ಬೆಂಗಳೂರು: 2021ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸರಕಾರ 66 ಸಾಧಕರ ಹೆಸರು ಹಾಗೂ 10 ಸಂಘ ಸಂಸ್ಥೆಗಳಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ಪ್ರಕಟಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 66 ನೇ ಕನ್ನಡ ರಾಜ್ಯೋತ್ಸವಕ್ಕೆ ಈ ಬಾರಿ 66 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಆಯ್ಕೆ ಕಸರತ್ತು ನಡೆದಿದ್ದು, ತಜ್ಞರ ಸಮಿತಿ ಅಂತಿಮಗೊಳಿಸಿದ ಪಟ್ಟಿಯು ಅಂತಿಮ ಒಪ್ಪಿಗೆಗಾಗಿ ಸಿಎಂ ಬೊಮ್ಮಾಯಿ ಅವರಿಗೆ ಸಲ್ಲಿಕೆಯಾಗಿದೆ.
ನವೆಂಬರ್ 1 ರ ಸೋಮವಾರ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು 66 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎನ್ನಲಾಗಿದೆ.
ಸಾಹಿತ್ಯ ಕ್ಷೇತ್ರದಲ್ಲಿ 6 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಚಾಮರಾಜನಗರ ಜಿಲ್ಲೆಯ ಮಹದೇವ ಶಂಕನಪುರ
ಚಿತ್ರದುರ್ಗದ ಪ್ರೊ.ಡಿ.ಟಿ.ರಂಗಸ್ವಾಮಿ
ರಾಯಚೂರಿನ ಜಯಲಕ್ಷ್ಮೀ ಮಂಗಳಮೂರ್ತಿ
ಚಿಕ್ಕಮಗಳೂರಿನ ಅಜ್ಜಂಪುರ ಮಂಜುನಾಥ್
ವಿಜಯಪುರದ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ
ಬಾಗಲಕೋಟೆಯ ಸಿದ್ದಪ್ಪ ಬಿದರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ರಂಗಭೂಮಿ ಕ್ಷೇತ್ರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ
ಹಾವೇರಿಯ ಫಕೀರವ್ವ ರಾಮಪ್ಪ ಕೊಡಾಯಿ
ಚಿಕ್ಕಮಗಳೂರಿನ ಪ್ರಕಾಶ್ ಬೆಳವಾಡಿ
ಬಳ್ಳಾರಿಯ ರಮೇಶ್ ಗೌಡ ಪಾಟೀಲ್
ರಾಮನಗರದ ಎನ್.ಮಲ್ಲೇಶಯ್ಯ
ಗದಗ ಜಿಲ್ಲೆಯ ಸಾವಿತ್ರಿ ಗೌಡರ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.
ಜಾನಪದ ಕ್ಷೇತ್ರದಲ್ಲಿ 7 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ವಿಜಯಪುರ ಜಿಲ್ಲೆಯ ಆರ್.ಬಿ.ನಾಯಕ
ಶಿವಮೊಗ್ಗ ಜಿಲ್ಲೆಯ ಗೌರಮ್ಮ ಹುಚ್ಚಪ್ಪ ಮಾಸ್ತರ್
ಬಳ್ಳಾರಿ ಜಿಲ್ಲೆಯ ದುರ್ಗಪ್ಪ ಚೆನ್ನದಾಸರ
ಉಡುಪಿಯ ಬನ್ನಂಜೆ ಬಾಬು ಅಮೀನ್
ಬಾಗಲಕೋಟೆಯ ಮಲ್ಲಿಕಾರ್ಜುನ ರಾಚಪ್ಪ ಮುದಕವಿ
ಧಾರವಾಡದ ವೆಂಕಪ್ಪ ಗೋವಿಂದಪ್ಪ ಭಜಂತ್ರಿ
ಹಾವೇರಿ ಜಿಲ್ಲೆಯ ಮಹಾರುದ್ರಪ್ಪ ವೀರಪ್ಪ ಇಟಗಿಗೆ ಪ್ರಶಸ್ತಿ ಘೋಷಣೆ ಆಗಿದೆ.
ಸಂಗೀತ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಕೋಲಾರ ಜಿಲ್ಲೆಯ ಸಿ.ತ್ಯಾಗರಾಜು (ನಾದಸ್ವರ) ಹಾಗೂ
ದಕ್ಷಿಣ ಕನ್ನಡ ಜಿಲ್ಲೆಯ ಹೆರಾಲ್ಡ್ ಸಿರಿಲ್ ಡಿಸೋಜಾಗೆ ಪ್ರಶಸ್ತಿ ಘೋಷಿಸಲಾಗಿದೆ.
ಶಿಲ್ಪಕಲಾ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ
ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಜಿ.ಜ್ಞಾನಾನಂದ ಹಾಗೂ
ಕೊಪ್ಪಳ ಜಿಲ್ಲೆಯ ವೆಂಕಣ್ಣ ಚಿತ್ರಗಾರಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ.
ಸಂಕೀರ್ಣ ಕ್ಷೇತ್ರದಲ್ಲಿ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ
ವಿಜಯನಗರ ಜಿಲ್ಲೆಯ ಡಾ.ಬಿ.ಅಂಬಣ್ಣ
ಬಳ್ಳಾರಿ ಜಿಲ್ಲೆಯ ಕ್ಯಾ.ರಾಜಾರಾವ್
ಕೊಪ್ಪಳ ಜಿಲ್ಲೆ ಗಂಗಾವತಿ ಪ್ರಾಣೇಶ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ
ಬೆಂಗಳೂರಿನ ಡಾ.ಹೆಚ್.ಎಸ್.ಸಾವಿತ್ರಿ
ಬೆಂಗಳೂರಿನ ಪ್ರೊ.ಜಿ.ಯು.ಕುಲಕರ್ಣಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಸಮಾಜಸೇವೆ ಕ್ಷೇತ್ರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ
ಬಾಗಲಕೋಟೆಯ ಸೂಲಗಿತ್ತಿ ಯಮುನವ್ವ(ಸಾಲಮಂಟಪಿ)
ಮೈಸೂರು ಜಿಲ್ಲೆಯ ಮದಲಿ ಮಾದಯ್ಯ
ಬೆಂಗಳೂರಿನ ಮುನಿಯಪ್ಪ ದೊಮ್ಮಲೂರು
ಬೆಳಗಾವಿ ಜಿಲ್ಲೆಯ ಬಿ.ಎಲ್.ಪಾಟೀಲ್ ಅಥಣಿ
ಮಂಡ್ಯ ಜಿಲ್ಲೆಯ ಡಾ.ಜೆ.ಎನ್.ರಾಮಕೃಷ್ಣೇಗೌಡಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ 6 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ದಾವಣಗೆರೆ ಜಿಲ್ಲೆಯ ಡಾ.ಸುಲ್ತಾನ್ ಬಿ. ಜಗಳೂರು
ಧಾರವಾಡ ಜಿಲ್ಲೆಯ ಡಾ.ವ್ಯಾಸ ದೇಶಪಾಂಡೆ (ವೇದವ್ಯಾಸ)
ಬೆಂಗಳೂರಿನ ಡಾ.ಎ.ಆರ್.ಪ್ರದೀಪ್ (ದಂತ ವೈದ್ಯಕೀಯ)
ದಕ್ಷಿಣ ಕನ್ನಡ ಜಿಲ್ಲೆಯ ಡಾ.ಸುರೇಶ್ ರಾವ್
ಧಾರವಾಡದ ಡಾ.ಶಿವನಗೌಡ ರಾಮನಗೌಡರ್
ಬೆಂಗಳೂರಿನ ಡಾ.ಸುದರ್ಶನ್ಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಕೊಡಗು ಜಿಲ್ಲೆಯ ರೋಹನ್ ಭೋಪಣ್ಣ
ಬೆಂಗಳೂರಿನ ಕೆ.ಗೋಪಿನಾಥ್ (ವಿಶೇಷ ಚೇತನ)
ಉಡುಪಿ ಜಿಲ್ಲೆಯ ರೋಹಿತ್ ಕುಮಾರ್ ಕಟೀಲು
ಬೆಂಗಳೂರಿನ ಎ.ನಾಗರಾಜು (ಕಬಡ್ಡಿ) ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಸಂಘ ಸಂಸ್ಥೆಗಳು
ಶ್ರೀ ವೀರೇಶ್ವರ ಪುಣ್ಯಾಶ್ರಮ, ಅಂಧ ಮಕ್ಕಳ ಶಾಲೆ , ಗದಗ
ಕರ್ನಾಟಕ ಹಿಮೋಫೀಲಿಯಾ ಸೊಸೈಟಿ , ದಾವಣಗೆರೆ
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಕಲಬುರಗಿ
ಶ್ರೀ ರಾಮಕೃಷ್ಣಾಶ್ರಮ ಮಂಗಳೂರು
ಆಲ್ ಇಂಡಿಯಾ ಜೈನ ಯೂಥ್ ಫೆಡರೇಶನ್ ಹುಬ್ಬಳ್ಳಿ
ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ
ಉತ್ಸವ್ ರಾಕ್ ಗಾರ್ಡೆನ್ ಹಾವೇರಿ
ಅದಮ್ಯ ಚೇತನ ಬೆಂಗಳೂರು
ಸ್ಟೆಪ್ ಒನ್ ಬೆಂಗಳೂರು
ಬನಶಂಕರಿ ಮಹಿಳಾ ಸಮಾಜ ಬೆಂಗಳೂರು