್ನು ಸೋಲಿಸುವುದು ಮೋದಿಗೆ ಸುಲಭದ ಕೆಲಸವಲ್ಲ.